Dakshina Kannada

ಚಾಕು ತೋರಿಸಿ ಮೆಡಿಕಲ್ ಶಾಪ್‌ನಲ್ಲಿ ಹಣ ಸುಲಿಗೆಗೈದ ಆರೋಪಿ ಅರೆಸ್ಟ್

ಮಂಗಳೂರು : ಚಾಕು ತೋರಿಸಿ ಮೆಡಿಕಲ್ ಶಾಪ್‌ನ ಕ್ಯಾಶ್ ಡ್ರಾವರ್‌ನಲ್ಲಿದ್ದ ಹಣ ಸುಲಿಗೆಗೈದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೊಂದೇಲ್‌ನ ಪಟ್ರಕೋಡಿ ನಿವಾಸಿ ಸುನೀಲ್(31) ಬಂಧಿತ ಆರೋಪಿ. ಡಿಸೆಂಬರ್ 28ರಂದು ಮಧ್ಯಾಹ್ನ ಮಂಗಳೂರಿನ ನಾಗುರಿ ಮೆಡಿಕಲ್ ಶಾಪ್‌ವೊಂದಕ್ಕೆ ಆರೋಪಿ…

Read more

ಹತ್ಯೆ ಹಾಗೂ ಆತ್ಮಹತ್ಯೆಯೇ ರಾಜ್ಯ ಕಾಂಗ್ರೆಸ್ ಸರಕಾರದ ಹೆಗ್ಗುರುತು – ಚಾಟಿ ಬೀಸಿದ ಪ್ರಹ್ಲಾದ್ ಜೋಶಿ

ಮಂಗಳೂರು : ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಸಚಿವರ ವಿರುದ್ದ ಅನೇಕ ತೀವ್ರ ಆರೋಪಗಳಿವೆ. ಹತ್ಯೆ ಹಾಗೂ ಆತ್ಮಹತ್ಯೆಯೇ ರಾಜ್ಯದ ಕಾಂಗ್ರೆಸ್ ಸರಕಾರದ ಹೆಗ್ಗುರುತಾಗಿದೆ. ಕಟಾಕಟ್ ಹೇಳಿದವರು ಕಟಾಕಟ್ ಆಗಿ ಹಣವನ್ನು ನುಂಗಿಕೊಳ್ಳುವುದು ಹೇಗೆ ಎಂದು ಕರ್ನಾಟಕದಲ್ಲಿ ತೋರಿಸಿಕೊಟ್ಟಿದ್ದಾರೆ. ಇದರ ವಿರುದ್ಧ…

Read more

ಧರ್ಮಸ್ಥಳ ನೇತ್ರಾವತಿಯ ಉಪನದಿಗೆ ಗೋಮಾಂಸ ತ್ಯಾಜ್ಯ ಎಸೆದ ಕಿಡಿಗೇಡಿಗಳು : ಕೂಡಲೇ ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ಬೆಳ್ತಂಗಡಿ : ಕರಾವಳಿಯ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಕಿಡಿಗೇಡಿಗಳು ಗೋ ಮಾಂಸದ ತ್ಯಾಜ್ಯವನ್ನು ಎಸೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ…

Read more

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಕಾರಿನಲ್ಲಿದ್ದ ನಾಲ್ವರು ಪಾರು..!

ಮಂಗಳೂರು : ಮಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾ‌ಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಿನ್ನೆ ಬುಧವಾರ ಸಂಭವಿಸಿದೆ. ಮೇರಿಹಿಲ್‌ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ಸಂಜೆ ವೇಳೆ ಸಂಚರಿಸುತ್ತಿದ್ದ ವೋಕ್ಸ್‌ವ್ಯಾಗನ್‌ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರು ನಿಲ್ಲಿಸಿ ಕಾರಿನಲ್ಲಿದ್ದ ನಾಲ್ವರು ಕೂಡಲೇ ಕೆಳಗಿಳಿದು…

Read more

ವಿಮಾ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದಿಡೀರ್ ಭೇಟಿ

ಮಂಗಳೂರು : ನಗರದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೋಗಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಆಸ್ಪತ್ರೆ‌ಯ…

Read more

ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ – ಡಾಕ್ಟರ್ ಗುರುಪ್ರಸಾದ್; ವಿ ಒನ್ ಅಕ್ವಾ ಸೆಂಟರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮ

ಮಂಗಳೂರು : ಮಂಗಳೂರಿನ ಸೇಂಟ್ ಎಲೊಶಿಯಸ್ ಕಾಲೇಜಿನ ಈಜುಕೊಳದಲ್ಲಿ ಕಾರ್ಯಾಚರಿಸುತ್ತಿರುವ ವಿ ಒನ್ ಅಕ್ವಾ ಸೆಂಟರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಆಚರಿಸಲಾಯಿತು. ಐರನ್ ಮ್ಯಾನ್ ಖ್ಯಾತಿಯ ಕೆ ಎಂ ಸಿ ಕಾಲೇಜಿನ ಕ್ಯಾನ್ಸರ್ ತಜ್ಞ ಡಾ ಗುರುಪ್ರಸಾದ್ ಭಟ್…

Read more

ಹೊಸವರ್ಷಕ್ಕೆ ಪುಷ್ಪಾಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ – ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು

ಬೆಳ್ತಂಗಡಿ : ಹೊಸವರ್ಷವನ್ನು ಸ್ವಾಗತಿಸುವ ಸುಸಂದರ್ಭ ಬುಧವಾರ ಬೆಳಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಆಲಯವನ್ನು ಪ್ರತೀವರ್ಷದಂತೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ್ದಾರೆ. ಬೆಂಗಳೂರಿನ ಟಿವಿಎಸ್‌ ಕಂಪೆನಿಯ ಉದ್ಯಮಿ ಗೋಪಾಲ್‌ ರಾವ್‌ ಹಾಗೂ ಆನಂದ ಮೂರ್ತಿ ಅವರ ತಂಡ ಧರ್ಮಸ್ಥಳದ…

Read more

ಕಟ್ಟೆಯಲ್ಲಿ ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ ವೃದ್ಧ ಪಾಳುಬಾವಿಗೆ ಬಿದ್ದು ಸಾವು

ಉಳ್ಳಾಲ : ಇಲ್ಲಿನ ಸೋಮೇಶ್ವರ ಉಚ್ಚಿಲ ಬಳಿಯ ಸಮುದ್ರ ತೀರದ ಪಾಳುಬಾವಿಯ ಕಟ್ಟೆಯಲ್ಲಿ ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ ವೃದ್ಧ ಮೀನುಗಾರರೊಬ್ಬರು ಆಯತಪ್ಪಿ ಬಾವಿಯೊಳಗಡೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ…

Read more

ಲಾರಿ ಅಪಘಾತ ಡೆಲಿವರಿ ಬಾಯ್ ದಾರುಣ ಸಾವು

ಉಳ್ಳಾಲ : ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ, ಸ್ವಿಗ್ಗಿ ಡೆಲಿವರಿ ಬಾಯ್ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ.66 ರ ಸಂಕೊಳಿಗೆ ಸಮೀಪ ಸಂಭವಿಸಿದೆ. ದೇರಳಕಟ್ಟೆ ಪಾನೀರು ನಿವಾಸಿ ಉಮ್ಮರ್ ಫಾರುಕ್ ಯಾನೆ ಅಝರ್ (31) ಸಾವನ್ನಪ್ಪಿದವರು. ಅವಿವಾಹಿತರಾಗಿರುವ ಇವರು ಸ್ವಿಗ್ಗಿ ಡೆಲಿವರಿಯಲ್ಲಿ…

Read more

ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಅಪಘಾತದಿಂದ ಮೃತ್ಯು

ಮಂಗಳೂರು : ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಪ್ರವಿತ್ ಆಚಾರ್ಯ(21) ಎಂಬವರು ಅರ್ಕುಳದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯರ ಪುತ್ರರಾದ ಪ್ರವಿತ್ ಆಚಾರ್ಯ ಬಂಟ್ವಾಳ ತಾಲೂಕಿನ ವಿಟ್ಲದ…

Read more