ಫಿಲ್ಮ್ ಸೊಭಾಣ್‌ನಲ್ಲಿ ಮಕ್ಕಳ ಚಿತ್ರ ಅಪ್ಸರಧಾರ

ಮಾಂಡ್ ಸೊಭಾಣ್ ಆಯೋಜಿಸಿದ ‘ಫಿಲ್ಮ್ ಸೊಭಾಣ್’ ಕೊಂಕಣಿ ಚಲನ ಚಿತ್ರೋತ್ಸವದಲ್ಲಿ ಕೊಂಕಣಿ ಮಕ್ಕಳಿಗಾಗಿ ಚಲನಚಿತ್ರ ಪ್ರದರ್ಶನ ಆಗಸ್ಟ್ 28‌ರಂದು ಭಾರತ್ ಸಿನೆಮಾಸ್ ಇಲ್ಲಿ ನಡೆಯಿತು.

ಡಾ ಕೆ. ರಮೇಶ್ ಕಾಮತ್ ನಿರ್ದೇಶನದ ಅಪ್ಸರಧಾರ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಿತ್ರದ ಕೆಲಭಾಗಗಳನ್ನು ಈಜಿಪ್ಟ್‌ನಲ್ಲಿ ಚಿತ್ರೀಕರಿಸಿದ್ದು, ತ್ರಿಡಿ ತಾಂತ್ರಿಕತೆ ಉಪಯೋಗಿಸಿದ ಮೊದಲ ಕೊಂಕಣಿ ಚಿತ್ರ ಇದಾಗಿದೆ. ಈ ಸಂದರ್ಭದಲ್ಲಿ ಡಾ ಕಾಮತ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ನವೀನ್ ಲೋಬೊ, ರೊನಿ ಅರುಣ್ ಹಾಗೂ ವಿಕಾಸ್ ಲಸ್ರಾದೊ ಉಪಸ್ಥಿತರಿದ್ದರು. ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾದ ಕುಲಶೇಖರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಚಲನಚಿತ್ರವನ್ನು ವೀಕ್ಷಿಸಿ ಸಂತಸಪಟ್ಟರು.

ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಈ ಚಿತ್ರೋತ್ಸವವು ಆಗಸ್ಟ್ 23 ರಿಂದ ಸೆಪ್ಟೆಂಬರ್ 14 ರವರೆಗೆ ನಡೆಯುತ್ತಿದ್ದು, ಕರ್ನಾಟಕ ಹಾಗೂ ಗೋವಾದ ಸುಮಾರು 25 ಚಲನಚಿತ್ರಗಳು, 5 ಕಿರುಚಿತ್ರಗಳು ಹಾಗೂ 2 ಮಕ್ಕಳ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

Related posts

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು – ಜನಾರ್ದನ್ ಕೊಡವೂರು ​

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್