Karkala

ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶ : ಆದಿ ಉಡುಪಿಯ ವ್ಯಕ್ತಿ ಕಾರವಾರದಲ್ಲಿ ಅರೆಸ್ಟ್

ಉಡುಪಿ : ಕಾರ್ಕಳದ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಬಕಾರಿ ಪೊಲೀಸರು ಇಂದು ಕಾರವಾರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಂಧಿತನನ್ನು ಆದಿಉಡುಪಿಯ ಪ್ರಶಾಂತ್…

Read more

ಕಸದಲ್ಲಿ ಸಿಕ್ಕಿದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು !

ಕಾರ್ಕಳ : ಕಾರ್ಕಳ ತಾಲೂಕಿನ ಮಿಯಾರು ಗ್ರಾಮ ಪಂಚಾಯತ್‌ನ ಎಸ್.ಎಲ್.ಆರ್.ಎಂ ಸ್ವಚ್ಛತಾ ವಾಹನ ಸಿಬಂದಿಗಳು ಕಸದಲ್ಲಿ ಸಿಕ್ಕಿದ 25 ಗ್ರಾಂ ಚಿನ್ನದ ಸರ ಮತ್ತು ಹಣ ಮರಳಿಸಿ ಪ್ರಾಮಾಣಿಕತೆ ಮೆರೆದು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಿಯಾರು ಗ್ರಾಮದ ಬೋರ್ಕಟ್ಟೆ ವ್ಯಾಪ್ತಿಯಲ್ಲಿ ಒಣಕಸ…

Read more

ನವವಿವಾಹಿತೆಗೆ ಕಿರುಕುಳ; ಪತಿಯ ಮನೆಯವರ ವಿರುದ್ಧ ದೂರು ದಾಖಲು

ಪಡುಬಿದ್ರಿ : ನವವಿವಾಹಿತೆ ಮೂಳೂರಿನ ಅಫಂತ್‌(25) ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು ಮನೆ ಬಿಟ್ಟು ತೆರಳುವಂತೆ ಹೀನಾಯವಾಗಿ ವರ್ತಿಸಿದ ಪತಿಯ ಮನೆಯವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾವ ಇಬ್ರಾಹಿಂ, ಅತ್ತೆ ನಫೀಸಾ, ಬಾವ ಮಹಮ್ಮದ್‌ ಶಂಶೀರ್‌, ಅತ್ತಿಗೆ…

Read more

ಅಣ್ಣನ ಉತ್ತರ ಕ್ರಿಯೆಯ ಸಿದ್ಧತೆ – ವಿದ್ಯುತ್‌ ಪ್ರವಹಿಸಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ತಂಗಿ ಸಾವು

ಕಾರ್ಕಳ : ಅಣ್ಣನ ಉತ್ತರ ಕ್ರಿಯೆ ಸಿದ್ಧತೆ ವೇಳೆ ವಿದ್ಯುತ್‌ ಪ್ರವಹಿಸುತ್ತಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ತಂಗಿ ಸಾವಿಗೀಡಾದ ದಾರುಣ ಘಟನೆ ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ರಾಘು ಬೋಂಟ್ರ ಎಂಬವರು ನವೆಂಬರ್ 3ರಂದು ನಿಧನರಾಗಿದ್ದು, ಮೃತರ ಸದ್ಗತಿಗಾಗಿ…

Read more

ಪತಿಯ ಅಗಲಿಕೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

ಕಾರ್ಕಳ : ತಿಂಗಳ ಹಿಂದೆ ಪತಿಯ ಸಾವಿನ ಪ್ರಕರಣದಿಂದ ಮಾನಸಿಕವಾಗಿ ನೊಂದಿದ್ದ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಮಿಯ್ಯಾರು ಸಮೀಪ ಸಂಭವಿಸಿದೆ. ಮಿಯ್ಯಾರು ಕುಂಟಿಬೈಲು ಮಂಜಡ್ಕ ನಿವಾಸಿ ಸೌಮ್ಯ (39) ಆತ್ಮಹತ್ಯೆಗೆ ಶರಣಾದವರು. ಕಳೆದ 15 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಪರಿಸರದಲ್ಲಿ…

Read more

ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯ ವಶ

ಕಾರ್ಕಳ : ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್‌ಗಳು…

Read more

ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸಲು ಕಾಂಗ್ರೆಸಿಗರಿಂದ ಅಡ್ಡಗಾಲು – ಸುನಿಲ್ ಕುಮಾರ್ ಆರೋಪ

ಉಡುಪಿ : ಸರಕಾರಿ ಕಾಮಗಾರಿ ಪೂರ್ಣಗೊಂಡು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಗೊಳ್ಳುವ ಮೊದಲೇ ತನಿಖೆಗೆ ಒಪ್ಪಿಸಿರುವುದು ಪರಶುರಾಮ ಥೀಮ್‌ ಪಾರ್ಕ್‌ ಪ್ರಕರಣ ಮಾತ್ರ. ಕಾಂಗ್ರೆಸ್‌ ಕಚೇರಿಯಲ್ಲಿ ಸೃಷ್ಟಿಯಾಗಿರುವ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ವಿರೋಧಿಸುವ ಕಾಂಗ್ರೆಸ್‌…

Read more

ಗ್ರಾಮ ಪಂಚಾಯತ್ ಉಪಚುನಾವಣೆ; ನಿಷೇಧಾಜ್ಞೆ ಜಾರಿ

ಉಡುಪಿ : ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಉಪ ಚುನಾವಣೆಗೆ ಸಂಬಧಿಸಿದಂತೆ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಮುಂತಾದ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ,…

Read more

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರಕರಣ : ಶಿಲ್ಪಿ ಕೃಷ್ಣ ನಾಯ್ಕ್ ಬಂಧನವಾಗಿದೆ.. ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ

ಉಡುಪಿ : ಬೈಲೂರು ಉಮಿಕಲ್‌ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದ ಹಿಂದಿನ ಅಕ್ರಮ ವಿಳಂಬವಾಗಿ ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ಈಗಾಗಲೇ ಬಂಧನಕ್ಕೊಳಗಾಗಿದ್ದು, ಉಳಿದ ಆರೋಪಿಗಳನ್ನು ಪೊಲೀಸರು ತತ್‌ಕ್ಷಣವೇ ಬಂಧಿಸಬೇಕು…

Read more

ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಕಣ್ಮನ ಸೆಳೆದ ವಿಶ್ವರೂಪ ದರ್ಶನ

ಕಾರ್ಕಳ : ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ನಸುಕಿನ ವೇಳೆಯಲ್ಲಿ ನಡೆದ ವಿಶ್ವರೂಪ ದರ್ಶನ ನೆರೆದ ಅಸಂಖ್ಯಾತ ಭಕ್ತರ ಕಣ್ಮನ ಸೆಳೆಯಿತು. ದೇವಸ್ಥಾನದ ಒಳ ಹಾಗೂ ಹೊರ ಭಾಗಗಳಲ್ಲಿ ಬೆಳಗಿಸಿದ ಸಾವಿರಾರು ಹಣತೆಗಳ ಬೆಳಕಿನಲ್ಲಿ ದೇವಾಲಯದ ಸೊಬಗು ಇಮ್ಮಡಿಗೊಂಡಿತ್ತು. ಆ…

Read more