ಕಾಲಿಪ್ಲವರ್ ಪ್ರೇಮಿಗಳೇ ಎಚ್ಚರ : ಪಡುಬಿದ್ರೆಯಲ್ಲಿ ಖರೀದಿಸಿದ ಕಾಲಿಫ್ಲವರ್‌ನಲ್ಲಿ ಆಶ್ರಯ ಪಡೆದಿದ್ದ ಹೆಬ್ಬಾವಿನ ಮರಿ

ಪಡುಬಿದ್ರಿ : ಪೇಟೆಯ ಹಣ್ಣು ಹಂಪಲು ಅಂಗಡಿಯೊಂದರಲ್ಲಿ ಇಲ್ಲಿನ ಬೇಂಗ್ರೆ ನಿವಾಸಿಯೊರ್ವರು ಖರೀದಿ ಮಾಡಿದ್ದ ಕಾಲಿಪ್ಲವರ್‌ನಲ್ಲಿ ಹೆಬ್ಬಾವಿನ ಮರಿಯೊಂದು ಪ್ರತ್ಯಕ್ಷವಾಗಿದೆ.

ಪಡುಬಿದ್ರಿ ಬೇಂಗ್ರೆ ನಿವಾಸಿ ಮಹಿಳೆಯೊರ್ವರು ಪಡುಬಿದ್ರಿ ಮುಖ್ಯ ಪೇಟೆಯ ಹಣ್ಣು ಹಂಪಲು ಅಂಗಡಿಯಲ್ಲಿ ಕಾಲಿಪ್ಲವರ್ ಖರೀದಿಸಿ ಮನೆಗೆ ಹೋದವರೇ ನೇರವಾಗಿ ಅದನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದರು, ಮರುದಿನ ಅದನ್ನು ಊಪಯೋಗಿಸುವುದಕ್ಕಾಗಿ ಫ್ರಿಡ್ಜ್‌ನಿಂದ ಹೊರ ತೆಗೆದು ಕತ್ತರಿಸಲು ಮುಂದಾದಾಗ ಆ ಮಹಿಳೆಗೆ ಆತಂಕ ಕಾದಿತ್ತು,

ಕಾಲಿಪ್ಲವರ್ ಒಳಭಾಗದಿಂದ ಹೆಬ್ಬಾವಿನ ಮರಿಯೊಂದು ಹೊರ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದು ಮಹಿಳೆ ಗಾಬರಿಗೊಂಡು ಮನೆಮಂದಿಗೆ ತಿಳಿಸಿದ್ದಾರೆ.

ಹೆಬ್ಬಾವಿನಂತೆ ಇದರಲ್ಲಿ ವಿಷಜಂತುಗಳು ಆಶ್ರಯ ಪಡೆದು, ಖರೀದಿ ಮಾಡಿದ ಮಂದಿ ಮನೆಯ ಕೋಣೆಯೊಳಗಿಟ್ಟು, ಬಳಿಕ ಅದರಿಂದ ಹೊರ ಬರುವ ವಿಷಜಂತುಗಳು ಮಂದಿಯ ಮೇಲೆ ದಾಳಿ ನಡೆಸಿದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಸಾರ್ವಜನಿಕರು ಇಂಥವುಗಳನ್ನಹ ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕೆನ್ನುತ್ತಾರೆ ಮನೆಮಂದಿ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು