Development

ಅಂಗನವಾಡಿಗೆ ನುಗ್ಗಿದ ಮಳೆನೀರು : ಶಾಸಕರ ಭೇಟಿ, ಪಂಚಾಯತ್ ಅಧಿಕಾರಿಗಳ ತರಾಟೆ

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಧಾರಾಕಾರ ಮಳೆಯಾಗಿದ್ದು ಇಲ್ಲಿನ ಪಟ್ಟಣ ಪಂಚಾಯತ್ ನಿರ್ಲಕ್ಷ್ಯದಿಂದಾಗಿ ಯಡ್ತರೆ ಗ್ರಾಮದ ಬಂಕೇಶ್ವರ ಅಂಗನವಾಡಿ ಕೇಂದ್ರಕ್ಕೆ ಕೃತಕ ನೆರೆ ನೀರು ನುಗ್ಗಿದೆ. ವಿಷಯ ತಿಳಿದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.…

Read more

ಜಿಲ್ಲೆಯಲ್ಲಿ ಮೂರು ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣ : ಜಿಲ್ಲಾಧಿಕಾರಿ ವಿದ್ಯಾಕುಮಾರಿ

ಉಡುಪಿ : ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ಗುರುತಿಸಿರುವ ಶಿವಪುರದ ಕೆರೆಬೆಟ್ಟು, ಕಾರ್ಕಳದ ನಿಟ್ಟೆ ಹಾಗೂ ಬ್ರಹ್ಮಾವರದ ಉಳ್ಳೂರು ಪ್ರದೇಶ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ‌ಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಣಿಪಾಲ…

Read more

ಮಳೆ ನಿಂತರೂ ನಿಲ್ಲದ ನೆರೆಹಾವಳಿ; ಮನೆ, ವಸತಿಗೃಹ, ಗರಡಿಗೆ ನುಗ್ಗಿದ ನೀರು – ಉಡುಪಿಯ ಹಲವೆಡೆ ಕೃತಕ ನೆರೆ

ಉಡುಪಿ : ಕಳೆದ 24 ಗಂಟೆ ಸುರಿದ ಭಾರೀ ಮಳೆಗೆ ಉಡುಪಿಯ ಹಲವೆಡೆ ಕೃತಕ ನೆರೆ ಉಂಟಾಗಿದೆ. ನಗರದ ಹಲವೆಡೆ ಕೃತಕ ನೆರೆಯ ಪರಿಣಾಮ ಮನೆಗಳು, ವಸತಿಗೃಹ ಮತ್ತು ಗರಡಿಗೆ ನೀರು ನುಗ್ಗಿದೆ. ನಗರದ ಮೂಡನಿಡಂಬೂರು ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಿದ್ದು,…

Read more

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಂಸದ ಕೋಟ – ಹೆದ್ದಾರಿ ಕಾಮಗಾರಿಗೆ ವೇಗ ನೀಡುವಂತೆ ಮನವಿ

ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರದ ಸುರಂಗ ಮಾರ್ಗ, ಇಂದ್ರಾಳಿಯ ಮೇಲ್ಸೇತುವೆ, ಮಲ್ಪೆ ಭೂಸ್ವಾಧೀನದ ವಿಳಂಬ ಮತ್ತು ನೆನೆಗುದ್ದಿಗೆ…

Read more

ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಪ್ರತಿಭಟನೆ

ಉಡುಪಿ : ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜೂ.26ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾ…

Read more

ಮಳೆಗಾಲದ ತುರ್ತು ಸ್ಪಂದನೆಗೆ ಎರಡು ತಂಡ ಸಿದ್ಧ : ಶಾಸಕ ಗುರುರಾಜ್ ಗಂಟಿಹೊಳೆ ಮುಂದಾಳತ್ವದಲ್ಲಿ ಕಾರ್ಯಾಚರಣೆ

ಬೈಂದೂರು : ಮಳೆಗಾಲದಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲಾ ವಿಪತ್ತು‌‌ ನಿರ್ವಹಣ ಪ್ರಾಧಿಕಾರದಿಂದ ಒಂದು ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆ, ಬೈಂದೂರು ಕ್ಷೇತ್ರದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿಶೇಷ ಮೇಲುಸ್ತುವಾರಿಯಲ್ಲಿ ಸಾರ್ವಜನಿಕ ತುರ್ತು ವಿಪತ್ತು ನಿರ್ವಹಣೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.…

Read more

ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲೆ ವಿವೇಕ ಕೊಠಡಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಮಣಿಪುರ : ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಣಿಪುರದ ವಿವೇಕ ಕೊಠಡಿ ನಿರ್ಮಾಣಕ್ಕೆ ರೂ 32.80 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ…

Read more

ಸ್ಮಾರ್ಟ್ ನಗರದ ಕಳಪೆ ಕಾಮಗಾರಿ; ಸಾಮಾನ್ಯ ಮಳೆಗೇ ಮಂಗಳೂರಿನಲ್ಲಿ ಮುಳಿಹಿತ್ಲುವಿನ ರಿವರ್‌ಫ್ರಂಟ್ ತಡೆಗೋಡೆ ಕುಸಿತ

ಮಂಗಳೂರು : ಕಡಲ ನಗರಿ ಮಂಗಳೂರು ಈಗ ಸ್ಮಾರ್ಟ್ ನಗರಿಯಾಗಿ ರೂಪುಗೊಳ್ಳುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯ ರಿವರ್‌ಫ್ರಂಟ್ ತಡೆಗೋಡೆಯೇ ಕುಸಿದು ನೀರುಪಾಲಾಗಿದೆ. ನಗರದ ಮುಳಿಹಿತ್ಲುವಿನ…

Read more

ಹನುಮಂತ ನಗರ ಶಾಲೆ ಎಲ್ ಕೆ ಜಿ ವಿಭಾಗ ಪ್ರಾರಂಭೋತ್ಸವ

ಉಡುಪಿ : ಕೇಂದ್ರ ಸರಕಾರದ ಪಿ ಎಂ ಶ್ರೀ ಯೋಜನೆಯಡಿ ಮಂಜೂರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತ ನಗರ, ನಿಟ್ಟೂರು ಇದರ ಆಂಗ್ಲ ಮಾಧ್ಯಮ ವಿಭಾಗದ ಎಲ್. ಕೆ. ಜಿ. ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ…

Read more

ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ : ಶ್ರೀಧರ ಹಂದೆ, ಎಂ.ಕೆ.ರಮೇಶ್ ಆಚಾರ್ಯ ಅವರಿಗೆ ಯಕ್ಷಮಂಗಳ ಪ್ರಶಸ್ತಿ; ಕಲ್ಚಾರ್ ಅವರ ಪೀಠಿಕಾ ಪ್ರಕರಣ ಗ್ರಂಥಕ್ಕೆ ಕೃತಿ ಪ್ರಶಸ್ತಿ

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯು ಪ್ರಕಟಗೊಂಡಿದ್ದು, ಯಕ್ಷಮಂಗಳ ಪ್ರಶಸ್ತಿಗೆ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರು, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ…

Read more