Nature

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ – ಉಕ್ಕಿ‌ಹರಿದ ದರ್ಪಣ ‌ತೀರ್ಥ ನದಿ

ಸುಳ್ಯ : ದ.ಕ.ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪರಿಸರ ಹಾಗೂ ಸುತ್ತಮುತ್ತಲು ಭಾರೀ ಮಳೆಯಾಗುತ್ತಿದೆ. ಪರಿಣಾಮ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಯು ಉಕ್ಕಿ ಹರಿಯುತ್ತಿದೆ. ದರ್ಪಣ ‌ತೀರ್ಥ ನದಿಯು ಪ್ರವಾಹದ ರೀತಿಯಲ್ಲಿ ಉಕ್ಕಿ‌ಹರಿದ ಪರಿಣಾಮ ಶ್ರೀ ಆದಿಸುಬ್ರಹ್ಮಣ್ಯ…

Read more

ಮಗನ ಹುಟ್ಟು ಹಬ್ಬಕ್ಕಾಗಿ ಕಡವೆ ಹತ್ಯೆ : ಕೋವಿ ಹಾಗೂ ಕಡವೆ ಮಾಂಸ ವಶಕ್ಕೆ

ಉಪ್ಪಿನಂಗಡಿ : ಮಗನ ಹುಟ್ಟು ಹಬ್ಬಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಫ್ರಿಡ್ಜ್‌ನಲ್ಲಿ ಇರಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡವು ಪತ್ತೆ ಹಚ್ಚಿದ್ದು, ಸ್ವಾಧೀನಪಡಿಸಿಕೊಳ್ಳಲಾಗಿದೆ. ಶಿರಾಡಿ ಗ್ರಾಮದ…

Read more

ಬಾವಿಯೊಳಗೆ ಆಶ್ರಯ ಪಡೆದಿದ್ದ 8 ಅಡಿ ಉದ್ದದ ನಾಗರಹಾವು ರಕ್ಷಣೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗುತ್ತ‌ ಕಾಡ್‌ ಜೆ.ಎಚ್. ಜಲೀಲ್‌ರವರ ಮನೆಯ ಬಾವಿಯೊಳಗೆ 8 ಅಡಿ ಉದ್ದದ ದೊಡ್ಡ ಗಾತ್ರದ ನಾಗರಹಾವು ಪತ್ತೆಯಾಗಿದೆ. ತಕ್ಷಣವೇ ಮನೆಯವರು ಉರಗ ತಜ್ಞ ಇಸ್ಮಾಯಿಲ್ ಅಡ್ಡೂರು ಇವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ನೇಕ್…

Read more

ರೈಲು ಡಿಕ್ಕಿಯಾಗಿ ಚಿರತೆ ಸಾವು

ಕುಂದಾಪುರ : ರೈಲು ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ಸಂಭವಿಸಿದೆ. ಸುಮಾರು 5 ವರ್ಷದ ಗಂಡು ಚಿರತೆಯು ಅರಣ್ಯದಿಂದ ಆಹಾರ ಅರಸಿಕೊಂಡು ಬಂದು ರೈಲ್ವೆ ಹಳಿ ದಾಟುವಾಗ ಈ ಅವಘಡ…

Read more

ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಪತ್ತೆ

ಹೆಬ್ರಿ : ಹೆಬ್ರಿ ತಾಲೂಕಿನ ಬಲ್ಲಾಡಿ ಪ್ರದೇಶದಲ್ಲಿ, ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ(85 ವರ್ಷ) ಅವರ ಮೃತದೇಹ ಪತ್ತೆಯಾಗಿದೆ. ಬಲ್ಲಾಡಿ ಪರಿಸರದ ಗದ್ದೆ ಬದಿಯಲ್ಲಿ ವೃದ್ಧೆಯ ದೇಹ ಪತ್ತೆಯಾಗಿದ್ದು, ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅವರು ಸಾವಿಗೀಡಾಗಿದ್ದು ಭಾನುವಾರ…

Read more

ಬಲೆಗೆ ಸಿಕ್ಕಿದ ತಿಮಿಂಗಿಲವನ್ನು ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರ ತಂಡಕ್ಕೆ ಗೌರವ

ಮಲ್ಪೆ : ಇತ್ತೀಚೆಗೆ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನ ಬಲೆಗೆ ಅಕಸ್ಮಿಕವಾಗಿ ಸಿಲುಕಿದ ಅಳಿವಿನಂಚಿನಲ್ಲಿರುವ ತಿಮಿಂಗಿಲವನ್ನು ಮರಳಿ ನೀರಿಗೆ ಬಿಟ್ಟ ಮೀನುಗಾರ ತಂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಮಲ್ಪೆ ಬಂದರಿನ…

Read more

ಕಾಲೇಜಿನೊಳಗೆ ಬಂದು ಕೆಲಹೊತ್ತು ಆತಂಕ ಸೃಷ್ಟಿಸಿದ ಉಡ!

ಕಾಪು : ಪೊಲಿಪುವಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂದು ಅಪರೂಪದ ಅತಿಥಿಯ ಆಗಮನವಾಗಿತ್ತು. ಕಾಲೇಜು ಕೊಠಡಿಯೊಳಗೆ ಒಮ್ಮಿಂದೊಮ್ಮೆಲೆ ಸರಸರನೆ ‘ಉಡ’ದ ಪ್ರವೇಶವಾದಾಗ ಇಲ್ಲಿನ ಶಿಕ್ಷಕರು‌ ಗಾಬರಿಗೊಳಗಾದರು. ಒಂದು ಕ್ಷಣ ಇದು ಯಾವ ಪ್ರಾಣಿ ಎಂದೇ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಕೆಲ ಹೊತ್ತು ಉಡ…

Read more

ನವರಾತ್ರಿಗೆ ಆಕಾಶದಲ್ಲಿ ಅಪರೂಪದ ಅತಿಥಿಯ ಆಗಮನ

ಉಡುಪಿ : ಈ ಬಾರಿ ನವರಾತ್ರಿಗೆ ಆಕಾಶದಲ್ಲಿ ಅಪರೂಪದ ಅತಿಥಿಯ ದರ್ಶನವಾಗಲಿದೆ. ಅಪರೂಪದ ಧೂಮಕೇತು ಒಂದು ಬರಿಯ ಕಣ್ಣಿಗೆ ಕಾಣ ಸಿಗಲಿದೆ. ಒಂದು ಧೂಳು ಹಾಗೂ ಹಿಮಕಲ್ಲಿನ ಉಂಡೆಯು ಸೌರಮಂಡಲದ ಅಂಚಿನಿಂದ ಹೊರಟಿತ್ತು. ಹಿಂದಿನ ವರ್ಷ ಚೀನಾದಲ್ಲಿ ಖಗೋಳಶಾಸ್ತ್ರಜ್ಞರು ಇದನ್ನು ಗುರುತಿಸಿದ್ದರು.…

Read more

ಉಡದ ಮುಖದಲ್ಲಿ ಸಿಕ್ಕಿಹಾಕೊಂಡ ತಂಪು ಪಾನೀಯದ ಟಿನ್ – ಒದ್ದಾಟ; ಉರಗ ತಜ್ಞರಿಂದ ರಕ್ಷಣೆ

ಕಾಪು : ಆಹಾರ ಅರಸಿ ಬಂದ ಉಡವೊಂದರ ಮುಖಕ್ಕೆ ತಂಪು ಪಾನೀಯದ ಟಿನ್ ಸಿಕ್ಕಿಕೊಂಡು ಒದ್ದಾಟ ನಡೆಸಿದ ಪ್ರಸಂಗ ನಡೆದಿದೆ. ಕಳೆದ ಎರಡು ದಿನಗಳಿಂದ ಆತ್ತಿಂದಿತ್ತ ಚಲಿಸುತ್ತಿದ್ದ ಉಡವು ತನ್ನ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಕಾಪುವಿನ ದಂಡತೀರ್ಥ ನಡಿಕೆರೆ ರತ್ನಕರ ಶೆಟ್ಟಿ…

Read more

ಕಾರಿನ ಬಾನೆಟ್‌ ಒಳಗೆ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ!

ಬೈಂದೂರು : ಬೈಂದೂರಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಅವರ ಕಾರಿನ ಬಾನೆಟ್‌ ಒಳಗೆ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಬಡಾಕೆರೆ ಜೋಯಿಸರ ಬೆಟ್ಟು ನಿವಾಸಿಯಾಗಿದ್ದು, ಅವರ ಕಾರಿನ ಬೋನೆಟ್ ಒಳಗೆ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತು. ಎಂದಿನಂತೆ…

Read more