Health

ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೆಎಂಸಿಯಲ್ಲಿ ಬಾಲ್ಯದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ

ಮಣಿಪಾಲ : ಮಕ್ಕಳ ಆಂಕೊಲಾಜಿ ವಿಭಾಗದ ಐತಿಹಾಸಿಕ ಬೆಳವಣಿಗೆಯಲ್ಲಿ, ಹೆಚ್ಚಿನ ಅಪಾಯದ ನ್ಯೂರೋಬ್ಲಾಸ್ಟೊಮಾದಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಡೈನುಟುಕ್ಸಿಮಾಬ್ ಬೀಟಾ ಎಂಬ ಜೀವ ಉಳಿಸುವ ಇಮ್ಯುನೊಥೆರಪಿಯನ್ನು ನೀಡಲಾಗಿದೆ. ಈ ಇಮ್ಯುನೊಥೆರಪಿ ಪ್ರಸ್ತುತ ಈ ಕ್ಯಾನ್ಸರ್ ಅನ್ನು…

Read more

ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಕಟ್ಟೆಚ್ಚರ ವಹಿಸಿ – ಆರೋಗ್ಯ ಇಲಾಖೆಗೆ ಉಡುಪಿ ಡಿಸಿ ಸೂಚನೆ

ಉಡುಪಿ : ಬೇಸಿಗೆ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಜಾತ್ರೆ, ರಥೋತ್ಸವ, ಊರ ಹಬ್ಬ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳು ಬೇನೆ, ಕಾಲರಾ, ವಿಷಮಶೀತ ಜ್ವರ, ಕಾಮಾಲೆ ಸೇರಿದಂತೆ ವಿವಿಧ ಸಾಂಕ್ರಾಮಿಕ…

Read more

ಮಂಗಳೂರು ಜೈಲಿನಲ್ಲಿ ಫುಡ್ ಪಾಯಿಸನ್ 30ಕ್ಕೂ ಅಧಿಕ ಕೈದಿಗಳು ಅಸ್ವಸ್ಥ

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿನ ಸುಮಾರು ಮೂವತ್ತಕ್ಕೂ ಅಧಿಕ ಕೈದಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನ ಆಹಾರ ಸೇವಿಸಿದ ಕೆಲ ಸಮಯದ ಬಳಿಕ ಕೈದಿಗಳು ವಾಂತಿ ಮಾಡಲು ಆರಂಭಿಸಿದ್ದಾರೆ. ಇನ್ನೂ ಕೆಲವರಿಗೆ ವಾಂತಿಭೇದಿ ಎರಡೂ ಕೂಡಾ ಕಾಣಸಿಕೊಂಡು ತಲೆ…

Read more

ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾಗಿ ಡಾ.ನಿಕಿನ್ ಶೆಟ್ಟಿ ನೇಮಕ

ಉಡುಪಿ : ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ 54 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ವೈದ್ಯಾಧಿಕಾರಿಯೊಬ್ಬರು ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ನಿಕಿನ್ ಶೆಟ್ಟಿ ಅವರು ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ…

Read more

ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತು ಇಂಡೋ-ಜರ್ಮನ್ ಕಾರ್ಯಾಗಾರ

ಮಣಿಪಾಲ : ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಕ್ಲಿನಿಕಲ್ ಎಂಬ್ರಿಯಾಲಜಿಯ ಶ್ರೇಷ್ಠತಾ ಕೇಂದ್ರವು ಜರ್ಮನಿಯ ಮೂನ್ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ಸಹಯೋಗದಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತ ಇಂಡೋ-ಜರ್ಮನ್ ಕಾರ್ಯಾಗಾರ ಫೆಬ್ರವರಿ 28 ಮತ್ತು ಮಾರ್ಚ್ 1ರಂದು ಮಣಿಪಾಲದಲ್ಲಿ…

Read more

ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ದಿನೇಶ್ ಗುಂಡೂರಾವ್ ಘೋಷಣೆ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಇದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿವಿಧೆಡೆಯಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು…

Read more

ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಫೆಬ್ರವರಿ 20ರಂದು ಲಿಂಫೆಡೆಮಾ (ದುಗ್ಧರಸ ವ್ಯವಸ್ಥೆಯಿಂದ ಉಂಟಾಗುವ ಊತ) ತಪಾಸಣಾ ಶಿಬಿರದ ಆಯೋಜನೆ

ಉಡುಪಿ : ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಗುರುವಾರ, ಫೆಬ್ರವರಿ 20, 2025 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:00 ರವರೆಗೆ ಲಿಂಫೆಡೆಮಾ (ದುಗ್ಧರಸ ವ್ಯವಸ್ಥೆಯಿಂದ ಉಂಟಾಗುವ ಊತ) ತಪಾಸಣಾ…

Read more

ಮಧ್ವನಗರದಲ್ಲಿ ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ

ಉಡುಪಿ : ಯುವನಿಧಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮೂಡುಬೆಟ್ಟು ಇದರ ವತಿಯಿಂದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಅಂಧತ್ವ…

Read more

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ

ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು (ಐಸಿಸಿಡಿ) ಅರ್ಥಪೂರ್ಣವಾಗಿ ಆಚರಿಸಿತು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಆರೈಕೆದಾರರು ಮತ್ತು ಕ್ಯಾನ್ಸರ್‌ನಿಂದ ಗಣಮುಖರಾದವರು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿಯಲ್ಲಿ ಭಾಗಿಯಾದರು. ಬಾಲ್ಯದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ…

Read more

ಬಾಲಕನ ಎದೆಯಿಂದ ಮರದ ತುಂಡು ಹೊರತೆಗೆದ ವೆನ್ಲಾಕ್‌ ವೈದ್ಯರ ತಂಡ…!

ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಹೃದಯ, ಎದೆ ಮತ್ತು ರಕ್ತನಾಳದ ಶಸ್ತ್ರಚಿಕಿತ್ಸೆ ವಿಭಾಗದ ಸಂಪೂರ್ಣ ತಂಡ, ಡಾ. ಸುರೇಶ್ ಪೈರವರು 12 ವರ್ಷದ ಬಾಲಕನ ಎದೆಯಿಂದ ಒಂದು ದೊಡ್ಡ ಮರದ ತುಂಡನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವ ಮೂಲಕ ಅವರ…

Read more