Police

ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಆರಿಸಲು ಹೋದ ಕೃಷಿಕ ಸಜೀವ ದಹನ

ಉಡುಪಿ : ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಸುತ್ತೆಲ್ಲಾ ಹಬ್ಬುತ್ತಿರುವ ವೇಳೆ ಅದನ್ನು ಆರಿಸಲು ಹೋದ ಕೃಷಿಕರೋರ್ವರು ಗದ್ದೆಯಲ್ಲೇ ಸಜೀವ ದಹನವಾದ ದಾರುಣ ಘಟನೆ ಎ. 5ರಂದು ಮಧ್ಯಾಹ್ನ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಗೆ…

Read more

ಜೈಲಿನ ಜಾಮರ್ ವಿರುದ್ಧ ಬಿಜೆಪಿ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರು : ಮಂಗಳೂರು ಜೈಲ್‌ನ ಜಾಮರ್‌ನಿಂದ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು, ನೆಟ್‌ವರ್ಕ್ ಸಮಸ್ಯೆ ಬಗೆಹರಿಸದ ಹಿನ್ನೆಲೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಜಿಲ್ಲಾ ಕಾರಾಗೃಹದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಮೊಬೈಲ್‌ನ್ನು ನೆಲಕ್ಕೆ ಬಡಿದು…

Read more

ಪಡುಬಿದ್ರಿ ಪೊಲೀಸ್ ಠಾಣೆ ಸಬ್‌ಇನ್ಸ್ಪೆಕ್ಟರ್ ಪ್ರಸನ್ನ ಪಿ. ಎಸ್‌ರವರಿಗೆ ಕಂಚಿನಡ್ಕ ಫ್ರೆಂಡ್ಸ್ ವತಿಯಿಂದ ಗೌರವಾರ್ಪಣೆ

ಪಡುಬಿದ್ರೆ : ಕರ್ನಾಟಕ ಸರಕಾರದ 2024ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್, ದಕ್ಷ ಹಾಗೂ ಪ್ರಾಮಾಣಿಕ ಜನಸ್ನೇಹಿ ಪೊಲೀಸ್ ಎಂಬ ಖ್ಯಾತಿಗೆ ಪಾತ್ರರಾದ ಪ್ರಸನ್ನ ಪಿ. ಎಸ್‌ರವರಿಗೆ ಕಂಚಿನಡ್ಕ ಫ್ರೆಂಡ್ಸ್ ವತಿಯಿಂದ ಎಪ್ರಿಲ್ 4…

Read more

ಟಿಪ್ಪರ್ ಡಿಕ್ಕಿ – ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸಾವು

ಬ್ರಹ್ಮಾವರ : ಮಾಬುಕಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾರಕೂರು ಮಾಸ್ತಿನಗರದ ಮಮ್ತಾಜ್ (44) ಮೃತಪಟ್ಟಿದ್ದಾರೆ. ಬಾರಕೂರಿನ ಪೂರ್ಣಿಮಾ ಮತ್ತು ಮಮ್ತಾಜ್ ಸ್ಕೂಟಿಯಲ್ಲಿ ಸಾಸ್ತಾನ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಸ್ಕೂಟಿಗೆ…

Read more

ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ; ಸವಾರ ಮೃತ್ಯು, ಸಹಸವಾರ ಗಂಭೀರ

ಉಡುಪಿ : ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಬ್ರಹ್ಮಾವರ ತಾಲೂಕಿನ ಪೇತ್ರಿ ಜಂಕ್ಷನ್‌ನಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಸಾಸ್ತಾನ ಐರೋಡಿ ಗೋಳಿಬೆಟ್ಟು ನಿವಾಸಿ ದೀಕ್ಷಿತ್ (24)…

Read more

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ಉಡುಪಿ : ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಘಟಕದಲ್ಲಿ ಕೆಲವು ದಿನಗಳಿಂದ ರಕ್ಷಿಸಿಡಲಾಗಿದ್ದ, ಅಪರಿಚಿತ ಶವದ ಅಂತ್ಯಸಂಸ್ಕಾರವು ಕಾನೂನು ಪ್ರಕ್ರಿಯೆಗಳು ನಡೆದಾದ ಬಳಿಕ ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಗೌರವಯುತವಾಗಿ ಗುರುವಾರ ನಡೆಸಲಾಯಿತು. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿತ್ತು. ಮಲ್ಪೆ‌…

Read more

ರೈಲು ಚಲಿಸುತ್ತಿದ್ದ ವೇಳೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಸಿಬ್ಬಂದಿ

ಸುರತ್ಕಲ್ : ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಇಬ್ಬರು ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಗುರುವಾರ ನಡೆದಿದೆ. ಜಗದೀಶ್ ಮತ್ತು ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಪ್ರಯಾಣಿಕನ ರಕ್ಷಣೆ ಮಾಡಿದ್ದ ಸಿಬ್ಬಂದಿ. ಸುರತ್ಕಲ್ ರೈಲ್ವೆ…

Read more

ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಅಪಘಾತ; ಒರ್ವ ಮೃತ್ಯು

ಉಪ್ಪಿನಂಗಡಿ : ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬನ್ನೊಂದು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಪಲ್ಟಿಯಾಗಿ ಓರ್ವ ಪ್ರಯಾಣಿಕ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಎ.4 ರಂದು ಮುಂಜಾನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ…

Read more

ಇಮೇಲ್‌ಗೆ ಬಂದ ಲಿಂಕ್ ಕ್ಲಿಕ್ಕಿಸಿದಾಗ ಲಕ್ಷಾಂತರ ರೂ. ಮಂಗಮಾಯ!

ಉಡುಪಿ : ಇ-ಮೇಲ್‌ಗೆ ಬಂದಿದ್ದ ಲಿಂಕ್ ಕ್ಲಿಕ್ಕಿಸಿದ ವ್ಯಕ್ತಿ ಲಕ್ಷಾಂತರ ರೂ.ಕಳೆದುಕೊಂಡಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನೆಟ್‌ಫ್ಲಿ‌ಕ್ಸ್‌ನ ಚಂದಾ ಮುಗಿದುಹೋಗಿರುವ ಬಗ್ಗೆ ಉಡುಪಿಯ ದಿಲೀಪ್ ಅವರ ಇ-ಮೇಲ್‌‌ಗೆ ಸಂದೇಶ ಬಂದಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು…

Read more

ಹಿಟ್ ಅಂಡ್ ರನ್ – ಮಹಿಳೆ ಸಾವು, ಮತ್ತೋರ್ವರಿಗೆ ಗಾಯ

ಉಡುಪಿ : ಬ್ರಹ್ಮಾವರ ಠಾಣೆ ವ್ಯಾಪ್ತಿಯ ಮಾಬುಕಳ ಸೇತುವೆ ಬಳಿ ಟಿಪ್ಪರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮತ್ತೋರ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮ್ತಾಜ್ (44) ಮೃತ ಮಹಿಳೆ. ಮಮ್ತಾಜ್‌ರನ್ನು ಪರಿಚಿತರು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು…

Read more