Police

ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಅಪಘಾತದಿಂದ ಮೃತ್ಯು

ಮಂಗಳೂರು : ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಪ್ರವಿತ್ ಆಚಾರ್ಯ(21) ಎಂಬವರು ಅರ್ಕುಳದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯರ ಪುತ್ರರಾದ ಪ್ರವಿತ್ ಆಚಾರ್ಯ ಬಂಟ್ವಾಳ ತಾಲೂಕಿನ ವಿಟ್ಲದ…

Read more

ಕಳೆದು ಹೋಗಿದ್ದ 18 ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ಉಡುಪಿ : ಕಳೆದು ಹೋಗಿದ್ದ 18 ಮಂದಿಯ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಸೋಮವಾರ ಆ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್‌ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್‌ಮೆಂಟ್ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್‌ಪಿ ಇ-ಲಾ‌ಸ್ಟ್‌ನಲ್ಲಿ ದೂರು ದಾಖಲಿಸಿದ್ದರು.…

Read more

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕಾರ್ಕಳ ವ್ಯಕ್ತಿಗೆ 8 ಲಕ್ಷ ರೂ.‌ವಂಚನೆ

ಕಾರ್ಕಳ : ಕಸಬಾ ಗ್ರಾಮದ ಶಿವಾನಂದ ವಿ. ಪದ್ಮಶಾಲಿ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ಕಳ್ಳರು ಲಕ್ಷಾಂತರ ರೂ. ವಂಚಿಸಿದ ಘಟನೆ ವರದಿಯಾಗಿದೆ. ಅಪರಿಚಿತ ವ್ಯಕ್ತಿಯು ಮುಂಬಯಿ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ…

Read more

ಪಡುಬಿದ್ರಿಯಲ್ಲಿ ಮಟ್ಕಾ ದಾಳಿ, ಇಬ್ಬರು ಆರೋಪಿಗಳ ಬಂಧನ

ಪಡುಬಿದ್ರಿ : ಇಲ್ಲಿನ ಮಾರ್ಕೆಟ್‌ ಪ್ರದೇಶದ ತರಕಾರಿ ಅಂಗಡಿಯೊಂದರ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ನೇತೃತ್ವದ ತಂಡ ಇಂದು ಬಂಧಿಸಿದೆ. ಚಂದ್ರ ಅವರಾಲು ಮಟ್ಟು ಹಾಗೂ ಮುರಳೀಧರ ಸಾಲ್ಯಾನ್‌ ಪಡಹಿತ್ಲು ಬಂಧಿತ ಆರೋಪಿಗಳು. ಬಂಧಿತರಿಂದ 1,835…

Read more

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಮೂವರ ದುರ್ಮರಣ

ಹೊನ್ನಾವರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಡಿ.31 ರಂದು ಮಂಗಳವಾರ ಮುಂಜಾನೆ ಹೊನ್ನಾವರ ಶರಾವತಿ ಸೇತುವೆಯ ಮೇಲೆ ಸಂಭವಿಸಿದೆ. ಮೃತಪಟ್ಟ ಬೈಕ್ ಸವಾರರನ್ನು ರಾಘವೇಂದ್ರ ಸೋಮಯ್ಯ ಗೌಡ ಮಾವಿನಕುರ್ವಾ(34),…

Read more

ಅಯ್ಯಪ್ಪ ಮಾಲಾಧಾರಿಗಳಿಂದ ಕೃಷ್ಣಮಠದಲ್ಲಿ ದಾಂಧಲೆ, ಹಲ್ಲೆ – ಆರೋಪಿಗಳ ಬಂಧನ

ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಸೆಂಬರ್ 29ರಂದು ರಾತ್ರಿ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ 8 ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಬಾದಿನ…

Read more

ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ : ಆರೋಪಿಗೆ ಮರಣ ದಂಡನೆ ಪ್ರಕಟ

ಮಂಗಳೂರು : ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ ಮತ್ತು ಪತ್ನಿಯನ್ನು ಕೊಲೆಗೆ ಯತ್ನಿಸಿದ ಅಪರಾಧಿ ಮುಲ್ಕಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿಯ ಹಿತೇಶ್ ಶೆಟ್ಟಿಗಾರ್ ಯಾನೆ ಹಿತೇಶ್ ಕುಮಾರ್ (43) ಎಂಬಾತನಿಗೆ ಮಂಗಳೂರಿನ 3ನೇ…

Read more

ನಿಷೇದಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡಲು ಯತ್ನ; ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟಪಾಡಿ ಕೋಟೆ ಗ್ರಾಮದ ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಬಡಾ ಉಚ್ಚಿಲ ನಿವಾಸಿ ಎನ್ ಎಂ ಮಹಮ್ಮದ್…

Read more

ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಎಪಿಕೆ ಫೈಲ್‌ಗ‌ಳ ಕುರಿತು ಎಚ್ಚರ – ಉಡುಪಿ ಎಸ್ಪಿ

ಉಡುಪಿ : ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಎಪಿಕೆ ಫೈಲ್‌ಗ‌ಳ ಕುರಿತು ಎಚ್ಚರಿಕೆ ವಹಿಸವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ. ಹೊಸ ವರ್ಷದ ಸಂದರ್ಭವನ್ನೇ ಬಳಸಿಕೊಂಡು ಸೈಬರ್‌ ಕ್ರಿಮಿನಲ್‌ಗ‌ಳು ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಹಾನಿಕಾರಕ ಲಿಂಕ್‌ ಮತ್ತು…

Read more

ಸಮುದ್ರದ ಅಲೆಗೆ ಕೊಚ್ಚಿಹೋಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿ ಮೃತ್ಯು

ಉಳ್ಳಾಲ : ಸಮುದ್ರ ಪಾಲಾಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಿ ದಡಕ್ಕೆ ಕರೆತಂದ ವ್ಯಕ್ತಿಯೊಬ್ಬರು ದೈತ್ಯ ಅಲೆಯ ಹೊಡೆತದಿಂದ ಮೃತಪಟ್ಟ ಘಟನೆ ಸೋಮೇಶ್ವರ ಉಚ್ಚಿಲದ ಪೆರಿಬೈಲು ಎಂಬಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರೋಡ್ ನಿವಾಸಿ ಕೆ.ಎಂ.ಸಜ್ಜದ್ ಅಲಿ (45)ಮೃತಪಟ್ಡ…

Read more