Kundapura

ಕೋಟದಲ್ಲಿ ಎರಡು ದಿನಗಳ ಯಕ್ಷ ತ್ರಿವಳಿ ಮಕ್ಕಳ ಯಕ್ಷೋತ್ಸವ ಉದ್ಘಾಟನೆ

ಉಡುಪಿ : ಯಕ್ಷಗಾನ ಕಲೆಯ ಬೆಳವಣಿಗೆಗೆ ವಿವಿಧ ಕಾರ್ಯಾಗಾರಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವ ಯಕ್ಷಗಾನ ಅಕಾಡೆಮಿ ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.…

Read more

ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಕುಂದಾಪುರ : ಷೇರು ಮಾರುಕಟ್ಟೆಯಲ್ಲಿ ಷೇರು ಕುರಿತು ಸಲಹೆ ನೀಡುವುದಾಗಿ ಹೇಳಿ Skironn Technologies ಕಂಪನಿಯು 74,000 ರೂಪಾಯಿ ಹಣವನ್ನು ವಂಚಿಸಿರುವುದಾಗಿ ಆರೋಪಿಸಿ ವಿಘ್ನೇಶ್‌ ಎಂಬವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಷೇರು ವಹಿವಾಟು ಕುರಿತು ಮಾಹಿತಿ ನೀಡುವುದಾಗಿ ಇನ್ಸ್ಟಾಗ್ರಾಮ್‌‌ನಲ್ಲಿ…

Read more

“ಯಕ್ಷಗಾನ ಕಲಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ” ಸಾಲಿಗ್ರಾಮದಲ್ಲಿ ಯಕ್ಷಗಾನ ನೃತ್ಯ ಅಭಿನಯ ತರಬೇತಿ ಶಿಬಿರ ಉದ್ಘಾಟಿಸಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನವುಂಟಾಗುವುದಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಯಕ್ಷಗಾನ ಕೇಂದ್ರ…

Read more

ಕೋಟದಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕೋಟ : ಬೈಕೊಂದು ಡಿಕ್ಕಿ ಹೊಡೆದು ಪಾದಚಾರಿಯೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಪೆಟ್ರೋಲ್ ಬಂಕ್ ಸಮೀಪದ ಬೊಬ್ಬರ್ಯ ಕಟ್ಟೆ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಕೋಟ ಕಾರ್ತಟ್ಟು ಚಂದ್ರಶೇಖರ ಶೆಟ್ಟಿ(62) ಎಂದು ಗುರುತಿಸಲಾಗಿದೆ. ಸಾಲಿಗ್ರಾಮದಿಂದ…

Read more

ಕಿರಾಣಿ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ.ನಷ್ಟ

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ಬುಧವಾರ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಚಂದ್ರಶೇಖರ್ ಎಂಬವರಿಗೆ ಸೇರಿದ ಅಂಗಡಿಯಾಗಿದೆ. ಮಾಲಕರು ಬೆಳಿಗ್ಗೆ ಅಂಗಡಿಯ ಬಾಗಿಲನ್ನು ತೆರೆದು ದೇವರಿಗೆ ದೀಪ ಹಚ್ಚಿ ಹತ್ತಿರದ ಶ್ರೀ ಮೈಲಾರೇಶ್ವರ ದೇವಸ್ಥಾನಕ್ಕೆ…

Read more

ಪಾರಂಪಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮೇಲ್ದರ್ಜೆಗೆ ವಿರೋಧ, ಹೋರಾಟದ ಎಚ್ಚರಿಕೆ

ಕೋಟ : ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪಾರಂಪಳ್ಳಿಯಲ್ಲಿ 1.89 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿದ್ದು ಇದರಿಂದ ಈ ಭಾಗದ ರೈತರಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಲಿದೆ ಎಂದು ಸ್ಥಳೀಯ ಹೋರಾಟಗಾರ ಮಹೇಶ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ…

Read more

ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಆರಿಸಲು ಹೋದ ಕೃಷಿಕ ಸಜೀವ ದಹನ

ಉಡುಪಿ : ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಸುತ್ತೆಲ್ಲಾ ಹಬ್ಬುತ್ತಿರುವ ವೇಳೆ ಅದನ್ನು ಆರಿಸಲು ಹೋದ ಕೃಷಿಕರೋರ್ವರು ಗದ್ದೆಯಲ್ಲೇ ಸಜೀವ ದಹನವಾದ ದಾರುಣ ಘಟನೆ ಎ. 5ರಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಗೆ…

Read more

ಕೊಂಕಣ ರೈಲ್ವೇ ಟ್ರ್ಯಾಕ್‌ಮೆನ್ ಮೇಲಿನಿಂದ ಬಿದ್ದು ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಸಿದ್ಧತೆ

ಕುಂದಾಪುರ : ಕೊಂಕಣ ರೈಲ್ವೇ ಇಲಾಖೆಯ ಸಿಬ್ಬಂದಿ, ಟ್ರ್ಯಾಕ್‌ಮೇನ್‌ ಹೈಟ್‌ಗೇಜ್‌ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಬ್ರೈನ್‌ಡೆಡ್ ಆದ ಘಟನೆ ಸೋಮವಾರ ಮಧ್ಯಾಹ್ನ ಕುಂದಾಪುರ ರೈಲ್ವೇ ಸ್ಟೇಷನ್‌ನಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಬಿಜೂರು ನಿವಾಸಿ ಆನಂದನ್…

Read more

ಕುಂದಾಪುರ ಉಪವಿಭಾಗಾಧಿಕಾರಿಯಾಗಿ ರಶ್ಮಿ ಎಸ್.ಆ‌ರ್

ಉಡುಪಿ : ಕುಂದಾಪುರ ಉಪವಿಭಾಗಾಧಿಕಾರಿಯಾಗಿ ರಶ್ಮಿ ಎಸ್. ಆ‌ರ್. ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ರಶ್ಮಿ ಅವರು 2014ನೇ ಬ್ಯಾಚ್ ಕೆ.ಎ.ಎಸ್ ಅಧಿಕಾರಿ. 2017ರಲ್ಲಿ ದ.ಕ ಜಿಲ್ಲೆಯಲ್ಲಿ ಪ್ರೊಬೇಷನರಿ ಮುಗಿಸಿ, 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. 2022ರಲ್ಲಿ ದಕ್ಷಿಣ…

Read more

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

ಉಡುಪಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಯಾಗಿರುವ ಮತ್ತು ಆರ್.ಎಸ್.ಎಸ್ ಕಾರ್ಯಕರ್ತನಾಗಿರುವ ಸುಶಾಂತ್, ಪೂರ್ಣಪ್ರಜ್ಞಾ ಸಂಜೆ ಕಾಲೇಜಿನ ಪದವೀಧರನಾಗಿದ್ದು, ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷರಾಗಿ ಉಡುಪಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024 ಡಿಸೆಂಬರ್ 22ರಂದು, ವಿಶ್ವಪ್ರಸಿದ್ಧ ಉಡುಪಿ ಕೃಷ್ಣ ಮಠದ ಪುತ್ತಿಗೆ ಪರ್ಯಾಯ ಶ್ರೀ…

Read more