ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ರಥೋತ್ಸವ, ಸಾವಿರಾರು ಭಕ್ತರು ಭಾಗಿ

ಉಡುಪಿ : ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಇದರ ಅಂಗವಾಗಿ ನಡೆದ ಶ್ರೀ ಮಹಾಲಕ್ಷ್ಮೀ ರಥೋತ್ಸವ ಮತ್ತು ಮಹಾಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ದೇಗುಲದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ ಮತ್ತು ಪಲ್ಲಪೂಜೆ ನೆರವೇರಿದವು. ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಮಧ್ಯಾಹ್ನದ ವೇಳೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ ವಿಜೃಂಭಣೆಯಿಂದ ನಡೆಯಿತು. ರಥದಲ್ಲಿ ಅಲಂಕೃತಗೊಂಡಿದ್ದ ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ನೆರೆದಿತ್ತು. ರಥಾರೋಹಣದ ಬಳಿಕ ಭಜನಾ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಭದ್ರಕಾಳಿ ಅಮ್ಮನವರ ದರ್ಶನ, ರಥಕ್ಕೆ ಅಜಕಾಯಿ ಸಮರ್ಪಣೆಯು ನಡೆಯಿತು. ಸಂಜೆ ಶ್ರೀ ಮನ್ಮಹಾರಥೋತ್ಸವ ಮತ್ತು ಉತ್ಸವ ಬಲಿ ಸೇವೆಯು ಸಂಪನ್ನಗೊಂಡಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ