Problems

ಬಾಂಗ್ಲಾ ಹಿಂದೂಗಳ ಮೇಲಿನ ಮುಸ್ಲಿಂ ಮೂಲಭೂತವಾದಿಗಳ ದೌರ್ಜನ್ಯವನ್ನು ಒಕ್ಕೊರಲಿನಿಂದ ಖಂಡಿಸೋಣ : ಯಶ್‌ಪಾಲ್ ಸುವರ್ಣ

ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಸ್ಲಿಂ ಮತೀಯವಾದಿಗಳು ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ರಾಷ್ಟೀಯವಾದಿ ಭಾರತೀಯರು ಒಕ್ಕೊರಲಿನಿಂದ ಖಂಡಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಹಿಂದೂ ದೇವಸ್ಥಾನ, ಆರಾಧನಾ ಕೇಂದ್ರಗಳ ಮೇಲೆ ದಾಳಿ, ಹಿಂದೂ…

Read more

ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ ವಿಜ್ಞಾನಿಗಳ ಭೇಟಿ

ಉಡುಪಿ : ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ (ಜಿಯಾಲಜಿಕಲ್‌ ಸರ್ವೇ ಆಫ್ ಇಂಡಿಯಾ) ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿದೆ. ಈ ತಂಡವು ಬೈಂದೂರು ತಾಲೂಕಿನ ಕೊಲ್ಲೂರು, ಶಿರೂರು, ಸೋಮೇಶ್ವರ, ಹಾಲಾಡಿ, ಹೆಬ್ರಿ ತಾಲೂಕಿನ ಕನ್ಯಾನ, ಕಾರ್ಕಳ ತಾಲೂಕಿನ…

Read more

ಪಡುಬಿದ್ರಿ-ಕಾರ್ಕಳ ರಸ್ತೆಯ ಟೋಲ್ ಗೇಟ್‌ಗೆ ಗುದ್ದಲಿ ಪೂಜೆ – ಸ್ಥಳೀಯರ ವಿರೋಧ

ಪಡುಬಿದ್ರಿ : ಜನ ವಿರೋಧದ ನಡುವೆಯೂ ಪಡುಬಿದ್ರಿ-ಕಾರ್ಕಳ ರಸ್ತೆ ಗುದ್ದಲಿಪೂಜೆ ನಡೆಸಲು ಬಂದ ತಂಡವನ್ನು ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ. ಈ ಹಿಂದೆ ಬೆಳ್ಮಣ್ ಪ್ರದೇಶದಲ್ಲಿ ಈ ಪ್ರಯತ್ನಕ್ಕೆ ಬೇರೊಂದು ಗುತ್ತಿಗೆ ಕಂಪನಿ…

Read more

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ.. ತಕ್ಷಣ ಕೇಂದ್ರ ಮಧ್ಯಪ್ರವೇಶ ಮಾಡಲಿ – ಹಿಂದೂ ಸಂಘಟನೆಗಳ ಒತ್ತಾಯ

ಉಡುಪಿ : ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ದ್ವಂಸ, ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಕೊಲೆ, ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿಗಳ…

Read more

ಭೂಕುಸಿತದಿಂದ ಹಾನಿಗೊಳಗಾದ ಟ್ರ್ಯಾಕ್ ದುರಸ್ತಿ : ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ

ಮಂಗಳೂರು : ಸಕಲೇಶಪುರದ ಬಳಿ ನಡೆದ ಭೂಕುಸಿತದಿಂದ ಹಾನಿಗೊಂಡಿದ್ದ ರೈಲು ಮಾರ್ಗವನ್ನು ದುರಸ್ತಿ ಮಾಡಿದ ನಂತರ, ಮಂಗಳೂರು-ಬೆಂಗಳೂರು ರೈಲು ಸಂಚಾರ ಇಂದಿನಿಂದ ಪುನರಾರಂಭಗೊಂಡಿದೆ. ಟ್ರ್ಯಾಕ್ ಪುನಸ್ಥಾಪನೆಯ ನಂತರ, ರೈಲು ಸಂಖ್ಯೆ 16575, ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್, ಮಂಗಳೂರು-ಬೆಂಗಳೂರು ಮಾರ್ಗದಲ್ಲಿ…

Read more

ನಿವೇಶನರಹಿತ ಅರ್ಹರಿಗೆ ಹಕ್ಕುಪತ್ರ ವಿತರಿಸಲು ಕ್ರಮ : ಜಿಲ್ಲಾಧಿಕಾರಿ

ಉಡುಪಿ : ಜಿಲ್ಲೆಯ ನಿವೇಶನ ರಹಿತ ಅರ್ಹ ಫ‌ಲಾನುಭವಿಗಳಿಗೆ ಪ್ರಸ್ತುತ ಲಭ್ಯವಿರುವ ನಿವೇಶನಗಳ ಹಕ್ಕುಪತ್ರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ನ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಜರಗಿದ ನಿವೇಶನ…

Read more

ನಾಗರ ಪಂಚಮಿ ಹಿನ್ನೆಲೆ – ಶಂಕರಪುರ ಮಲ್ಲಿಗೆ ದರ ಗಗನಕ್ಕೆ, ಸಿಯಾಳ ಕೂಡ ದುಬಾರಿ

ಉಡುಪಿ : ನಾಗರ ಪಂಚಮಿ ಹಬ್ಬ ಸಮೀಪಿಸುತ್ತಲೇ ಶಂಕರಪುರ ಮಲ್ಲಿಗೆ ದರ ದಿಢೀರ್‌ ಗಗನಕ್ಕೇರಿದೆ. 2 ವಾರಗಳ ಹಿಂದೆ ಜುಲೈ 22ರಂದು 1 ಅಟ್ಟೆಗೆ (4 ಚೆಂಡು) 280 ರೂ. ಇದ್ದ ದರ ಆಗಸ್ಟ್ 7ರಂದು 2,100ಕ್ಕೆ ತಲುಪಿದೆ. ಜುಲೈ ಪೂರ್ತಿ…

Read more

ಮಲ್ಪೆ ಪಡುಕರೆ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ

ಮಲ್ಪೆ : ಮಲ್ಪೆ, ಶಾಂತಿ ನಗರ, ಅಂಬಲಪಾಡಿ ಕಿದಿಯೂರು ಪಡುಕರೆ ಮತ್ತು ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಪಡುಕರೆಯ ಕಡಲ್ಕೊರೆತ ಪ್ರದೇಶಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು…

Read more

ವಿಪರೀತ ಮಳೆ ಹಾಗೂ ಹಾನಿಯಾಗದಂತೆ ಅನಂತೇಶ್ವರ ಸನ್ನಿಧಿಯಲ್ಲಿ ‘ಚಿತ್ರಾನ್ನ ಸೇವೆ’

ಉಡುಪಿ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ಅತಿವೃಷ್ಟಿ ಕಡಿಮೆ ಮಾಡುವುದಕ್ಕಾಗಿ ಸಂಪ್ರದಾಯದಂತೆ ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ಚಿತ್ರಾನ್ನ ಸೇವೆ ನಡೆಸಲಾಯಿತು. ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಈ ಸೇವೆಯ ಸಂದರ್ಭದಲ್ಲಿ…

Read more

ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ಹೊಳೆ ಹೂಳಿನ ಸಮಸ್ಯೆ ಬಗೆಹರಿಸುವಂತೆ ಮನವಿ

ಕೋಟ : ಕೋಟದ ಮಣೂರಿನಿಂದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆ ಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು ರೈತರು ಬೆಳೆದ ಕೃಷಿ ಕೊಳೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ಕೋಟ ಹಿರೇಮಹಾಲಿಂಗೇಶ್ವರ…

Read more