Special

ರಾಷ್ಟ್ರಮಟ್ಟದ ಬೆಂಚ್ ಪ್ರೆಸ್‌ ಚಾಂಪಿಯನ್‌ಶಿಪ್ : ಕಿನ್ನಿಗೋಳಿಯ ದಿಶಾ ಕುಕ್ಯಾನ್‌ಗೆ ಬೆಳ್ಳಿಯ ಪದಕ

ಮುಲ್ಕಿ : ರಾಷ್ಟ್ರಮಟ್ಟದ ಬೆಂಚ್ ಪ್ರೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಕಿನ್ನಿಗೋಳಿಯ ದಿಶಾ ಕುಕ್ಯಾನ್ ಬೆಳ್ಳಿಯ ಪದಕ ಮುಡಿಗೇರಿಸಿಕೊಂಡಿದ್ದಾರೆ. ಗೋವಾದ ವಾಸ್ಕೋಡಗಾಮದಲ್ಲಿ ನಡೆದ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ‌ವನ್ನು ಪ್ರತಿನಿಧಿಸಿ ಎರಡು ಬೆಳ್ಳಿಯ ಪದಕಗಳನ್ನು ಕಿನ್ನಿಗೋಳಿಯ ದಿಶಾ ಕುಕ್ಯಾನ್‌ರವರು ಗಳಿಸಿದ್ದಾರೆ. ಈಕೆ ಕಿನ್ನಿಗೋಳಿಯ…

Read more

ದುಬೈ ಗಡಿನಾಡ ಉತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಡಾ. ಫಖ್ರುದ್ದೀನ್ ಕುನಿಲ್ ಅವರಿಗೆ ಸನ್ಮಾನ

ಮಂಗಳೂರು : ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಆಯೋಜಿಸಲಾದ ದುಬೈ ಗಡಿನಾಡ ಉತ್ಸವಕ್ಕೆ ಸಾಕ್ಷಿಯಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅಕಾಡೆಮಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸುಸಂದರ್ಭದಲ್ಲಿ ಶಿಕ್ಷಣ…

Read more

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ : ಇದು ದಕ್ಷಿಣ ಭಾರತದಲ್ಲಿ ಮೊದಲನೆಯದು

ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅನ್ನನಾಳದ ರಂಧ್ರವನ್ನು ಎಡೊಸ್ಕೋಪಿಕ್ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಇದು ದಕ್ಷಿಣ ಭಾರತದ ವೈದ್ಯಕೀಯ ಅಭ್ಯಾಸದಲ್ಲಿ ಒಂದು ಮೈಲಿಗಲ್ಲು. ಇತ್ತೀಚೆಗೆ, ವಯಸ್ಸಾದ ರೋಗಿಯೊಬ್ಬರು ಅನ್ನನಾಳದ ರಂಧ್ರದ ಗಂಭೀರ ಸ್ಥಿತಿಯೊಂದಿಗೆ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ದಾಖಲಿಸಲಾಗಿದ್ದರು.…

Read more

ಶಿವರಾಮ ಕಾರಂತರದು ಹತ್ತಲ್ಲ ಹಲವು ಮುಖ : ಕಾರಂತ ಪ್ರಶಸ್ತಿ ಪುರಸ್ಕೃತ ಡಾ. ನಾ. ಮೊಗಸಾಲೆ

ಕಾರಂತರು ಕೇವಲ ಒಂದು ಧರ್ಮ ಅಥವಾ ಜಾತಿಯ ಪರವಾಗಿರದೆ, ಸರ್ವ ಸಮಾಜದ ಸಮಸ್ಯೆಗಳಿಗೆ ತನ್ನ ಕೃತಿಗಳ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸಿದವರು ಎಂದು ಹಿರಿಯ ಸಾಹಿತಿ, ಕವಿ, ಚಿಂತಕ ಡಾ. ನಾ. ಮೊಗಸಾಲೆ ಹೇಳಿದರು. ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆದ…

Read more

ಗಂಜೀಫಾ ರಘುಪತಿ ಭಟ್ಟರಿಗೆ ಮಧ್ಯ ಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ್ ಪ್ರಶಸ್ತಿ

ಉಡುಪಿ : 2023ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಮಧ್ಯಪ್ರದೇಶ ಸರ್ಕಾರ ಜೀವಿತಾವಧಿಯ ಶ್ರೇಷ್ಠತೆ ಆಧಾರದ ಮೇಲೆ ಸರ್ವಾನುಮತದಿಂದ ರಘುಪತಿ ಭಟ್ಟರನ್ನು ಆಯ್ಕೆ ಮಾಡಿದೆ. ಈ ಗೌರವದ ಅಡಿಯಲ್ಲಿ 5 ಲಕ್ಷ ನಗದು ಶಾಲು ಫಲಕ ನೀಡಲಾಗುತ್ತದೆ. ರಘುಪತಿ ಭಟ್ಟರಿಗೆ…

Read more

ಪ್ರಯಾಣಿಕರ ಮೊಬೈಲ್, ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಮಣಿಪಾಲ : ಆಟೋ ಚಾಲಕರೊಬ್ಬರು ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಬಿಟ್ಟು ಹೋದ ಮೊಬೈಲ್ ಹಾಗೂ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಣಿಪಾಲದಲ್ಲಿ ನಡೆದಿದೆ. ಆಟೋ ಚಾಲಕರೆಂದರೆ ಸ್ವಲ್ಪ ದೂರ ಸಂಚಾರ ಮಾಡಲು ಸಾಕಷ್ಟು ದುಡ್ಡು ಕೇಳುತ್ತಾರೆ ಎನ್ನುವ ಮಾತುಗಳು…

Read more

ನ.10ರ ‘ಸಹಸ್ರ ಕಂಠ ಬೃಹತ್ ಗೋಷ್ಠಿ ಗಾಯನ’ ಎಲ್ಲೆಡೆ ಮಾರ್ದನಿಸಿ ಭಜನಾ ಕ್ರಾಂತಿಗೆ ನಾಂದಿ ಹಾಡಲಿ : ನಾಗರಾಜ ಆಚಾರ್ಯ

ಉಡುಪಿ : ನವ ವಿಧ ಭಕ್ತಿಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿರುವ ಭಜನೆ ಭಗವಂತನನ್ನು ಒಲಿಸುವ ಸುಲಭ ಸಾಧನ. ದಾಸವರೇಣ್ಯರು ನಡೆದಾಡಿದ ಪುಣ್ಯಭೂಮಿ, ಪೊಡವಿಗೊಡೆಯ ಶ್ರೀ ಕೃಷ್ಣನ ನೆಲೆವೀಡು ಉಡುಪಿಯ ರಾಜಾoಗಣದಲ್ಲಿ ನ.10ರಂದು ಮಧ್ಯಾಹ್ನ ಗಂಟೆ 2.30ಕ್ಕೆ ನಡೆಯುವ ‘ಸಹಸ್ರ ಕಂಠ ಬೃಹತ್…

Read more

ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ : ಡಾ. ತಲ್ಲೂರು

ತೆಕ್ಕಟ್ಟೆ : ನಿರಂತರವಾಗಿ ಯಕ್ಷಗಾನ ಚಿಂತನೆಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಸಂದಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿದ್ವಾನ್ ಹಾಗೂ ಹಂದೆಯವರಿಗೆ ಪ್ರಶಸ್ತಿ ಲಭಿಸಿದೆ. ಇಪ್ಪತ್ತೈದು ವರ್ಷ ನೆಲೆಯನ್ನು ಕಂಡುಕೊಂಡು 108 ಕಾರ್ಯಕ್ರಮವನ್ನು ಹಮ್ಮಿಕೊಂಡ ಯಶಸ್ವೀ…

Read more

ವಿದ್ಯಾಪೋಷಕ್‌ನಿಂದ 56‌ನೇ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ದ್ವಿತೀಯ ಪಿ.ಯು.ಸಿ.ಯ ಸತ್ಯವತಿಗೆ ಕುಂದಾಪುರ ತಾಲೂಕಿನ ಕೋಟೇಶ್ವರದ ಮೇಲ್ಕಟ್ಕೆರೆಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಅವರ ಪ್ರಾಯೋಜಕತ್ವದಲ್ಲಿ ರೂ.6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಚಂದ್ರಿಕಾ ನಿಲಯ ಉದ್ಘಾಟನೆಗೊಂಡಿತು. ವೇ. ಮೂ…

Read more

ದೀಪಾವಳಿ ಹಬ್ಬಕ್ಕೆ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಮಂಜೂರು

ಮಂಗಳೂರು : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಮನವಿಗೆ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಸ್ಪಂದಿಸಿದ್ದು, ಇದೀಗ ನೈರುತ್ಯ ರೈಲ್ವೆಯು ಮಂಗಳೂರು-ಬೆಂಗಳೂರು…

Read more