ಸಾವಿರಾರು ರೂ. ಚಾಕಲೇಟ್ ಕದ್ದೊಯ್ದ ಚಾಕಲೇಟ್ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ದಾಖಲು!

ಮಣಿಪಾಲ : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು 20 ಸಾವಿರ ರೂ. ನಗದು ಹಾಗೂ ಚಾಕಲೇಟ್‌ಗಳನ್ನು ಕಳವು ಮಾಡಿದ ಘಟನೆ ತಡರಾತ್ರಿ ನಡೆದಿದೆ.

ಇಬ್ಬರು ಕಳ್ಳರ ಈ ಕರಾಮತ್ತು ಅಂಗಡಿಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಕ್ಯಾಶ್ ಕೌಂಟರ್‌ನಲ್ಲಿರಿಸಿದ್ದ 20 ಸಾವಿರ ರೂ. ನಗದು ಕಳವುಗೈದ ಕಳ್ಳರು ಅನಂತರ ಚಾಕಲೇಟ್‌ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಅವರಿಗೆ ಬೇಕಿದ್ದ ಬ್ರಷ್ ಸಹಿತ ಕೆಲವೊಂದು ವಸ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಮಲ್ಪೆ ಆದಿ ಉಡುಪಿ ಹೆದ್ದಾರಿ ಕಾಮಗಾರಿ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಮಂಗಳೂರಿನಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೇರಳದಿಂದ ಕೊಲ್ಲೂರಿಗೆ ಹೊರಟಿದ್ದ ಟಿಟಿ ವಾಹನ ಪಲ್ಟಿ – ಹಲವರಿಗೆ ಗಾಯ