Udupi

ಮಂಗಳೂರು MSPTCಗೆ ಸಚಿವೆ ಹೆಬ್ಬಾಳ್ಕರ್ ದಿಢೀರ್ ಭೇಟಿ; ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಸುವಂತೆ ಸೂಚನೆ

ಮಂಗಳೂರು : ಮಂಗಳೂರು ಹೊರವಲಯದ ಮೂಡುಶೆಡ್ಡೆ-ಶಿವನಗರದಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ (ಎಂಎಸ್‌ಪಿಸಿ)ಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿದರು. ಕೇಂದ್ರದ…

Read more

ಅಯೋಧ್ಯೆಯಲ್ಲಿ ಪೇಜಾವರ ಮಠದಿಂದ ಸಾಮೂಹಿಕ ಬ್ರಹ್ಮೋಪದೇಶ

ಉಡುಪಿ : ಅಯೋಧ್ಯೆಯ ಶ್ರೀ ರಾಮಮಂದಿರದ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಗುರುವಾರ ಅಯೋಧ್ಯೆಯಲ್ಲಿ 25 ಬ್ರಾಹ್ಮಣ ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ ನೆರವೇರಿತು. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಕಡುಬಡತನದಲ್ಲಿರುವ ಕುಟುಂಬಗಳ 80ಕ್ಕೂ…

Read more

ಯಡಮೊಗೆ ಹಾಗೂ ತೊಂಬಟ್ಟುವಿನಲ್ಲಿ ಕಾಲು ಸಂಕ ಉದ್ಘಾಟಿಸಿದ ಗಂಟಿಹೊಳೆ

ಬೈಂದೂರು : ಬೈಂದೂರು ತಾಲ್ಲೂಕಿನ ಯಡಮೊಗೆ ಹಾಗೂ ತೊಂಬಟ್ಟುವಿನಲ್ಲಿ ಕಾಲುಸಂಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಇಂದು ಉದ್ಘಾಟಿಸಿದರು. ಸಮೃದ್ಧ ಬೈಂದೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಯಡಮೊಗೆಯ ರಾಂಪಯ್ಯಜಡ್ಡು ಹಾಗೂ ಕುಮ್ಟಿಬೇರು ಸಂಪರ್ಕಿಸುವ…

Read more

ಟೀಮ್ ನೇಷನ್ ಫಸ್ಟ್ ವತಿಯಿಂದ ಚಿಣ್ಣರ ನಟ್ಟಿ ಕಾರ್ಯಕ್ರಮ

ಉಡುಪಿ : ಟೀಮ್ ನೇಷನ್ ಫಸ್ಟ್(ರಿ) ತಂಡವು ಪ್ರತಿ ವರ್ಷದಂತೆ ಈ ವರ್ಷವೂ “ಚಿಣ್ಣರ ನಟ್ಟಿ” ಕಾರ್ಯಕ್ರಮವನ್ನು ಈ ಭಾನುವಾರದಂದು ಕಿದಿಯೂರಿನ ಹೊಸ ವಾಟರ್ ಟ್ಯಾಂಕ್‌ನ ಬಳಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಸೂರಜ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ…

Read more

ಮಗಳ ಖಾಸಗಿ ವೀಡಿಯೊಗಳನ್ನು ವೈರಲ್‌ ಮಾಡಿದ ತಂದೆ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ

ಪಡುಬಿದ್ರಿ : ತನ್ನ ಸ್ವಂತ ಮಗಳ ಖಾಸಗಿ ವಿಡಿಯೋಗಳನ್ನು ತಂದೆಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಂದೆ ಆಸೀಫ್‌ ಯಾನೆ ಆಸೀಫ್‌ ಆಪದ್ಭಾಂದವನ ವಿರುದ್ಧ ಆತನ ಪತ್ನಿ…

Read more

ಕನಕದಾಸ ಅಧ್ಯಯನ, ಸಂಶೋಧನಾ ಕೇಂದ್ರದ ಸದಸ್ಯರಾಗಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ನೇಮಕ

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯರನ್ನಾಗಿ ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರನ್ನು ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಸಾಹಿತ್ಯದ ಕಾವ್ಯ, ಕತೆ, ನಾಟಕ, ವಿಮರ್ಶೆ, ಅಂಕಣ ಬರಹ,…

Read more

ಕ್ರೀಡಾ ತಾರೆ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್‌ ಕುಮಾರ್‌ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನ

ಹೆಬ್ರಿ : ಕ್ರೀಡಾ ತಾರೆಯಾಗಿರುವ ಹೆಬ್ರಿ ಗ್ರಾಮ ಆಡಳಿತಾಧಿಕಾರಿ ನವೀನ್‌ ಕುಮಾರ್‌ ಅವರನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಕಂದಾಯ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು. ಉಡುಪಿಯಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ 2೦೦ ಮೀಟರ್‌ ಹರ್ಡಲ್ಸ್‌ನಲ್ಲಿ ಪ್ರಥಮ, 100 ಮೀಟರ್‌ ಹರ್ಡಲ್ಸ್‌ ಪ್ರಥಮ,…

Read more

ಷೇರು ಮಾರುಕಟ್ಟೆಯಲ್ಲಿ ಲಾಭದ ಆಮಿಷ – ಲಕ್ಷಾಂತರ ರೂ. ವಂಚನೆ

ಉಡುಪಿ : ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಬೈಲಕೆರೆಯ ಕೆ. ಗುರುಪ್ರಸಾದ್‌ ಎಂಬವರ ವಾಟ್ಸಾಪ್‌ ಸಂಖ್ಯೆಗೆ ಜಿಎಸ್‌ಎಎಂ ಮಾರುಕಟ್ಟೆ ಕಂಪೆನಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ…

Read more

ಹೆಮ್ಮಾಡಿ ಬಳಿ ಗಾಳಿ ಮಳೆಗೆ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ; ಶಾಲಾ ಬಸ್ ಹಾದುಹೋದ ತಕ್ಷಣ ಘಟನೆ, ತಪ್ಪಿದ ಭಾರೀ ಅನಾಹುತ

ಕುಂದಾಪುರ : ಇಲ್ಲಿಗೆ ಸಮೀಪದ ಹೆಮ್ಮಾಡಿ ಸಂತೋಷ್ ನಗರ ರಸ್ತೆಯಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ನೆಲಕ್ಕುರುಳಿ ಹಲವು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಯಲ್ಲಿ ಬಿದಿದ್ದು…

Read more

ಕಾಲಿಪ್ಲವರ್ ಪ್ರೇಮಿಗಳೇ ಎಚ್ಚರ : ಪಡುಬಿದ್ರೆಯಲ್ಲಿ ಖರೀದಿಸಿದ ಕಾಲಿಫ್ಲವರ್‌ನಲ್ಲಿ ಆಶ್ರಯ ಪಡೆದಿದ್ದ ಹೆಬ್ಬಾವಿನ ಮರಿ

ಪಡುಬಿದ್ರಿ : ಪೇಟೆಯ ಹಣ್ಣು ಹಂಪಲು ಅಂಗಡಿಯೊಂದರಲ್ಲಿ ಇಲ್ಲಿನ ಬೇಂಗ್ರೆ ನಿವಾಸಿಯೊರ್ವರು ಖರೀದಿ ಮಾಡಿದ್ದ ಕಾಲಿಪ್ಲವರ್‌ನಲ್ಲಿ ಹೆಬ್ಬಾವಿನ ಮರಿಯೊಂದು ಪ್ರತ್ಯಕ್ಷವಾಗಿದೆ. ಪಡುಬಿದ್ರಿ ಬೇಂಗ್ರೆ ನಿವಾಸಿ ಮಹಿಳೆಯೊರ್ವರು ಪಡುಬಿದ್ರಿ ಮುಖ್ಯ ಪೇಟೆಯ ಹಣ್ಣು ಹಂಪಲು ಅಂಗಡಿಯಲ್ಲಿ ಕಾಲಿಪ್ಲವರ್ ಖರೀದಿಸಿ ಮನೆಗೆ ಹೋದವರೇ ನೇರವಾಗಿ…

Read more