Dakshina Kannada

ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ : ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ರೋಟರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್‌ ಕಾಲೇಜು ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.…

Read more

ಸೆ.15 ಹೆಜಮಾಡಿ ಟೋಲ್‌ಗೇಟಿನಿಂದ ಸಂಪಾಜೆವರೆಗೆ ಬೃಹತ್ ಮಾನವ ಸರಪಳಿ – ಲಕ್ಷಕ್ಕೂ ಅಧಿಕ ಮಂದಿ ಭಾಗಿ; ಬ್ರ್ಯಾಂಡ್ ಅಂಬಾಸಿಡರ್ ಆಗಿ ಹರೇಕಳ ಹಾಜಬ್ಬ

ಮಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಸೆ.15ರಂದು ರವಿವಾರ ಬೆಳಗ್ಗೆ 9ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಲು ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ದ.ಕ.ಜಿಲ್ಲೆಯ ಮುಲ್ಕಿಯ ಹೆಜಮಾಡಿ ಟೋಲ್‍ಗೇಟ್‌ನಿಂದ…

Read more

‘ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್; ಕಲ್ಲಾರ್ಪು ಬುರ್ದುಗೋಳಿ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ

ಮಂಗಳೂರು : ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ…

Read more

“ತಪ್ಪು ಮಾಡದೆಯೂ ನಮಗೆ ಅನ್ಯಾಯವಾದರೆ ಚಿತ್ರತಂಡದ ಜೊತೆ ನಾನಿದ್ದೇನೆ” – ವಿಜಯ್ ಕುಮಾರ್ ಕೊಡಿಯಾಲ್ ಬೈಲ್; ಬಹುನಿರೀಕ್ಷಿತ “ಕಲ್ಜಿಗ” ಸಿನೆಮಾ ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು : ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ತೆರೆಕಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಹಿರಿಯ…

Read more

ಒರಿಸ್ಸಾದಿಂದ ಮಂಗಳೂರಿಗೆ 8.650 ಕೆಜಿ ಗಾಂಜಾ ಸಾಗಿಸಿ ಮಾರಾಟಕ್ಕೆ ಯತ್ನ – ಇಬ್ಬರು ಅರೆಸ್ಟ್

ಮಂಗಳೂರು : ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 8.650 ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒರಿಸ್ಸಾ ರಾಜ್ಯದ ಗಜಪತಿ ಜಿಲ್ಲೆ, ಕಿರ್ಟಿಂಗ್ ನ್ಯೂ ಸ್ಟ್ರೀಟ್, ಪಿಂಡಿಕ್ಕಿ ಗ್ರಾಮದ ನಿವಾಸಿ ಬುಲುಬಿರೊ(24), ಪಶ್ಚಿಮ ಬಂಗಾಳದ ಮುರ್ಶಿದಾಬಾದ್…

Read more

‘Fact Vid’ ಫೇಸ್ಬುಕ್ ಪೇಜ್ ಮೂಲಕ ಹಿಂದೂ ದೇವತೆಗಳ ಅಪಮಾನ; FIR ದಾಖಲು

ಮಂಗಳೂರು : ‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ Al ಆಧಾರಿತ…

Read more

ಹಳೆಮನೆ ಕೆಡವುತ್ತಿದ್ದಾಗ ಗೋಡೆ ಸಹಿತ ಲಿಂಟಲ್ ಬಿದ್ದು ಇಬ್ಬರು ಮೃತ್ಯು

ಮಂಗಳೂರು : ಹಳೆಮನೆಯನ್ನು ಕೆಡವುತ್ತಿದ್ದ ವೇಳೆ ಏಕಾಏಕಿ ಗೋಡೆ ಸಹಿತ ಲಿಂಟಲ್ ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಗರದ ಜೈಲುರಸ್ತೆಯ ಸಿ.ಜೆ.ಕಾಮತ್ ರಸ್ತೆಯಲ್ಲಿ ನಡೆದಿದೆ. ಸೋದರ ಸಂಬಂಧಿಗಳಾದ ಜೇಮ್ಸ್ ಹಾಗೂ ಅಡ್ವಿನ್ ಮೃತಪಟ್ಟ ದುರ್ದೈವಿಗಳು. ಜೇಮ್ಸ್ ಅವರು ಬಹರೈನ್‌ನಲ್ಲಿದ್ದು, ಅವರ…

Read more

ತಾಯಿಯನ್ನು ರಕ್ಷಿಸಿದ ಬಾಲಕಿಗೆ ಪೊಲೀಸ್ ಆಯುಕ್ತರಿಂದ ಸನ್ಮಾನ

ಮಂಗಳೂರು : ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದರು. 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿ…

Read more

ಅಲೋಶಿಯಸ್ ಕಾಲೇಜಿನ ‘ಸಮೋಸ ಅಜ್ಜ’ ಇನ್ನಿಲ್ಲ

ಮಂಗಳೂರು : ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ 40ವರ್ಷಗಳಿಂದ ಸಮೋಸ ಮಾರಿ ಜೀವನ ನಡೆಸುತ್ತಿದ್ದ ವಿದ್ಯಾರ್ಥಿಗಳ ಪಾಲಿನ ‘ಸಮೋಸ ಅಜ್ಜ’ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ಮದುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ(84)ಯವರು ಸಮೋಸ ಅಜ್ಜರೆಂದೇ…

Read more

ಅಧ್ಯಾಪಕ ಭೂಷಣ ಪ್ರಶಸ್ತಿಗೆ ಡಾ.ಮಂಜುನಾಥ್ ಕೋಟ್ಯಾನ್ ಆಯ್ಕೆ

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ಘಟಕ ನೀಡುವ 2024ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಗೆ ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ.ಕೋಟ್ಯಾನ್ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಜಿಲ್ಲೆಗಳ ಸಾಧಕ ಪ್ರಾಧ್ಯಾಪಕರ ಶೈಕ್ಷಣಿಕ…

Read more