Problems

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ನಿರ್ಧಾರದ ವಿರುದ್ಧ ರಿಕ್ಷಾ ಚಾಲಕರಿಂದ ಬೃಹತ್ ಪ್ರತಿಭಟನೆ

ಮಂಗಳೂರು : ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ದ.ಕ.ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಅಟೋರಿಕ್ಷಾ ಚಾಲಕರು ನಗರದಲ್ಲಿಂದು CITU ನೇತೃತ್ವದಲ್ಲಿ ವಿವಿಧ ಅಟೋರಿಕ್ಷಾ ಚಾಲಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. 500ಕ್ಕೂ ಮಿಕ್ಕಿದ ಅಟೋರಿಕ್ಷಾ ಚಾಲಕರು ಜಿಲ್ಲಾಡಳಿತದ…

Read more

ಟೋಲ್‌ಗೇಟ್ ರದ್ದತಿ ಕುರಿತಂತೆ ಕ್ರಮ : ಲಕ್ಷ್ಮೀ ಹೆಬ್ಬಾಳಕರ್ ಭರವಸೆ

ಪಡುಬಿದ್ರಿ : ಪಡುಬಿದ್ರಿ-ಬೆಳ್ಮಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲು ಮುಂದಾಗಿರುವ ಟೋಲ್‌ಗೇಟ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.…

Read more

ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಡೆಂಗ್ಯು, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರು ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಸಮೀಪದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ…

Read more

ಮಳೆಯಿಂದ ಇದುವರೆಗೆ ಅಂದಾಜು 183 ಕೋಟಿ ರೂ. ನಷ್ಟ : ಅಪರ ಜಿಲ್ಲಾಧಿಕಾರಿ ಮಮತಾದೇವಿ

ಉಡುಪಿ : ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.41ರಷ್ಟು ಸುರಿದ ಅಧಿಕ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ರಸ್ತೆ, ಮೇಲ್ಸೇತುವೆ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮ‌ರ್ ಹಾಗೂ ಲೈನ್‌ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಉಂಟಾಗಿರುವ ವಿವಿಧ ಹಾನಿಗಳಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ…

Read more

ಕಂಚಿನಡ್ಕ ಟೋಲ್‌ಗೇಟ್ ಸ್ಥಾಪನೆ ವಿವಾದ – ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ತರಾಟೆ; ವಿರೋಧದಿಂದ ವಾಪಾಸಾದ ಅಧಿಕಾರಿಗಳು

ಪಡುಬಿದ್ರಿ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ನಿರ್ಮಿಸಲುದ್ದೇಶಿಸಿರುವ ಟೋಲ್‌ಗೇಟ್ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ…

Read more

ಶೀಂಬ್ರ ದೇವಸ್ಥಾನದ ಸ್ನಾನಘಟ್ಟ ಹಾಗೂ ನದಿ ದಂಡೆ ಸಂರಕ್ಷಣೆ ಕಾಮಗಾರಿ ಸ್ಥಳಕ್ಕೆ ಶಾಸಕರ ಭೇಟಿ, ಪರಿಶೀಲನೆ

ಶೀಂಬ್ರ ದೇವಸ್ಥಾನ ಸ್ನಾನಘಟ್ಟ ಹಾಗೂ ನದಿ ದಂಡೆ ಸಂರಕ್ಷಣೆ ಕಾಮಗಾರಿ ಪ್ರದೇಶಕ್ಕೆ ಅಧಿಕಾರಿಗಳೊಡನೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿಗೆ ₹2.25 ಕೋಟಿ ಅನುದಾನ ಮಂಜೂರುಗೊಳಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ…

Read more

ಮೂಡುಸಗ್ರಿ ಹಾನಿಯಾದ ಕಿರುಸೇತುವೆ 9.50 ಲಕ್ಷ ವೆಚ್ಚದಲ್ಲಿ ಶೀಘ್ರ ಮರು ನಿರ್ಮಾಣ : ಯಶ್‌ಪಾಲ್ ಸುವರ್ಣ

ಉಡುಪಿ : ಮೂಡುಸಗ್ರಿ ವಾರ್ಡಿನ ಇಂದ್ರಾಳಿ ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆ ಕುಸಿತಗೊಂಡಿರುವ ಸ್ಥಳಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿರು ಸೇತುವೆಗೆ ಹಾನಿಯಾಗಿ ವಾಹನ ಸಂಚಾರ ನಿಷೇಧವಾದ…

Read more

ಪಡುಬಿದ್ರಿ – ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ಬೃಹತ್ ಜನಾಂದೋಲನ

ಪಡುಬಿದ್ರಿ : ಪಡುಬಿದ್ರಿ – ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ಪಡುಬಿದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಬೃಹತ್ “ಜನಾಂದೋಲನ ಸಭೆ” ನಡೆಯಿರು. ಸಭೆಯಲ್ಲಿ ಸ್ಥಳೀಯರ ಜೊತೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರ…

Read more

ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಕಳವಳಕಾರಿ – ಪೇಜಾವರ ಶ್ರೀ

ಉಡುಪಿ : ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ತುಂಬ ಖೇದವಾಗಿದೆ. ಇಡೀ ಹಿಂದೂ ಸಮಾಜ ಜಾಗೃತವಾಗಬೇಕು ಮತ್ತು ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿರುವ ಆಯ್ಕೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಬಾಂಗ್ಲಾದಲ್ಲಿ ಹಿಂದೂಗಳ…

Read more

ಮರು ಮೌಲ್ಯಮಾಪನ ಶುಲ್ಕ ಮರಳಿಸದಿರಲು ತೀರ್ಮಾನ ಕೈಗೊಂಡ VTU ನಿರ್ಧಾರ ಅತ್ಯಂತ ಖಂಡನೀಯ : ಅನ್ವಿತ್ ಕಟೀಲ್

ವಿದ್ಯಾರ್ಥಿಗಳು ತಾವು ಅಂಕ ಗಳಿಸಿದ್ದರಲ್ಲಿ ಯಾವುದಾದರೂ ಸಮಸ್ಯೆಯಿದ್ದರೆ ಅಥವಾ ತಾವು ಗಳಿಸಿದ ಅಂಕದ ಕುರಿತು ಸಮಾಧಾನ ಅವರಿಗಿಲ್ಲದ್ದಿದ್ದರೆ ಅದರ ಮೇಲೆ ಮರು ಮೌಲ್ಯ ಮಾಪನ ಮಾಡಿಸುವುದು ಎಲ್ಲಾ ವಿದ್ಯಾರ್ಥಿಗಳ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯಾವ…

Read more