Udupi

ಅಪರಿಚಿತ ವ್ಯಕ್ತಿ ಮೃತ್ಯು : ಸಂಬಂಧಿಕರಿಗೆ ಸೂಚನೆ

ಉಡುಪಿ : ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಸನಿಹದ ಸರಕಾರಿ ಜಾಗದಲ್ಲಿರುವ, ಪಾಳುಬಿದ್ದ ಶೆಡ್ಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ, ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ರೋಗಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಧೃಡಿಕರಿಸಿದರು. ‌‌‌ಮೃತ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ…

Read more

6 ಲಕ್ಷ RTGS ಮಾಡಿಸಿಕೊಂಡು, ಚಿನ್ನ ಖರೀದಿ ಸಂಸ್ಥೆಗೆ ವಂಚನೆ…!

ಉಡುಪಿ : ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ. ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆಯ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಡ್ & ಡೈಮಂಡ್‌ ಫೈನಾನ್ಸ್‌‌ನಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ.…

Read more

ವೃದ್ಧಾಶ್ರಮಗಳಲ್ಲಿ ಸುಮಾರು 15 ವರ್ಷಗಳನ್ನು ಕಳೆದ ಬಳಿಕ ಮಹಾರಾಷ್ಟ್ರದ ತನ್ನ ಮನೆ ಸೇರಿದ ಮಹಿಳೆ

ಉಡುಪಿ : ಉಡುಪಿ ಜಿಲ್ಲೆಯ ವೃದ್ಧಾಶ್ರಮಗಳಲ್ಲಿ ಸುಮಾರು 15 ವರ್ಷಗಳನ್ನು ಕಳೆದ ಮಂಜುಳಾ ಎಂಬ ಮಹಿಳೆ ಅಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯಿಂದ ಪೂರ್ಣ ಗುಣಮುಖರಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಕುಡಾಲ್‌ನ ತನ್ನ ಮನೆಗೆ ಕಳೆದ ತಿಂಗಳು ಮರಳಿದ್ದಾರೆ. ಮಂಜುಳಾ 2019ರ ಮಾರ್ಚ್…

Read more

ಕೊಡಂಕೂರು ವಾರ್ಡ್ ₹2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ಉಡುಪಿ : ಉಡುಪಿ ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ ಇಂದ್ರಾಣಿ ನದಿಗೆ ನೂತನ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.…

Read more

ಬೋಟ್‌ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದ ಮೀನು ಕಳ್ಳರು – ಓರ್ವನಿಗೆ ಧರ್ಮದೇಟು.. ಇಬ್ಬರು ಪರಾರಿ..

ಮಲ್ಪೆ : ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಮೀನು ತುಂಬಿರುವ ಬೋಟ್‌ನಲ್ಲಿ ಕಳ್ಳರು ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನನ್ನು ಎಗರಿಸಲು ಮುಂದಾಗಿದ್ದ ವೇಳೆ ಬೋಟ್‌ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ…

Read more

ಹಿರಿಯ ಸಹಕಾರಿ ಧುರೀಣ ಅಣ್ಣಾಜಿ ನಿಧನ

ಉಡುಪಿ: ಹಿರಿಯ ಸಹಕಾರಿ ಧುರೀಣ ,ಸೂರಾಲು ಮಡಿ ನಿವಾಸಿ ಠಸೆ ವೆಂಡರ್‌ ಅಣ್ಣಾಜಿ (89) ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಸಮೀಪ ವಾಸವಿದ್ದು, ತದನಂತರದಲ್ಲಿ ಇಂದ್ರಾಳಿಯಲ್ಲಿ ನೆಲೆಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ…

Read more

ಮಹಾತ್ಮಾಗಾಂಧಿ ರಾಷ್ಟ್ರಪಿತ ಅಲ್ಲ ಎಂದ ಮೀನಾಕ್ಷಿ ಶೆಹ್ರಾವತ್‌ ವಿರುದ್ಧ ಸುಮೊಟೋ ಕೇಸ್

ಉಡುಪಿ : ಉಡುಪಿಯ ಪಿಪಿಸಿ ಆಡೋಟೋರಿಯಂನಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಡೆಹ್ರಾಡೂನ್‌ನ ಭಾಷಣಕಾರ್ತಿ, ಚಿಂತಕಿ ಮೀನಾಕ್ಷಿ ಶೆಹ್ರಾವತ್‌ ಸೇರಿದಂತೆ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಮೀನಾಕ್ಷಿ ಶೆಹ್ರಾವತ್‌…

Read more

ಪಿ.ಎಂ ಸೂರ್ಯ ಘರ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ – ಸಂಸದ ಕೋಟ

ಉಡುಪಿ : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ, ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, 4447 ಮಂದಿ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. 827 ಫಲಾನುಭವಿಗಳನ್ನು ಸರಬರಾಜು ಕಂಪನಿ ಆಯ್ಕೆ ಮಾಡಿಕೊಂಡಿದ್ದು, 378 ಮಂದಿಗೆ ಅವರ ಮನೆಯ…

Read more

ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ 64.68 ಲಕ್ಷ ರೂ. ಮೌಲ್ಯದ ಉಚಿತ ಸಾಧನ ಸಲಕರಣೆ ವಿತರಣೆ

ಉಡುಪಿ : ಜಿಲ್ಲಾಡಳಿತ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಅಲಿಂಕೋ ಸಂಸ್ಥೆ ವತಿಯಿಂದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ…

Read more

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ

ಉಡುಪಿ : ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಅಭಿಯಂತರರಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ…

Read more