Development

ಆದಿ ಉಡುಪಿ ಮೀನು ಮಾರುಕಟ್ಟೆಯಲ್ಲಿ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯ

ಉಡುಪಿ : ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬುವಾಸನೆಯಿಂದ ನಾರುತ್ತಿದ್ದು ಸಾರ್ವಜನಿಕರು ಮೂತ್ರಬಾಧೆ ತೀರಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಶೌಚಾಲಯ ಕೊಠಡಿ ಶುಚಿಗೊಳಿಸದೆ ಹಲವು ತಿಂಗಳುಗಳೇ ಕಳೆದಿದ್ದು. ಮದ್ಯದ ಬಾಟಲಿಗಳಿಂದ ತುಂಬಿಕೊಂಡಿದಲ್ಲದೆ, ಗೋಡೆಗಳ ಬಣ್ಣವು ಮಾಸಿದ್ದು,…

Read more

ಪಿಎಂ ವಿಶ್ವಕರ್ಮ ಯೋಜನೆಯಡಿ ಕೌಶಲ್ಯ ವೃದ್ಧಿ ತರಬೇತಿಗೆ 13,485 ಅರ್ಜಿ : ಉಡುಪಿ ಡಿಸಿ

ಉಡುಪಿ : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 18 ಚಟುವಟಿಕೆಗಳಲ್ಲಿ ವೃತ್ತಿ ಕೌಶಲ್ಯ ವೃದ್ಧಿ ತರಬೇತಿಗೆ 50,000 ಮಂದಿ ನೋಂದಣಿ ಗುರಿ ಹೊಂದಲಾಗಿದ್ದು, ಈ ಸಂಬಂಧ ಕೇವಲ 13,485 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.…

Read more

ಗಿನ್ನಿಸ್ ದಾಖಲೆ ಸೇರ್ಪಡೆಯಾಗುವ ಯತ್ನದಲ್ಲಿ ಮನೋಹರ್ ಆವಿಷ್ಕರಿಸಿದ ದೂರದರ್ಶಕ

ಉಡುಪಿ : ಪರ್ಕಳದ ನಿವಾಸಿ ಸಂಶೋಧಕ, ಮಣಿಪಾಲ ಎಂಐಟಿಯ ಉದ್ಯೋಗಿ, ಆರ್.ಮನೋಹರ್ ತನ್ನದೇ ಸೂತ್ರ ಬಳಸಿ ಏಕಕಾಲಕ್ಕೆ ಎರಡು ಕಣ್ಣುಗಳಲ್ಲಿ ನೇರವಾಗಿ ನೋಡುವ ರೀತಿಯಲ್ಲಿ ಆವಿಷ್ಕರಿಸಿರುವ ದೂರದರ್ಶಕ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಪ್ರಯತ್ನದಲ್ಲಿದೆ. ದಾಖಲೆಗಾಗಿ ಮನೋಹರ್ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ…

Read more

ನಗರ‌ಸಭೆ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಉಡುಪಿ : ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ತುರ್ತು ವಿಲೇವಾರಿಗೆ ಆದ್ಯತೆ ನೀಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆಯಲ್ಲಿ ಇ – ಖಾತಾ ಅರ್ಜಿಗಳ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು,…

Read more

ಉಳ್ಳಾಲ ಕ್ಷೇತ್ರಕ್ಕೆ 24×7 ಕುಡಿಯುವ ನೀರು ಯೋಜನೆಯ ಪ್ರಥಮ ಹಂತ ಶೀಘ್ರ ಉದ್ಘಾಟನೆ : ಯು.ಟಿ.ಖಾದರ್

ಮಂಗಳೂರು : ಚುನಾವಣೆ ಸಂದರ್ಭ ಕ್ಷೇತ್ರದ ಜನರಿಗೆ 24×7 ಕುಡಿಯುವ ನೀರು ಒದಗಿಸುವ ಯೋಜನೆ ಮಾಡುವ ಮಾತು ಕೊಟ್ಟಿದ್ದೆ. ಅದರಂತೆ 249 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಥಮ ಹಂತದ ಉದ್ಘಾಟನೆ…

Read more

ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಾತಿ ಒದಗಿಸದೇ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರ : ಯಶ್‌ಪಾಲ್ ಸುವರ್ಣ ಆಕ್ರೋಶ

ಉಡುಪಿ : ನೂತನ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಆರಂಭಗೊಂಡು 15 ದಿನಗಳು ಕಳೆದರೂ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ…

Read more

ಜೂನ್ 15ರಂದು ಮಿಶನ್ ಆಸ್ಪತ್ರೆಯಲ್ಲಿ ‘ಇನ್ಸ್ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಗೆ ಚಾಲನೆ

ಉಡುಪಿ : ಕಳೆದ ಒಂದು ಶತಮಾನದಿಂದ ಉಡುಪಿ ಪರಿಸರದ ಆರೋಗ್ಯ ರಕ್ಷಣೆಯ ಮೂಲಾಧಾರವಾಗಿದ್ದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಇದೀಗ ‘ಇನ್ಸ್‌ಪಾಯರ್’ ಗ್ರೀನ್ ಹಾಸ್ಪಿಟಲ್ ಯೋಜನೆಯನ್ನು ಆರಂಭಿಸುವುದರೊಂದಿಗೆ ಹವಾಮಾನ ಬದಲಾವಣೆಯನ್ನು ನೀಗಿಸುವ ಪ್ರಕ್ರಿಯೆಗೆ ಮುಂದಾಗಿದೆ. ಇನ್ಸ್‌ಪಾಯರ್ ಯೋಜನೆಗೆ ಇದೇ ಜೂನ್…

Read more

ಎಬಿವಿಪಿ ಆಗ್ರಹಕ್ಕೆ ಮೊದಲ ಹಂತದ ಸ್ಪಂದನೆ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಗ್ರಾಮಾಂತರ ಭಾಗಗಳಿಂದ ಕುಂದಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಐದು ದಿನಗಳ ಹಿಂದೆ (8-6-2024) ಶಾಸ್ತ್ರಿ ಸರ್ಕಲ್‌ನಿಂದ ತಾಲೂಕು ಆಫೀಸಿನ‌ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ, ಕುಂದಾಪುರ…

Read more

ರಾಷ್ಟ್ರೀಯ ಹೆದ್ದಾರಿ 160 A ಕಾಮಗಾರಿ ವೀಕ್ಷಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ : ಉಡುಪಿ – ಮಣಿಪಾಲ – ಪರ್ಕಳ – ಆತ್ರಾಡಿ – ಹಿರಿಯಡಕ – ಪೆರ್ಡೂರು ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ 160 A) ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಿರಿಯಡಕ, ಪೆರ್ಡೂರು, ಆತ್ರಾಡಿ ಭಾಗದ…

Read more

ಕಡಲ್ಕೊರೆತ ತಡೆಗೆ ಕರಾವಳಿ ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆ

ಉಡುಪಿ : ಕಡಲ್ಕೊರೆತ ತಡೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ,…

Read more