Udupi

37 ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ಆಶಯ ಪತ್ರ ವಿತರಣೆ : ಸಿಇಓ ಬಾಯಲ್

ಉಡುಪಿ : ಜಿಲ್ಲೆಯ ಹಳ್ಳ ತೊರೆ ಮತ್ತು ಕೆರೆಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸುವ ಕುರಿತು ಈಗಾಗಲೇ ಆಶಯ ಪತ್ರ ನೀಡಲಾಗಿದೆ. ಇನ್ನುಳಿದ ಕೆಲವು ಪ್ರದೇಶಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೂಳೆತ್ತುವ ಸಂಬಂಧ ಕ್ರಮ…

Read more

ಮಣಿಪಾದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ಎಂಡೋಸ್ಕೋಪಿಕ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು – ಗಮನಾರ್ಹ ಫಲಿತಾಂಶದೊಂದಿಗೆ ತ್ವರಿತ ರೋಗಿಯ ಬಿಡುಗಡೆ

ಮಣಿಪಾಲ : ತೀವ್ರ ಬೆನ್ನು ನೋವು ಮತ್ತು ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದ 34 ವರ್ಷದ ವ್ಯಕ್ತಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿಯಾಗಿ ಅಪರೂಪದ ಬೆನ್ನುಮೂಳೆಯ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ರೋಗಿಗೆ ಎಂ‌ಆರ್‌ಐ ಸ್ಕ್ಯಾನ್ ಮಾಡಿದಾಗ…

Read more

ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕುಂದಾಪುರ : ಆನಗಳ್ಳಿ ಗ್ರಾಮದ ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಸುಮಾರು 65-70 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತರ ವಾರಸುದಾರರು ಪತ್ತೆಯಾಗದ ಹಿನ್ನೆಲೆ ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಈ ವ್ಯಕ್ತಿಯು…

Read more

ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದೇ ಇದ್ದಲ್ಲಿ ಎ. 29 ರಂದು ಉಗ್ರ ಪ್ರತಿಭಟನೆ : ಅಲ್ವಿನ್ ಅಂದ್ರಾದೆ

ಬ್ರಹ್ಮಾವರ : ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದೇ ಇದ್ದಲ್ಲಿ ಎಪ್ರಿಲ್ 29‌ರಂದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಫ್ಲೈ‌ಓವರ್ ಹೋರಾಟ ಸಮಿತಿಯ ಅಲ್ವಿನ್ ಅಂದ್ರಾದೆ ಅವರು ಬ್ರಹ್ಮಾವರದ ಗಜಾನನ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಎಸ್.ಎಮ್.ಎಸ್ ಮುಂಭಾಗ ಅಮಾಯಕ ವಿದ್ಯಾರ್ಥಿ…

Read more

ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು

ಕುಂದಾಪುರ : ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಕೋಟೇಶ್ವರದ ನಾಗಬನ ಕಟ್ಟೆ ಸಮೀಪದ ರಸ್ತೆಯಲ್ಲಿ ಎಪ್ರಿಲ್ 23ರ ಬೆಳಗ್ಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಕರ್ಕುಂಜೆ ಗ್ರಾಮದ ನೆಂಪು ಸರ್ಕಲ್‌ ಬಳಿಯ ನಿವಾಸಿ ಅರುಣ್‌ (34)…

Read more

ಕಾಶ್ಮೀರದಲ್ಲಿ ಮಿಂಚಿದ ಉಡುಪಿಯ ಪ್ರತಿಭೆ: ಸುಮಂತ್ ಪೂಜಾರಿಗೆ ಕಂಚಿನ ಪದಕ

ಉಡುಪಿ : ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಅಂತರ ವಿಶ್ವವಿದ್ಯಾಲಯಗಳ ಅಖಿಲ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2024-25‌ರಲ್ಲಿ ಉಡುಪಿ ಜಿಲ್ಲೆಗೆ ಕೀರ್ತಿ ತರುವಂತಹ ಸಾಧನೆ ಮೂಡಿಬಂದಿದೆ. ಉಡುಪಿ ತಾಲೂಕಿನ ಗುಂಡ್ಮಿ (ಮಾಣಿಕಟ್ಟು) ಗ್ರಾಮದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಸುಮಂತ್…

Read more

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರಿಗೆ ಕೃತಕ ಕಾಲು ವಿತರಣೆ

ಕಾಪು : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರಿಗೆ ಮಂಜೂರಾದ ಕೃತಕ ಕಾಲನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಕಾಪು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಕಾಶ್ ಶೆಟ್ಟಿ, ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ…

Read more

ಉಗ್ರ ದಾಳಿ – ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಬೇಕು – ಪುತ್ತಿಗೆ ಶ್ರೀ ಆಗ್ರಹ

ಉಡುಪಿ : ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಕಹಿ ಘಟನೆಯನ್ನು ಕೇಳಿ ತುಂಬಾ ಬೇಸರವಾಗಿದೆ. ಇಂತಹ ಪ್ರವೃತ್ತಿ ಮುಂದುವರಿದರೆ ಭಾರತ ದೇಶದ ಸನಾತನ ಧರ್ಮದ ಅಸ್ತಿತ್ವವೇ ನಾಶವಾಗುತ್ತದೆ ಎನ್ನುವ ಆತಂಕ ಎದುರಾಗುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು…

Read more

ಉಗ್ರದಾಳಿ ಖಂಡಿಸಿ ಬೈಂದೂರಿನಲ್ಲಿ ಪ್ರತಿಭಟನೆ

ಬೈಂದೂರು : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಧರ್ಮಾಧಾರಿತ ನರಮೇಧವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಯುವಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ…

Read more

ಉಗ್ರ ದಾಳಿ – ಜಿಲ್ಲೆಯ ಪ್ರವಾಸಿಗರ ಮಾಹಿತಿಗಾಗಿ ವಿಪತ್ತು ನಿಯಂತ್ರಣ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಮನವಿ

ಉಡುಪಿ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿದ್ದಾರೆ. ಹಲವರು ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ. ಉಡುಪಿ ಜಿಲ್ಲೆಯಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿ ಮೇಲ್ಕಂಡ…

Read more