ಇಹಲೋಕ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್
ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಯಕ್ಷಗಾನ ಪ್ರವರ್ತಕ ಪಾರ್ತಿಸುಬ್ಬನ ಊರು ಕಾಸರಗೋಡಿನ ಕುಂಬಳೆಯಲ್ಲಿ 1948ರಲ್ಲಿ ಜನಿಸಿದ ಇವರು ಕುಂಬಳೆ ಶ್ರೀಧರ ರಾವ್ ಎಂದೇ ಪ್ರಖ್ಯಾತರು. ಮೂರನೇ ತರಗತಿ ವ್ಯಾಸಂಗ ಮಾಡಿದ…