ಶ್ರೀಕೃಷ್ಣಮಠಕ್ಕೆ ದಿಗ್ಗಜ ನಟರ ಭೇಟಿ – ಜೂನಿಯರ್ ಎನ್‌ಟಿ‌ಆರ್, ಕಾಂತಾರ ರಿಷಭ್ ರಿಂದ ದೇವರ ದರ್ಶನ

ಉಡುಪಿ : ಉಡುಪಿಗೆ ಇವತ್ತು ಸ್ಟಾರ್ ನಟರಾದ ಜೂನಿಯರ್ ಎನ್‌ಟಿ‌ಆರ್ ಮತ್ತು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಆಗಮಿಸಿದ್ದಾರೆ. ಜೊತೆಯಾಗಿ ಆಗಮಿಸಿದ ಈ ನಟರು ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಇವರಿಗೆ ಸೆಲೆಬ್ರಿಟಿ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿದ್ದಾರೆ.

ಸ್ಟಾರ್ ನಟರು ಮತ್ತು ನಿರ್ದೇಶಕರು ಜೊತೆಯಾಗಿಯೇ ಶ್ರೀಕೃಷ್ಣಮುಖ್ಯಪ್ರಾಣರ ದರ್ಶನ ಮಾಡಿದರು. ಶ್ರೀ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಕೈಗೊಂಡ ನಟರು ಬಳಿಕ ಪರ್ಯಾಯ ಶ್ರೀಗಳನ್ನು ಭೇಟಿ ಮಾಡಿದರು. ಈ ಸಂದರ್ಭ ಮಠದ ವತಿಯಿಂದ ಆತ್ಮೀಯವಾಗಿ ಗೌರವ ಸಲ್ಲಿಸಲಾಯಿತು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ