Music, Art, Culture

ಶ್ರೀ ಕೃಷ್ಣ ಮಠದಲ್ಲಿ ವಿಜಯದಾಸರ ಆರಾಧನೆ; ಮೇಘಾಲಯದ ರಾಜ್ಯಪಾಲ ವಿಜಯಶಂಕರ್ ಭಾಗಿ

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಪಾಲ್ಗೊಂಡರು. ಶ್ರೀ ಕೃಷ್ಣ ಮುಖ್ಯ ಪ್ರಾಣರ ದರ್ಶನಗೈದ ರಾಜ್ಯಪಾಲರು ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಅನುಗ್ರಹ ಪ್ರಸಾದವನ್ನು ಪಡೆದರು. ಶ್ರೀಪಾದರ…

Read more

ಹೆಬ್ರಿಯ ಹೆಬ್ಬೇರಿ ಯಕ್ಷಲೋಕದ 5ನೇ ವಾರ್ಷಿಕೋತ್ಸವ; ಕಲಾ ಸೇವೆಯೇ ಬದುಕಿನ ಸಾರ್ಥಕ್ಯಕ್ಕೆ ದಾರಿ : ಡಾ. ತಲ್ಲೂರು

ಉಡುಪಿ : ಸಮಾಜದ ಋಣ ತೀರಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಅದು ಶಿಕ್ಷಣ, ಸಮಾಜ ಸೇವೆ, ಸಾಂಸ್ಕೃತಿಕ ರಂಗವೇ ಇರಬಹುದು. ಆದರೆ ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಿ, ಸಾಧಕರನ್ನು ಗುರುತಿಸಿ ಅಭಿನಂದಿಸುವುದರಲ್ಲಿ ಸಿಗುವ ಆತ್ಮ ತೃಪ್ತಿಇನ್ನಾವುದೇ ಸೇವೆಯಿಂದ ಸಿಗುವುದು ದುರ್ಲಭ.…

Read more

ನಾಗೂರಿನಲ್ಲಿ ಧಾರೇಶ್ವರ ತಾಳಮದ್ದಲೆ ಸಪ್ತಾಹ ಸಮಾರೋಪ; ಪ್ರಶಸ್ತಿ ಪ್ರದಾನ

ಉಡುಪಿ : ಯಾವುದೇ ಕಲೆ ಇರಲಿ, ಅದನ್ನು ಪೋಷಿಸಿಕೊಂಡು, ಆರಾಧಿಸಿಕೊಂಡು ಬಂದ ಅಭಿಮಾನಿಗಳಿಂದ ಅದು ಅಳಿಯದೆ ಉಳಿಯುತ್ತದೆ. ಹಾಗೆಯೇ ಯಕ್ಷಗಾನದ ಭಾಗವತ ದಿಗ್ಗಜ ಸುಬ್ರಹ್ಮಣ್ಯ ಧಾರೇಶ್ವರ ಅವರು ಆರಂಭಿಸಿರುವ ಯಕ್ಷಗಾನ ಜ್ಞಾನಯಜ್ಞ ಕಾರ್ಯಕ್ರಮವನ್ನು ಅವರ ಅಭಿಮಾನಿಗಳ ಸಹಕಾರದಲ್ಲಿ ನಡೆಸುತ್ತಿರುವುದು ಅಭಿನಂದನೀಯ ಎಂದು…

Read more

ಹಿರಿಯ ಭಾಗವತ ಪದ್ಯಾಣ ಗೋವಿಂದ ಭಟ್ ಅವರಿಗೆ ಸರ್ಪಂಗಳ ಸ್ಮಾರಕ ಪ್ರಶಸ್ತಿ ಪ್ರದಾನ

ಉಡುಪಿ : ಜೀವ ವಿಮಾ ಅಧಿಕಾರಿಗಳಾಗಿ ನಿವೃತ್ತರಾಗಿದ್ದ, ಕಲಾಪ್ರೇಮಿ ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮರಣೆಯಲ್ಲಿ ಪ್ರತೀ ವರ್ಷ ಆಯೋಜಿಸುತ್ತಾ ಬಂದ ಸರ್ಪಂಗಳ ಯಕ್ಷೋತ್ಸವ, ಯಕ್ಷಗಾನ ಕಲಾರಂಗದ ಐ.ವೈ.ಸಿ.ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಭಾಗವತರಾದ ಪದ್ಯಾಣ ಗೋವಿಂದ ಭಟ್…

Read more

ಹುಲಿವೇಷ ಕುಣಿತಕ್ಕೆ ಆಗುತ್ತಿರುವ ಅಪಪ್ರಚಾರ ಖಂಡಿಸಿ ಬೃಹತ್ ಪಾದಯಾತ್ರೆ; ಅಪಪ್ರಚಾರ ಖಂಡಿಸಿದ ನೂರಾರು ಹುಲಿವೇಷಧಾರಿಗಳು

ಉಡುಪಿ : ಉಡುಪಿ ಶೈಲಿಯ ಹುಲಿವೇಷ ಕುಣಿತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಹಾಗೂ ಸಾಂಪ್ರದಾಯಿಕ ಹುಲಿ ಕುಣಿತವನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿಯ ಸಮಾನಮನಸ್ಕ ತಂಡಗಳ ಸಂಯೋಜನೆಯಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಿತು. ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಡೆದ ಬಹೃತ್ ಪಾದಯಾತ್ರೆಯಲ್ಲಿ…

Read more

ಅ. 27ರಂದು ಚೌರಾಸಿಯಾ ಮತ್ತು ಚಟರ್ಜಿ ಸಮಾಗಮ; “ಸ್ವರಗಳ ಸಂಜೆ’ಯಲ್ಲಿ ಹರಿಯಲಿದೆ ಶಾಸ್ತ್ರೀಯ ಸಂಗೀತ ಸುಧೆ

ಮಂಗಳೂರು : ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಅ. 27ರ ಭಾನುವಾರ ಸಂಜೆ 5.30ರಿಂದ “ಸ್ವರಗಳ ಸಂಜೆ – ಶಾಸ್ತ್ರೀಯ ಸಂಗೀತದ ಸಂಜೆ” ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶ ವಿದೇಶಗಳ ಪ್ರಖ್ಯಾತ ವೇದಿಕೆಗಳಲ್ಲಿ ಯಶಸ್ವಿ ಕಾರ್ಯಕ್ರಮ…

Read more

2024ರ ಟೋಕಿಯೋ ಸಾಕ್ಷ್ಯಚಿತ್ರೋತ್ಸವಕ್ಕೆ ಪಿಲಿವೇಷ (ಹುಲಿವೇಷ), ಕುರಿತಾದ ಮಾಹೆಯ ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಲಾಗಿದೆ

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ), ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF) 2024 ರಲ್ಲಿ ಅಧಿಕೃತ ಆಯ್ಕೆಯನ್ನು ಗಳಿಸಿದೆ. ಈ ಚಲನಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವರ್ಗದಲ್ಲಿ…

Read more

ಕೃಷ್ಣನಗರಿಯಲ್ಲಿ ಮೂರು ದಿನಗಳ ಪ್ರಾಚ್ಯವಿದ್ಯಾ ಸಮ್ಮೇಳನ – ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

ಉಡುಪಿ : ಅಕ್ಟೋಬರ್ 24ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 5.30ರಿಂದ 7.30ರವರೆಗೆ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬಾಬಾ ರಾಮ್‌ದೇವ್‌ ಅವರಿಂದ ಪತಂಜಲಿ ಯೋಗ ಶಿಬಿರ ನಡೆಯಲಿದೆ.ಮೊದಲ ದಿನವಾದ ಇಂದು ರಾಮ್ ದೇವ್ ನೇತೃತ್ವದಲ್ಲಿ ಯೋಗ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಬಾಬಾ…

Read more

ಪ್ರಾಚ್ಯ ವಿದ್ಯಾ ಸಮ್ಮೇಳನ ಉದ್ಘಾಟನೆಗೆ ಉಡುಪಿಗೆ ಆಗಮಿಸಿದ ಬಾಬಾ ರಾಮದೇವ್

ಉಡುಪಿ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಮೂರು ದಿನಗಳ ಪ್ರಾಚ್ಯ ವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಬಾಬಾ ರಾಮದೇವ್ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಾಬಾ ರಾಮದೇವ್‌ರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನೆರೆದ ಯೋಗಮಾತೆಯರು ಆರತಿಯನ್ನು ಬೆಳಗಿದರು. ಮಠದ ಅಂತಾರಾಷ್ಟ್ರೀಯ…

Read more

ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಅಕ್ಟೋಬರ್ 27 ರಂದು ರಾಜಾoಗಣದಲ್ಲಿ ಜಾನಪದ ಹಬ್ಬ – 2024

ಉಡುಪಿ : ನಾಡೋಜ ಎಚ್. ಎಲ್. ನಾಗೇಗೌಡರಿಂದ 1970ರಲ್ಲಿ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಆಧುನಿಕತೆಯ ನಡುವೆ ಮರೆಯಾಗುತ್ತಿರುವ ನಾಡಿನ ಜಾನಪದ ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ, ಪುನರುಜೀವನ ಹಾಗೂ ಪ್ರಸಾರದ ಕಾರ್ಯದಲ್ಲಿ ನಿರತವಾಗಿದೆ. ಇದರ ಉಡುಪಿ ಜಿಲ್ಲಾ ಘಟಕವು ಖ್ಯಾತ…

Read more