Udupi

ದೆಂದೂರುಕಟ್ಟೆ – ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಪು : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರು ದೆಂದೂರುಕಟ್ಟೆ‌ಯಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವಕ ಸಂತೋಷ್ ಆಚಾರ್ಯ (39) ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಪಕ್ಕಾಸಿಗೆ ನೇಣುಬಿಗಿದು‌ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ…

Read more

ಕಾರಿನ ಬ್ರೇಕ್ ಫೇಲ್ ಆಗಿ ಡಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

ಮಣಿಪಾಲ : ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದ್ರಾಳಿಯಲ್ಲಿ ಬುಧವಾರ ಸಂಭವಿಸಿದೆ. ಮೃತ ದುರ್ದೈವಿ ಮಣಿಪಾಲದ ಉದ್ಯೋಗಿ ದೀಪೇಶ್ ದೇವಾಡಿಗ ಎಂದು ಗುರುತಿಸಲಾಗಿದೆ. ಇಂದ್ರಾಳಿ ದೇವಸ್ಥಾನದಿಂದ ಕಾರು ಕೆಳಗೆ ಬರುತ್ತಿದ್ದ ವೇಳೆ ಬ್ರೇಕ್ ಫೇಲ್…

Read more

ಟ್ರೇಡಿಂಗ್ ಹೆಸರಿನಲ್ಲಿ 16.78 ಲಕ್ಷ ರೂ. ಆನ್‌ಲೈನ್ ವಂಚನೆ – ಪ್ರಕರಣ ದಾಖಲು

ಉಡುಪಿ : ಷೇರು ಮಾರುಕಟ್ಟೆ ಟ್ರೇಡಿಂಗ್‌ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರಫಿಯತ್ ಎಂಬವರಿಗೆ ದುಷ್ಕರ್ಮಿಗಳು ಷೇರು ಮಾರುಕಟ್ಟೆ ಟ್ರೇಡಿಂಗ್ ಬಗ್ಗೆ ವಾಟ್ಸಾಪ್‌ನಲ್ಲಿ ಮಾಹಿತಿಯನ್ನು ನೀಡುತ್ತಿದ್ದು, ಇದರಲ್ಲಿ ಹಣ…

Read more

ಗೀತಾಂಜಲಿ ಪುರುಷರ ವಸ್ತ್ರ ಮಳಿಗೆ ಶುಭಾರಂಭ : ಸ್ವದೇಶಿ – ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್‌ಗಳ ಬಟ್ಟೆಗಳು ಕೈಗೆಟುಕುವ ದರದಲ್ಲಿ ಲಭ್ಯ

ಉಡುಪಿ: ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರು ಇದೀಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು ಬುಧವಾರ ಗ್ರಾಹಕರಿಂದಲೇ ಉದ್ಘಾಟಿಸಲಾಯಿತು. ಉದ್ಯಮಿ ಡಾ.ಜಿ ಶಂಕರ್ ಮಾತನಾಡಿ, ಸಣ್ಣ…

Read more

ಜಾತಿಗಣತಿ ವರದಿ ಓದದೆ ವಿರೋಧ ಮಾಡಬೇಡಿ – ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

ಉಡುಪಿ : ಜಾತಿಗಣತಿ ವರದಿ ಜಾರಿ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಈ ವರದಿ ಓದದೆ ವಿರೋಧ ಮಾಡಬೇಡಿ, ವರದಿ ಓದಿದ ಬಳಿಕ ಬದಲಾವಣೆಗಳಿದ್ದರೆ ಸೂಚಿಸಿ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ…

Read more

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು

ಉಡುಪಿ : ಮೀನುಗಾರಿಕೆ ಇಲಾಖೆ ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ರಾತ್ರಿ ವಿಪರೀತ ಜ್ವರ ಮತ್ತು ಗಂಟಲು ಸೋಂಕಿಗೆ ಒಳಗಾಗಿದ್ದ ಪ್ರಮೋದ್‌ಗೆ ಉಸಿರಾಟ ಸಮಸ್ಯೆಯಾಗಿತ್ತು. ಕಳೆದ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ…

Read more

ಕೋಟ ಅಮೃತೇಶ್ವರೀ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ

ಕೋಟ : ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನಾಲ್ಕನೆ ದಿನದ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಕುಟುಂಬಿಕರು ಚಂಡಿಕಾ…

Read more

ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಪತ್ತೆ

ಹೆಬ್ರಿ : ಹೆಬ್ರಿ ತಾಲೂಕಿನ ಬಲ್ಲಾಡಿ ಪ್ರದೇಶದಲ್ಲಿ, ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ(85 ವರ್ಷ) ಅವರ ಮೃತದೇಹ ಪತ್ತೆಯಾಗಿದೆ. ಬಲ್ಲಾಡಿ ಪರಿಸರದ ಗದ್ದೆ ಬದಿಯಲ್ಲಿ ವೃದ್ಧೆಯ ದೇಹ ಪತ್ತೆಯಾಗಿದ್ದು, ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅವರು ಸಾವಿಗೀಡಾಗಿದ್ದು ಭಾನುವಾರ…

Read more

ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ‘ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ’

ಉಡುಪಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ’ಗೆ ಉಡುಪಿಯ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’ ಆಧುನಿಕ ವಚನಗಳ ಕೃತಿ ಪಾತ್ರವಾಗಿದೆ. ಪ್ರಶಸ್ತಿಯು…

Read more