Udupi

ಕೊಲ್ಲೂರು ದೇಗುಲ : ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಾ. 15ರಿಂದ ಮಾ. 24ರವರೆಗೆ ನಡೆಯಲಿರುವ ರಥೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ದೇಗುಲದ ಕಚೇರಿಯಲ್ಲಿ ನಡೆಯಿತು. ಮಾ. 22ರಂದು ಬೆಳಗ್ಗೆ 11.15ಕ್ಕೆ ರಥಾರೋಹಣ ನಡೆಯಲಿದೆ. ಸಂಜೆ 5.00ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ದೇಗುಲದ…

Read more

ಮಾಹೆಯ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಅಧ್ಯಯನ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌‌ನ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಕುರಿತ ಕ್ಷೇತ್ರಾಧ್ಯಯನವು ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ನಡೆಯಿತು. ಕೊರಗ ಭಾಷಾ ತಜ್ಞ, ಲೇಖಕರಾದ ಪಾಂಗಾಳ ಬಾಬು ಕೊರಗ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದು…

Read more

ಗಾಂಧಿ ಭವನ ಹಸ್ತಾಂತರಿಸದಂತೆ ಆಗ್ರಹ

ಉಡುಪಿ : ದಲಿತರ ಮೀಸಲು ಹಣದಿಂದ ನಿರ್ಮಾಣಗೊಂಡಿರುವ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬನ್ನಂಜೆ ಗಾಂಧಿಭವನವನ್ನು ಅನ್ಯರಿಗೆ ಹಸ್ತಾಂತರಿಸಿದರೆ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯ ಜಯನ್ ಮಲ್ಪೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. 90 ವರ್ಷದಿಂದ ಲಕ್ಷ್ಮೀನಾರಾಯಣ…

Read more

ಉಡುಪಿ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳೇ ಇಲ್ಲ; ಗಂಟಿಹೊಳೆ ಪ್ರಶ್ನೆಗೆ ಸರ್ಕಾರದ ಉತ್ತರ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಕೃಷಿ ಇಲಾಖೆಗಳಲ್ಲಿನ ಹುದ್ದೆಗಳ ಭರ್ತಿಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರಿಗೆ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ. ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹೋಬಳಿ…

Read more

ಶೀರೂರು ಮಠದ ಪರ್ಯಾಯ : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ

ಉಡುಪಿ : ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಬೆಳಗ್ಗೆ…

Read more

ಲಾವಣ್ಯ ಬೈಂದೂರು ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಮಾನವನಿಗೆ 48 ವರ್ಷಗಳು ತುಂಬಿದೆ ಎಂದರೆ ವಯಸ್ಸಾಗುತ್ತಾ ಬಂತು ಎಂದರ್ಥ ಆದರೆ ಯಾವುದೇ ಸಂಸ್ಥೆಗೆ ವಯಸ್ಸು ಹೆಚ್ಚುತ್ತಾ ಬಂದರೆ ಅದು ಯೌವ್ವನಕ್ಕೆ ಕಾಲಿಟ್ಟಿದೆ ಎಂದರ್ಥ. ಪ್ರಸ್ತುತ 48 ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬೈಂದೂರಿನ ಲಾವಣ್ಯ ಸಂಸ್ಥೆ ಸಾಂಸ್ಕೃತಿಕ ರಂಗಕ್ಕೆ ನೀಡಿದ…

Read more

ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು…

ಉಡುಪಿ : ಕಟ್ಟಡವೊಂದರ ಮೇಲೆ ಸೋಲಾರ್ ಪ್ಯಾನೆಲ್ ಸ್ವಚ್ಛಗೊಳಿಸುವಾಗ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಾ.4ರಂದು ಬೆಳಗ್ಗೆ ನಿಟ್ಟೂರು ಎಂಬಲ್ಲಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂಲದ ಹನುಮಂತ ಪುಂಡಲಿಕ ರುಗಿ ಎಂದು ಗುರುತಿಸಲಾಗಿದೆ. ಇವರು ಉಡುಪಿ ಬಾಳಿಗಾ ಫಿಶ್‌ನೆಟ್‌ನ ಪ್ರೊಸೆಸಿಂಗ್…

Read more

ಉಡುಪಿ ಜಿಲ್ಲೆಯಲ್ಲಿ 180 ಹೊಸ ಬಿಎಸ್‌ಎನ್‌ಎಲ್ ಟವರ್‌ಗೆ ಬೇಡಿಕೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಜಿಲ್ಲೆಯಲ್ಲಿ ಸದ್ಯ 196 ಬಿಎಸ್‌ಎನ್‌ಎಲ್ ಟವರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು 41ಟವರ್‌ಗಳಿಗೆ 4ಜಿ ಸಂಪರ್ಕ ನೀಡಲಾಗಿದೆ. 180 ಹೊಸ ಟವರ್‌ಗಳ ನಿರ್ಮಾಣಕ್ಕೆ ಈಗಾಗಲೇ ಬೇಡಿಕೆ ಇದ್ದು, 30ಕ್ಕೆ ಅನುಮೋದನೆ ಸಿಕ್ಕಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ…

Read more

ಕೆಲಸಕ್ಕೆಂದು ಹೋದ ಯುವಕ ಮರಳಿ ಬಾರದೇ ನಾಪತ್ತೆ

ಉಡುಪಿ : ಕೆಲಸಕ್ಕೆಂದು ಮನೆಯಿಂದ ಹೋದ ಯುವಕ ಮರಳಿ ಬಾರದೇ ನಾಪತ್ತೆಯಾದ ಘಟನೆ ನಡೆದಿದೆ. ಉಡುಪಿ ತಾಲೂಕು ಮೂಡುಬೆಳ್ಳೆಯ ಮಡಿಕೆಟ್ಟು ತಿರ್ಲಪಕ್ಕೆ ನಿವಾಸಿ ಜಯಪ್ರಕಾಶ್ (26) ಎಂಬ ಯುವಕ ಫೆ.27ರಂದು ಕೆಲಸಕ್ಕೆಂದು ಮನೆಯಿಂದ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ. ಇವರು 175…

Read more

ಪರಾರಿಯಾಗಲು ಯತ್ನಿಸಿದ ಆರೋಪಿಯ ರಾದ್ಧಾಂತ : ಸರಣಿ ಅಪಘಾತ, ಪೊಲೀಸರಿಂದ ಸಿನಮೀಯ ಶೈಲಿಯಲ್ಲಿ ಬಂಧನ

ಮಣಿಪಾಲ : ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬ ರಾದ್ಧಾಂತ ನಡೆಸಿ ಸರಣಿ ಅಪಘಾತಕ್ಕೆ ಕಾರಣನಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಎಂದು ತಿಳಿದುಬಂದಿದೆ.ಆರೋಪಿ ಇಸಾಕ್ ಮಣಿಪಾಲದಲ್ಲಿ ಪೊಲೀಸರನ್ನು ನೋಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ,…

Read more