ಬಂಟ್ವಾಳದಲ್ಲಿ ವಿಶಿಷ್ಟ ರೀತಿಯಲ್ಲಿ ಹುಟ್ಟು ಹಬ್ಬದ ಸಂಭ್ರಮ; ಸುರಭಿ ವೈಷ್ಣವಿ ಗೋ ಮಂದಿರದಲ್ಲಿ ಆಚರಣೆ

ಬಂಟ್ವಾಳ : ಈಗಿನ ಕಾಲಘಟ್ಟದಲ್ಲಿ ಹುಟ್ಟುಹಬ್ಬದ ದಿನವನ್ನು ಪಾಶ್ಚಾತ್ಯ ರೀತಿಯಲ್ಲಿ ಆಚರಿಸುತ್ತಿರುವವರ ಮಧ್ಯೆ ವಿಶೇಷವಾಗಿ ಗೋಶಾಲೆ (ಗೋಮಂದಿರ)ದಲ್ಲಿ ಮಗುವಿನ ಹುಟ್ಟು ಹಬ್ಬವನ್ನು ಆಚರಿಸಿ ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳ ಪುತ್ರ ಶಿವಾಂಶ್ ಇವರ ಎರಡನೇ ವರ್ಷದ ಜನ್ಮದಿನಚರಣೆಯನ್ನು 22-08-2024 ರಂದು ಬೆಂಜನಪದವು ರಾಮನಗರದಲ್ಲಿರುವ ಸುರಭಿ ವೈಷ್ಣವಿ ಗೋ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸತ್ಸಂಗ, ದೇಶಿಗೋವುದಾನ, ಗೋವುಗಳಿಗೆ ಆರತಿ ಬೆಳಗಿ ಅವಲಕ್ಕಿ, ಬೆಲ್ಲ, ಫಲವಸ್ತು ಸಮರ್ಪಿಸಿ ಗೋಪೂಜೆ ಮಾಡಿ ಅನ್ನದಾನ ನೀಡಿ ಆರಾಧಿಸುವ ಮೂಲಕ ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಹಿಂದೂ ಸಮಾಜಕ್ಕೆ ಮಾದರಿಯಾದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಕನ್ನಡ ಚಿತ್ರನಟರಿಂದ ಶ್ರೀಕೃಷ್ಣ ದರ್ಶನ – ಕೋಟಿಗೀತಾಲೇಖನ ಯಜ್ಞ ದೀಕ್ಷೆ