ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಅವ್ಯವಸ್ಥೆ – ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ, ಪರಿಶೀಲನೆ

ಕಾಪು : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಉದ್ದಕ್ಕೂ ಸಂಚರಿಸಿ ಮಳೆಗಾಲದ ಪೂರ್ವಸಿದ್ಧತೆಗಾಗಿ ಕಟಪಾಡಿಯಿಂದ ಹೆಜಮಾಡಿಯವರೆಗೆ ಪರಿಶೀಲನೆ ನಡೆಸಿ ನಡೆಸಿದರು. ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಜಾಗಗಳಿಗೆ ಭೇಟಿ ನೀಡಿ, ಅಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಇರಲು ಕಾರಣಗಳನ್ನು ಪಟ್ಟಿ ಮಾಡಿದರು.

ಈ ಸಂದರ್ಭ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ತಹಶಿಲ್ದಾರ್‌ರಿಗೆ ಸಾಥ್ ನೀಡಿ, ಹೆದ್ದಾರಿ ಸಮಸ್ಯೆಯ ಬಗ್ಗೆ ವಿವರ ನೀಡಿದರು. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿರುವುದರ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡರು.

ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳನ್ನು ಅಗಲಗೊಳಿಸುವುದು ಮತ್ತು ಚರಂಡಿ ನಿರ್ಮಿಸುವುದು. ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದು ಮತ್ತು ಎನ್ ಹೆಚ್ ಪಕ್ಕದ ಚರಂಡಿಯನ್ನು ಅಗಲೀಕರಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸ ಬೇಕಿದೆ.

ಈ ಸಂಬಂಧ ತಹಶೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಸ್ಥಳೀಯ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ