Udupi

ಸರಕಾರಿ ಇಲಾಖೆಯ ಸಿಬ್ಬಂದಿಗಳೇ ಕಳ್ಳರ ಟಾರ್ಗೆಟ್; ನಿನ್ನೆ ಪೊಲೀಸ್‌ ಕ್ವಾಟ್ರಸ್, ಇಂದು ಮೆಸ್ಕಾಂ ಕ್ವಾಟ್ರಸ್ ‌ನಲ್ಲಿ ಕಳ್ಳತನ‌!

ಉಡುಪಿ : ನಿನ್ನೆಯಷ್ಟೇ ನಗರದ ಪೊಲೀಸ್ ಕ್ವಾಟ್ರಸ್‌ಗೆ ಕನ್ನ ಹಾಕಿದ್ದ ಕಳ್ಳರು, ಇಂದು ಮೆಸ್ಕಾಂ ಸಿಬ್ಬಂದಿಗಳ ಕ್ವಾಟ್ರಸ್‌ಗೆ ಕನ್ನ ಹಾಕಿದ್ದಾರೆ. ಉಡುಪಿಯ ಕುಂಜಿಬೆಟ್ಟುನಲ್ಲಿರುವ ಮೆಸ್ಕಾಂ ಸಿಬ್ಬಂದಿಯ ವಸತಿಗೃಹದ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ. ಗಣೇಶ್ ಮತ್ತು ಮುರುಗೇಶ್ ಎಂಬ ಮೆಸ್ಕಾಂ ಸಿಬ್ಬಂದಿ…

Read more

ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವಿದೇಶೀ ಬೋಟ್ ಕೋಸ್ಟ್‌ಗಾರ್ಡ್ ಪೊಲೀಸರ ವಶಕ್ಕೆ- ಮೂವರ ಬಂಧನ

ಮಲ್ಪೆ : ಉಡುಪಿಯ ಮಲ್ಪೆಯ ಸೈಂಟ್‌ ಮೇರಿಸ್ ದ್ವೀಪದ ಪರಿಸರದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವಿದೇಶೀ ಬೋಟನ್ನು ಕೋಸ್ಟ್‌ಗಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೀನುಗಾರಿಕಾ ಬೋಟು ಓಮನ್ ದೇಶಕ್ಕೆ ಸೇರಿದ್ದಾಗಿದೆ. ಇದರಲ್ಲಿದ್ದ ತಮಿಳುನಾಡು ಮೂಲದ 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಸೈಂಟ್…

Read more

ಶರಣಾದ ನಾಲ್ವರು ನಕ್ಸಲರು ಕಾರ್ಕಳ ನ್ಯಾಯಾಲಯಕ್ಕೆ ಹಾಜರು

ಕಾರ್ಕಳ : ನಕ್ಸಲ್ ಶರಣಾಗತಿ ವಿಚಾರವಾಗಿ ತನಿಖಾ ಪ್ರಕ್ರಿಯೆ ಮುಂದುವರೆದಿದ್ದು ಇವತ್ತು ನಾಲ್ವರು ನಕ್ಸಲರು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರಾದರು. ಕಾರ್ಕಳ ಮತ್ತು ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 15 ಪ್ರಕರಣಗಳ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು…

Read more

ವಿದ್ಯಾಪೋಷಕ್‌ನಿಂದ ಬಡ ವಿದ್ಯಾರ್ಥಿನಿಗೆ ಉಚಿತ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗ ಬೀಜಾಡಿಯಲ್ಲಿ ವಿದ್ಯಾಪೋಷಕ್ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಮಾನ್ಯಳಿಗೆ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಜರಗಿತು. ಸಾಲಿಗ್ರಾಮದ ಮಂಟಪ ರಾಮ ಉಪಾಧ್ಯ- ಫಣಿಯಮ್ಮ ದಂಪತಿ ನೆನಪಿನಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಪ್ರಾಯೋಜಿಸಿದ ‘ಫಣಿರಾಮ’ ಮನೆಯನ್ನು ಮಂಟಪದ ಯಶೋಧಾ…

Read more

ವಾಸ್ಕೋ-ವೇಲಂಕಣಿ ರೈಲಿಗೆ ಉಡುಪಿಯಲ್ಲಿ ನಿಲುಗಡೆಗೆ ಅವಕಾಶ

ಉಡುಪಿ : ಕ್ರೈಸ್ತರ ಪ್ರಸಿದ್ಧ ಪ್ರಾರ್ಥನಾ ಕ್ಷೇತ್ರ ಗೋವಾದ ವಾಸ್ಕೋದಿಂದ ತಮಿಳುನಾಡಿನ ವೇಲಂಕಣಿಗೆ ತೆರಳುವ ಪ್ರಮುಖ ರೈಲಿಗೆ ಉಡುಪಿ ಹಾಗೂ ಕುಂದಾಪುರದಲ್ಲಿ ನಿಲುಗಡೆಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಆದೇಶೀಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಭಾರತೀಯ…

Read more

ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಉಡುಪಿ : ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ತರಬೇತಿ ನೀಡುವ ಅರ್ಹ ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು…

Read more

ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ವಿದ್ವಾಂಸ ನಾಡೋಜ ಹಂ.ಪ.ನಾಗರಾಜಯ್ಯ ಆಯ್ಕೆ

ಉಡುಪಿ : ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ವಿ.ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರಸಿದ್ಧ ವಿದ್ವಾಂಸ ನಾಡೋಜ ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು…

Read more

ಟಿಪ್ಪರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತ್ಯು

ಶಿರ್ವ : ಟಿಪ್ಪರ್ ಲಾರಿ ಪಲ್ಟಿಯಾಗಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಗಣಪಣಕಟ್ಟೆ ತಿರುವಿನ ಬಳಿ ಮಂಗಳವಾರ (ಫೆ.25ರಂದು) ಮುಂಜಾನೆ ಸಂಭವಿಸಿದೆ. ಮೃತರನ್ನು ಬೈಂದೂರಿನ ಸುಬ್ರಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ…

Read more

ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ. ಹಣ ದುರ್ಬಳಕೆ ಮಾಡಿದ ದಲಿತ ದ್ರೋಹಿ ರಾಜ್ಯ ಸರಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ

ಉಡುಪಿ : ಅನುಸೂಚಿತ ಜಾತಿ ಮತ್ತು ಗಿರಿಜನ ಉಪಯೋಜನೆಯ (ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ.) ಸುಮಾರು ರೂ 25,000 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿರುವ ದಲಿತ ದ್ರೋಹಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಫೆಬ್ರವರಿ 28ರಂದು ಉಡುಪಿ ಜಿಲ್ಲಾ ಬಿಜೆಪಿ…

Read more

ಉಡುಪಿ ವಕೀಲರ ಸಂಘದ ಪಂದ್ಯಾಕೂಟ – ಟ್ರೋಫಿ ಅನಾವರಣ

ಉಡುಪಿ : ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಎಮ್.ಜಿ.ಎಮ್. ಕಾಲೇಜಿನ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ವಕೀಲರಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್ (ಪುರುಷರಿಗೆ),…

Read more