ಕೋಟ ಕಾಶೀಮಠದಲ್ಲಿ ಸಂಭ್ರಮದ ವಿಟ್ಲಪಿಂಡಿ ಮಹೋತ್ಸವ ಸಂಪನ್ನ

ಕೋಟ : ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮುದಾಯ ಬಾಂಧವರು ಬಣ್ಣ ಬಣ್ಣದ ನೀರಿನೊಂದಿಗೆ ಒಕುಳಿಯಾಟ ನಡೆಸಿದರು. ಸಮುದಾಯ ಮಹಿಳೆಯರು ಭಜನೆ ನೃತ್ಯದ ಮೂಲಕ ಶ್ರೀದೇವರ ಆರಾಧನೆ ಮಾಡಿದರು.

ಪೂರ್ಣಪ್ರಮಾಣದಲ್ಲಿ ಕೋಟ ಪೇಟೆಯಲ್ಲಿ ಸಮುದಾಯದ ಬಾಂಧವರು ಬಣ್ಣದ ನೀರನ್ನು ಪಾತ್ರೆಯಲ್ಲಿ ತುಂಬಿಸಿ ಭಜನೆ ನಿರತರಿಗೆ ಎರೆಯುವ ದೃಶ್ಯ ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆಯಿತು.

ಕೋಟ ಕಾಶಿಮಠದಿಂದ ಆರಂಭಗೊಂಡ ಒಕುಳಿ ಮೆರವಣಿಗೆ ಇಡೀ ಪೇಟೆಯಲ್ಲಿ ಮೇಲೈಸಿಕೊಂಡು ವರುಣ ತೀರ್ಥ ಕೆರೆಯಲ್ಲಿ ಸಂಪನ್ನಗೊಳಿಸಿಕೊಂಡರು.

ಶ್ರೀ ಮಠದ ಆಡಳಿತ ಮಂಡಳಿ, ಅರ್ಚಕ ವೃಂದ ಭಕ್ತಾಧಿಗಳು ಇದರಲ್ಲಿ ಭಾಗಿಯಾದರು. ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ