Udupi

ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಗುರುರಾಜ್‌ ಗಂಟಿಹೊಳೆ ಭೇಟಿ : ಅಗತ್ಯ ತುರ್ತು ‌ಕ್ರಮ, ಪರಿಹಾರಕ್ಕೆ ಸೂಚನೆ

ಬೈಂದೂರು : ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ನೆರೆ, ನೆರೆಭೀತಿ ಎದುರಾಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆಯಿಂದಾಗಿ ಇಡೀ ತಾಲೂಕಿಗೆ ಹಲವು…

Read more

ಜುಲೈ 9ರಂದು ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರ

ಕಾರ್ಕಳ : ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಆಸ್ಟಿಯೊಪೊರೋಸಿಸ್, ಅದರ ಬಗ್ಗೆ ಅರಿವಿನ ಕೊರತೆಯಿಂದಾಗಿ ಪತ್ತೆಯಾಗುವುದೇ ಇಲ್ಲ. ಇದು ಪ್ರಧಾನವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿದೆ. ಈ…

Read more

ಮಳೆಯ ನೆರೆಯಲ್ಲೇ ಕಷ್ಟದಿಂದ ಶಾಲೆಗೆ ತೆರಳಿದ ಮಕ್ಕಳು

ಉಡುಪಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ರವಿವಾರ ಹಾಗೂ ಸೋಮವಾರ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಮುಂಜಾನೆ ಭಾರೀ ಮಳೆಯ ನಡುವೆಯೇ ಮಕ್ಕಳು ಶಾಲೆಗೆ ತೆರಳಿದ ದೃಶ್ಯಕಂಡು ಬಂತು.…

Read more

ಕುಂಭದ್ರೋಣ ಮಳೆ – ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ, ಹಲವರ ರಕ್ಷಣೆ

ಉಡುಪಿ : ತಾಲೂಕಿನಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಬೈಲಕೆರೆ, ಕಲ್ಸಂಕ ಮಠದಬೆಟ್ಟು ಜಲಾವೃತಗೊಂಡಿವೆ.ಗುಂಡಿಬೈಲುವಿನಲ್ಲಿ ನೆರೆ ನೀರು ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ್ದ ಅಗ್ನಿಶಾಮಕ ದಳ ಐದಾರು ಮನೆಯವರನ್ನು ರಕ್ಷಣೆ ಮಾಡಿದೆ. ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ನಡೆಸಿ ಒಂದೇ ಮನೆಯ ಮೂವರನ್ನು…

Read more

ಉಡುಪಿಯಲ್ಲಿ ಧಾರಾಕಾರ ಮಳೆ : ಹಲವು ಮನೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಉಡುಪಿ : ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಉಡುಪಿಯ ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿವೆ. ಇಂದ್ರಾಣಿ‌ ನದಿ…

Read more

ಯಕ್ಷಗಾನ ಕಲಾರಂಗದ 54ನೆಯ ಮನೆಯ ಉದ್ಘಾಟನೆ

ಕುಂದಾಪುರ : ಆರ್ಥಿಕವಾಗಿ ದುರ್ಬಲರಾದ ಕಲಾವಿದರು, ವಿದ್ಯಾರ್ಥಿಗಳು ಮತ್ತು ಮತ್ತು ದಾನಿಗಳ ನಡುವೆ ವಿಶ್ವಾಸಾರ್ಹ ಸಂಪರ್ಕ ಸೇತುವಾಗಿ ಉಡುಪಿಯ ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದುದು. ಉಳಿದ ಸಂಘಟನೆಗಳಿಗೆ ಮಾದರಿಯಾಗುವಂತೆ, ಸಮಾಜಮುಖಿಯಾಗಿ 50 ವರ್ಷಗಳನ್ನು ಉತ್ತರಿಸಿದ್ದು, ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ, ಎಂದು ಪೇಜಾವರ…

Read more

ಇ‌ಸ್ಪೀಟ್ ಅಡ್ಡೆಗೆ ಖಾಕಿ ರೇಡ್ : ಎಂಟು ಮಂದಿ ಅಂದರ್

ಕಾರ್ಕಳ : ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದ ಘಟನೆ ಜು. 5ರಂದು ಕಾರ್ಕಳ ತಾಲೂಕಿನ ಬೋಳದಲ್ಲಿ ಸಂಭವಿಸಿದೆ. ಬೋಳ ಗ್ರಾಮದ ಪೊಸರ್ಮೆ ಎಂಬಲ್ಲಿ ಶ್ರೀನಿವಾಸ ಎಂಬುವವರಿಗೆ ಸಂಬಂಧಪಟ್ಟ ಹಳೆ ರೈಸ್ ಮಿಲ್ಲಿನ ಶೆಡ್‌ನಲ್ಲಿ ಶ್ರೀನಿವಾಸ,…

Read more

ವಿಶ್ವ ಪ್ರಸಿದ್ಧ ಮರವಂತೆ ಬೀಚ್‌ನಲ್ಲಿ ಪ್ರವಾಸಿಗರಿಂದ ಹುಚ್ಚಾಟ, ಪೊಲೀಸರಿಂದ ಸುರಕ್ಷತೆಯ ಪಾಠ

ಕುಂದಾಪುರ : ಉಡುಪಿ ಜಿಲ್ಲೆಯ ವಿಶ್ವ ಪ್ರಸಿದ್ಧ ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಹುಚ್ಚಾಟವು ತೀವ್ರತೆ ಪಡೆದುಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ದವಾಗಿದ್ದು, ಪ್ರವಾಸಿಗರು ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಗಂಗೊಳ್ಳಿ ಠಾಣೆಯ…

Read more

ಅಭಿಜಾತ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ನಿಧನಕ್ಕೆ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಂತಾಪ

ಉಡುಪಿ : ತೆಂಕುತಿಟ್ಟಿನ ಅಗ್ರಮಾನ್ಯ ಅಭಿಜಾತ ಕಲಾವಿದರಾಗಿದ್ದ ಕುಂಬಳೆ ಶ್ರೀಧರ ರಾವ್ ಇವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಯಕ್ಷಗಾನ ತಿರುಗಾಟ ಮೇಳದಲ್ಲಿ ಆರು ದಶಕಗಳಿಗೂ ಮಿಕ್ಕಿ ಕಲಾಸೇವೆಗೈದ…

Read more

ಮಾಹೆಯ ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ನಿರ್ದೇಶಕರಾಗಿ ಡಾ. ಚೆರಿಯನ್‌ ವರ್ಗೀಸ್‌

ಮಣಿಪಾಲ : ಮಣಿಪಾಲದ ಪ್ರಸನ್ನ ಸ್ಕೂಲ್‌ ಪಬ್ಲಿಕ್‌ ಹೆಲ್ತ್‌ನ ನೂತನ ನಿರ್ದೇಶಕ ಮತ್ತು ಪ್ರಾಧ್ಯಾಪಕರಾಗಿ ಡಾ. ಚೆರಿಯನ್‌ ವರ್ಗೀಸ್‌ ಅವರನ್ನು ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] ನೇಮಕಗೊಳಿಸಿದೆ. ಡಾ. ವರ್ಗೀಸ್‌ ಅವರು ವಿಶ್ವ ಆರೋಗ್ಯ ಸಂಸ್ಥೆ [ಡಬ್ಲ್ಯುಎಚ್‌ಒ]ನಲ್ಲಿ ಎರಡು…

Read more