ಚಿಕ್ಕಬಳ್ಳಾಪುರ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಸುರತ್ಕಲ್ : ಹೊಸಬೆಟ್ಟು ಮಾರುತಿನಗರ ಬಳಿಯ ಪ್ರಗತಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಖಾಸಗಿ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ, ಚಿಕ್ಕಬಳ್ಳಾಪುರ ಮೂಲದ ಮೋಹನ್ ಕುಮಾರ್(22) ಬಾಡಿಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಭಾನುವಾರ ಪತ್ತೆಯಾಗಿದೆ.

ಈ ಘಟನೆ ಸೆ.12ರ ಬಳಿಕ ನಡೆದಿರಬೇಕು ಎಂದು ಶಂಕಿಸಲಾಗಿದ್ದು, ವಿದ್ಯಾರ್ಥಿ ಮೊಬೈಲ್ ಕರೆಗೆ ಉತ್ತರಿಸದ ಕಾರಣ, ಮನೆಯವರು ಮನೆ ಮಾಲೀಕರಿಗೆ ಕರೆ ಮಾಡಿ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಜೀವನಲ್ಲಿ ಜುಗುಪ್ಪೆ ಕಾರಣ ಎಂದು ಪ್ರಕರಣ ದಾಖಲಾಗಿದೆ. ಆತ ಓದಿನಲ್ಲಿ ಹಿಂದೆ ಇದ್ದ. ಪ್ರಥಮ ವರ್ಷದ ಸೆಮಿಸ್ಟನರ್‌ನಲ್ಲಿ ಫೇಲಾಗಿದ್ದು ಪರೀಕ್ಷೆಗೆ ಕುಳಿತಿದ್ದ. ಓದಿನಲ್ಲಿ ಹಿಂದೆ ಬಿದ್ದಿರುವುದನ್ನು ಮನೆಯವರಿಗೆ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ