ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

ಉಡುಪಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.

ರವಿವಾರ ಹಾಗೂ ಸೋಮವಾರ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಮುಂಜಾನೆ ಭಾರೀ ಮಳೆಯ ನಡುವೆಯೇ ಮಕ್ಕಳು ಶಾಲೆಗೆ ತೆರಳಿದ ದೃಶ್ಯಕಂಡು ಬಂತು.

ನಗರದ ಗುಂಡಿಬೈಲು, ದೊಡ್ಡಣಗುಡ್ಡೆ, ಮಠದಬೆಟ್ಟು, ಕರಂಬಳ್ಳಿ ಮೊದಲಾದ ಕಡೆಗಳಲ್ಲಿ ಮಕ್ಕಳು ಶಾಲೆಗೆ ವಿಪರೀತ ತೊಂದರೆ ಅನುಭವಿಸಿದರು.

ನಗರದಲ್ಲಿ ಶಾಲಾ ಬಸ್ಸೊಂದು ಮಳೆಯ ನೀರಿನಲ್ಲಿ ಸಿಲುಕಿಕೊಂಡು ಕೆಲ ನಿಮಿಷ ಟ್ರಾಫಿಕ್‌ ಜಾಮ್‌ ಉಂಟಾಯಿತು. ಮಳೆಯ ನಡುವೆಯೇ ಪೋಷಕರು ಮಕ್ಕಳನ್ನು ಕಷ್ಟದಿಂದ ಶಾಲೆಗೆ ಕಳುಹಿಸಿದ್ದು, ಕೆಲಕಡೆ ಬಸ್‌‌ಗಳು ಸರಿಯಾದ ಸಮಯಕ್ಕೆ ಬಾರದೆ ತೊಂದರೆ ಉಂಟಾಯಿತು.

ಮಳೆಯ ನೆರೆಯಲ್ಲೇ ಕಷ್ಟದಿಂದ ಮಕ್ಕಳು ಶಾಲೆಗೆ ತೆರಳಿದ್ದು, ಪೋಷಕರು ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಮಕ್ಕಳು ನೆರೆಯಲ್ಲಿ ಆತಂಕದಿಂದ ಶಾಲೆಗೆ ತೆರಳಿದ್ದು ಉಡುಪಿ‌ ಸ್ಥಳೀಯಾಡಳಿತ ರಜೆ ಘೋಷಣೆ ಮಾಡದೆ ಇರುವುದರಿಂದ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!