Police

ಗಾಂಜಾ ಮಾರಾಟಕ್ಕೆ ಯತ್ನ; ಇಬ್ಬರು ಸೆರೆ

ಮೂಲ್ಕಿ : ಯುವಕರಿಬ್ಬರು ಬಪ್ಪನಾಡು ಗ್ರಾಮದ ಸುಖಾನಂದ ಪಾರ್ಕ್‌ ಬಳಿ ಗಾಂಜಾ ಮಾರಾಟಕ್ಕಾಗಿ ಯತ್ನಿಸಿ ಗಿರಾಕಿಗಳಿಗಾಗಿ ಕಾಯುತ್ತಿದ್ದ ಸಂದರ್ಭ ಮಂಗಳೂರು ಉತ್ತರ ವಿಭಾಗದ ಮಾದಕ ವಸ್ತು ನಿಯಂತ್ರಣ ವಿಭಾಗದ ಅಧಿಕಾರಿಗಳು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ನಾಜಿಲ್‌ ಮತ್ತು ಸುಕೇಶ್‌ ಬಂಧಿತ ಆರೋಪಿಗಳು.…

Read more

ಆಟೋ ಚಾಲಕ ನೇಣಿಗೆ ಶರಣು

ಉಡುಪಿ : ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಿಕ್ಷಾ ಚಾಲಕ ಕಟಪಾಡಿ ಪಳ್ಳಿಗುಡ್ಡೆಯ ದೀಪಕ್ ಆ‌ರ್. (34) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ರೂಂನ ಟಾರಸಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಉಡುಪಿಯ ಕಲ್ಸಂಕ ಆಟೋ ನಿಲ್ದಾಣದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅವಿವಾಹಿತರಾಗಿದ್ದ…

Read more

ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿದಾರನಾಗಿ ವಂಚನೆ – ಆರೋಪಿ ಅಂದರ್

ಮಂಗಳೂರು : ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೆ.ಉಮ್ಮರಬ್ಬ ಮೊಯ್ದೀನ್ ಬಂಧಿತ ಆರೋಪಿ. ಈ ಬಗ್ಗೆ ಮಂಗಳೂರು ಉತ್ತರ…

Read more

ಚಾಕು ತೋರಿಸಿ ಮೆಡಿಕಲ್ ಶಾಪ್‌ನಲ್ಲಿ ಹಣ ಸುಲಿಗೆಗೈದ ಆರೋಪಿ ಅರೆಸ್ಟ್

ಮಂಗಳೂರು : ಚಾಕು ತೋರಿಸಿ ಮೆಡಿಕಲ್ ಶಾಪ್‌ನ ಕ್ಯಾಶ್ ಡ್ರಾವರ್‌ನಲ್ಲಿದ್ದ ಹಣ ಸುಲಿಗೆಗೈದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೊಂದೇಲ್‌ನ ಪಟ್ರಕೋಡಿ ನಿವಾಸಿ ಸುನೀಲ್(31) ಬಂಧಿತ ಆರೋಪಿ. ಡಿಸೆಂಬರ್ 28ರಂದು ಮಧ್ಯಾಹ್ನ ಮಂಗಳೂರಿನ ನಾಗುರಿ ಮೆಡಿಕಲ್ ಶಾಪ್‌ವೊಂದಕ್ಕೆ ಆರೋಪಿ…

Read more

ಧರ್ಮಸ್ಥಳ ನೇತ್ರಾವತಿಯ ಉಪನದಿಗೆ ಗೋಮಾಂಸ ತ್ಯಾಜ್ಯ ಎಸೆದ ಕಿಡಿಗೇಡಿಗಳು : ಕೂಡಲೇ ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ಬೆಳ್ತಂಗಡಿ : ಕರಾವಳಿಯ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಕಿಡಿಗೇಡಿಗಳು ಗೋ ಮಾಂಸದ ತ್ಯಾಜ್ಯವನ್ನು ಎಸೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ…

Read more

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಕಾರಿನಲ್ಲಿದ್ದ ನಾಲ್ವರು ಪಾರು..!

ಮಂಗಳೂರು : ಮಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾ‌ಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಿನ್ನೆ ಬುಧವಾರ ಸಂಭವಿಸಿದೆ. ಮೇರಿಹಿಲ್‌ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ಸಂಜೆ ವೇಳೆ ಸಂಚರಿಸುತ್ತಿದ್ದ ವೋಕ್ಸ್‌ವ್ಯಾಗನ್‌ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರು ನಿಲ್ಲಿಸಿ ಕಾರಿನಲ್ಲಿದ್ದ ನಾಲ್ವರು ಕೂಡಲೇ ಕೆಳಗಿಳಿದು…

Read more

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ – ವ್ಯಕ್ತಿಗೆ 49 ಲಕ್ಷ ರೂ ವಂಚನೆ

ಉಡುಪಿ : ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ಮೂಡುಬೆಳ್ಳೆಯ ಫ್ರಾನ್ಸಿಸ್‌ ಕ್ಯಾಸ್ತಲಿನೋ ಅವರ ಪುತ್ರನ ಮೊಬೈಲ್‌ ಸಂಖ್ಯೆಯನ್ನು ಯಾರೋ ಅಪರಿಚಿತ ವ್ಯಕ್ತಿಗಳು ಸ್ಟಾಕ್‌ ಮಾರ್ಕೆಟ್‌ ನೇವಿಗೇಶನ್‌ ಎಂಬ ವಾಟ್ಸಾಪ್‌ ಗ್ರೂಪ್‌‌ಗೆ…

Read more

ಅಜ್ಜರಕಾಡು ಸರಕಾರಿ ಜಿಮ್‌ನಲ್ಲಿ ಹೊಡೆದಾಟ : ದೂರು-ಪ್ರತಿದೂರು ದಾಖಲು

ಉಡುಪಿ : ಅಜ್ಜರಕಾಡು ಸರಕಾರಿ ಜಿಮ್‌ನಲ್ಲಿ ಹೊಡೆದಾಟ ನಡೆದಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಉದ್ಯಾವರ ಪ್ರದೀಪ್‌ ಸ್ಯಾಮುವೆಲ್‌ ಎಂದಿನಂತೆ ಡಿ.31ರಂದು ಬೆಳಗ್ಗೆ ಜಿಮ್‌ಗೆ ತೆರಳಿದ್ದು, ವಾಪಸ್‌ ಬರುವಾಗ ಅದೇ ಜಿಮ್‌ನ ಸದಸ್ಯ ಲಕ್ಷೀತ್‌ ಎಂಬಾತ ‘ನಿಮ್ಮನ್ನು ಜಿಮ್‌…

Read more

ಕಟ್ಟೆಯಲ್ಲಿ ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ ವೃದ್ಧ ಪಾಳುಬಾವಿಗೆ ಬಿದ್ದು ಸಾವು

ಉಳ್ಳಾಲ : ಇಲ್ಲಿನ ಸೋಮೇಶ್ವರ ಉಚ್ಚಿಲ ಬಳಿಯ ಸಮುದ್ರ ತೀರದ ಪಾಳುಬಾವಿಯ ಕಟ್ಟೆಯಲ್ಲಿ ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ ವೃದ್ಧ ಮೀನುಗಾರರೊಬ್ಬರು ಆಯತಪ್ಪಿ ಬಾವಿಯೊಳಗಡೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ…

Read more

ಲಾರಿ ಅಪಘಾತ ಡೆಲಿವರಿ ಬಾಯ್ ದಾರುಣ ಸಾವು

ಉಳ್ಳಾಲ : ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ, ಸ್ವಿಗ್ಗಿ ಡೆಲಿವರಿ ಬಾಯ್ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ.66 ರ ಸಂಕೊಳಿಗೆ ಸಮೀಪ ಸಂಭವಿಸಿದೆ. ದೇರಳಕಟ್ಟೆ ಪಾನೀರು ನಿವಾಸಿ ಉಮ್ಮರ್ ಫಾರುಕ್ ಯಾನೆ ಅಝರ್ (31) ಸಾವನ್ನಪ್ಪಿದವರು. ಅವಿವಾಹಿತರಾಗಿರುವ ಇವರು ಸ್ವಿಗ್ಗಿ ಡೆಲಿವರಿಯಲ್ಲಿ…

Read more