ಟೀಮ್ ನೇಷನ್ ಫಸ್ಟ್ ವತಿಯಿಂದ “ಚಿಣ್ಣರ ನಟ್ಟಿ” ಕಾರ್ಯಕ್ರಮ

ಉಡುಪಿ : ಟೀಮ್ ನೇಷನ್ ಫಸ್ಟ್ (ರಿ) ಇದರ ವತಿಯಿಂದ ಆಯೋಜಿಸಿದ್ದ “ಚಿಣ್ಣರ ನಟ್ಟಿ” ಕಾರ್ಯಕ್ರಮವು ಸಂಕೇಶ ಕಿದಿಯೂರು ಹೊಸ ನೀರಿನ ಟ್ಯಾಂಕ್ ಬಳಿ ಯಶಸ್ವಿಯಾಗಿ ಜರಗಿತು. ಶಾಸಕರಾದ ಯಶ್ಪಾಲ್ ಸುವರ್ಣ, ಮಾಜಿ ಶಾಸಕರಾದ ರಘುಪತಿ ಭಟ್, ಉದ್ಯಮಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗು ಮಲ್ಪೆ ಠಾಣಾಧಿಕಾರಿ ಲೋಹಿತ್ ಕುಮಾರ್ ಪಾಲ್ಗೊಂಡರು.

ಟೀಮ್ ನೇಷನ್ ಫಸ್ಟ್ ಅಧ್ಯಕ್ಷರಾದ ಸೂರಜ್ ಕಿದಿಯೂರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾರು 200 ಶಾಲಾ ಮಕ್ಕಳು, ಸುಮಾರು 150 ಸಾರ್ವಜನಿಕರು ಹಾಗು ಊರಿನವರು ನಟ್ಟಿಯಲ್ಲಿ ಪಾಲ್ಗೊಂಡರು.

ತಂಡದ ಉಪಾಧ್ಯಕ್ಷರಾದ ಡಾ. ಅತುಲ್ ಯು ಆರ್ ಧನ್ಯವಾದ ಅರ್ಪಿಸಿದರು ಹಾಗು ಶ್ರೀಮತಿ ಸುಷ್ಮಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಕ್ಕಳಿಗೆ ಭತ್ತದ ಸಸಿ ನೆಡುವ ಪ್ರಾತ್ಯಕ್ಷಿಕೆ ನೀಡಿ ನಾಟಿ ಮಾಡಿಸಲಾಯಿತು. ವಡಭಾಂಡೇಶ್ವರ ವಾರ್ಡಿನ ಕೌನ್ಸಿಲರ್ ಯೋಗೇಶ್ ಸಾಲಿಯಾನ್, ತಂಡದ ಹಿರಿಯ ಸದಸ್ಯರಾದ ಸಂತೋಷ್ ಕಿದಿಯೂರ್, ಪೂಜಾ ಸೂರಜ್, ಸಾತ್ವಿಕ್ ಗಡಿಯಾರ್, ಅಜಿತ್ ಬನ್ನೂರು ಮುಂತಾದವರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ