Dakshina Kannada

ಕೊಳವೆಗೆ ಹಾನಿ : ಮಂಗಳೂರು ನಗರದ ಹಲವು ಭಾಗಗಳಿಗೆ ನೀರಿಲ್ಲ

ಮಂಗಳೂರು : ಬಂಟ್ವಾಳದ ತುಂಬೆಯಿಂದ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಗೆ ಪಡೀಲ್ ಬಳಿ ಹಾನಿಯುಂಟಾದ ಪರಿಣಾಮ ಮಂಗಳೂರು ನಗರದ ಶೇಕಡ 60 ಭಾಗಗಳಿಗೆ ನೀರಿನ ಸರಬರಾಜಿನಲ್ಲಿ ಸಮಸ್ಯೆಯುಂಟಾಗಿದೆ. ಗೇಲ್ ಕಂಪೆನಿಯು ಕಾಮಗಾರಿ ಮಂಗಳವಾರ ರಾತ್ರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೊಳವೆಗೆ ಹಾನಿಯುಂಟಾಗಿತ್ತು.…

Read more

ನೆರೆ, ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ

ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ನೆರೆ ಪೀಡಿತ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು. ಸ್ಥಳೀಯ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ…

Read more

ದ.ಕ ಜಿಲ್ಲೆಯಲ್ಲಿ ನಾಳೆ(ಆ.1)ರಂದು ಶಾಲಾ ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಾಳೆ (ಆ.1) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ರಜೆಯನ್ನು ಘೋಷಿಸಿ…

Read more

ನಾಲ್ಕು ವರ್ಷಗಳ ಬಳಿಕ ನೇತ್ರಾವತಿ-ಕುಮಾರಧಾರ ಸಂಗಮ – ಬಾಗಿನ ಅರ್ಪಣೆ

ಮಂಗಳೂರು : ನಾಲ್ಕು ವರ್ಷಗಳ ಬಳಿಕ ಕರಾವಳಿಯ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಯು ಮಂಗಳವಾರ ರಾತ್ರಿ ಸಂಗಮವಾಗಿದೆ. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪವಿತ್ರ ನದಿಗಳು ಸಂಗಮವಾಯಿತು. ನದಿಗಳೆರಡರ ಸಂಗಮವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತ ಸಂದೋಹ…

Read more

ಕೊರಗ ಸಮುದಾಯದ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸ್ಪೀಕರ್ ಖಾದರ್; ಸತ್ಯಾಗ್ರಹ ಕೈಬಿಡಲು ಮನವಿ – ಬೇಡಿಕೆ ಈಡೇರಿಸುವ ಭರವಸೆ

ಉಡುಪಿ : ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು 10 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.…

Read more

ವಿದ್ಯಾರ್ಥಿನಿಗೆ ಎದೆನೋವು – ಬಸ್ಸನ್ನೆ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ ಚಾಲಕ ನಿರ್ವಾಹಕ

ಮಂಗಳೂರು : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು‌ ನಿರ್ವಾಹಕ ಬಸ್ ಅನ್ನು ನಿಗದಿತ ರೂಟ್‌ನಲ್ಲಿ ಎಲ್ಲಿಯೂ ನಿಲ್ಲಿಸದೆ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ ಘಟನೆ ಮಂಗಳವಾರ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ…

Read more

“ಕಲಾಂತರಂಗ 2023-24” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಸಮಗ್ರ ಚಟುವಟಿಕೆಯ ವಿವರಗಳನ್ನು ಒಳಗೊಂಡ ಮುನ್ನೂರು ಪುಟಗಳ ಸಚಿತ್ರ ”ಕಲಾಂತರಂಗ 2023-24″ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಮತ್ತು ಕಾರ್ಯದರ್ಶಿ…

Read more

ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರ ಸೆರೆ : ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗಳು, ಮಾದಕ ವಸ್ತುಗಳ ವಶ

ಮಂಗಳೂರು : ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರವಾದ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊಂದಿಕೊಂಡಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಮುಹಮ್ಮದ್ ಹನೀಫ್ ಯಾನೆ ಅಲಿ…

Read more

ಟೈಗರ್ ಕಾರ್ಯಾಚರಣೆಯಿಂದ ತಿರುಗಿಬಿದ್ದ ಬೀದಿಬದಿ ವ್ಯಾಪಾರಿಗಳು – ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

ಮಂಗಳೂರು : ಮಹಾನಗರ ಪಾಲಿಕೆಯಿಂದ ನಡೆದ ಟೈಗರ್ ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಸ್ಥರು ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ‌ ಹಾಕಿದ್ದಾರೆ. ಮನಪಾ ಅಧಿಕಾರಿಗಳು ನಿನ್ನೆ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ನಗರದ ಮಣ್ಣಗುಡ್ಡ, ಲೇಡಿಹಿಲ್, ಯೆಯ್ಯಾಡಿ, ಸೆಂಟ್ರಲ್ ಮಾರುಕಟ್ಟೆಯಲ್ಲಿನ ಗೂಡಂಗಡಿಗಳ ಮೇಲೆ ಅಂಗಡಿಗಳನ್ನು…

Read more

ಭಾರಿ ಮಳೆ : ನಾಳೆ (ಜು.31) ಶಾಲೆ, ಪಿಯು ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ…

Read more