Crime

ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಬಾಂಗ್ಲಾಪ್ರಜೆ – ಉಡುಪಿಯಲ್ಲಿ ಅಕ್ರಮವಾಗಿ ಪಾಸ್‌ಪೋರ್ಟ್ ಮಾಡಿದ್ದ ನುಸುಳುಕೋರ

ಮಂಗಳೂರು : ಭಾರತಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದು ಉಳಿದುಕೊಂಡಿದ್ದಲ್ಲದೆ, ಅಕ್ರಮ ಪಾಸ್‌ಪೋರ್ಟ್ ಮಾಡಿಸಿ ದುಬೈಗೆ ಹಾರಲೆತ್ನಿಸಿದ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಾಂಗ್ಲಾದೇಶ ಮೂಲದ ನಿವಾಸಿ ಮಾಣಿಕ್ ಹುಸೈನ್ (26) ಬಂಧಿತ ಆರೋಪಿ.…

Read more

ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾದೇಶಿಯರು ವಶಕ್ಕೆ – ಮೂರು ವರ್ಷಗಳಿಂದ ನಕಲಿ ದಾಖಲೆಯೊಂದಿಗೆ ವಾಸ!

ಮಲ್ಪೆ : ಉಡುಪಿಯ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಮಲ್ಪೆಗೆ ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ ಮಹಮ್ಮದ್ ಮಾಣಿಕ್…

Read more

ಕಾರಿನ ಗಾಜು ಒಡೆದು ಲ್ಯಾಪ್‌ಟಾ‌ಪ್ ಕಳವು

ಉಚ್ಚಿಲ : ದಸರಾ ಗೌಜಿನ ನಡುವೆ ಕಾರಿನ ಗಾಜು ಒಡೆದು ಲ್ಯಾಪ್‌ಟಾ‌ಪ್ ಕಳವು ಮಾಡಲಾಗಿದೆ. ಉಡುಪಿಯ ಉಚ್ಚಿಲ ದೇವಸ್ಥಾನದ ಹೊರಬಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಡಬದಿಯ ಗಾಜು ಒಡೆದು ಲ್ಯಾಪ್‌ಟಾ‌ಪ್ ಅನ್ನು ಕಳವು ಮಾಡಲಾಗಿದೆ. ಉಡುಪಿ ನಿವಾಸಿ ವಸಂತ್ ಅವರು ಕುಟುಂಬ ಸಮೇತ…

Read more

ಪ್ರಧಾನಿ ಕಾರ್ಯಾಲಯದ ಅಧಿಕಾರಿ ಹೆಸರಿನಲ್ಲಿ ಶ್ರೀಕೃಷ್ಣ ಮಠಕ್ಕೆ ವಂಚನೆ – ದೂರು ದಾಖಲು

ಉಡುಪಿ : ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 9ರಂದು ಉದಯ್‌ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ…

Read more

“ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ನಿಯೋಗದಿಂದ ಮಮ್ತಾಜ್ ಅಲಿ ನಿವಾಸಕ್ಕೆ ಭೇಟಿ. ಕುಟುಂಬಕ್ಕೆ ಸಾಂತ್ವನ, ಸಮಗ್ರ ತನಿಖೆಗೆ ಆಗ್ರಹ

ಮಂಗಳೂರು : ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಇದರ ನಿಯೋಗ ಚೊಕ್ಕಬೆಟ್ಟು‌ನಲ್ಲಿರುವ ಮಮ್ತಾಜ್ ಅಲಿ ಅವರ ಕುಟುಂಬದ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು. ಮುಮ್ತಾಜ್ ಅಲಿಯವರನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ…

Read more

ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ಅಂಗಡಿ ಮಾಲೀಕನಿಗೆ ವಂಚನೆ

ಕುಂದಾಪುರ : ಕುಂದಾಪುರದ ಅಪೂರ್ವ ಚಿನ್ನದ ಅಂಗಡಿಗೆ ಮಹಿಳೆಯರಿಬ್ಬರು ಗ್ರಾಹಕರಂತೆ ಬಂದು ಹಳೆಯ ಚಿನ್ನ ಇದೆ ಎಂದು ಅದನ್ನು ಕೊಟ್ಟು ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿ ಸುಮಾರು 2,50,000 ಲಕ್ಷ ರೂ. ವಂಚಿಸಿ ಪರಾರಿಯಾದ ಘಟನೆ ಕುಂದಾಪುರದಲ್ಲಿ…

Read more

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿ ಖುಲಾಸೆ

ಮಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಎರಡನೇ ವಿಶೇಷ ಪೋಕ್ಸೋ ಹೆಚ್ಚುವರಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪಿತ್ತಿದೆ. ಬೆಳ್ತಂಗಡಿಯ ಮಡಂತ್ಯಾರಿನಲ್ಲಿ 23-06-2023‌ರಂದು ಆರೋಪಿ ಶಾಶ್ವತ್‌ ಬಾಲಕಿಯನ್ನು ಹುಟ್ಟುಹಬ್ಬದ ನೆಪದಲ್ಲಿ…

Read more

ಮಲ್ಪೆ ಬಂದರಿನಲ್ಲಿ ಬಾಲಕಾರ್ಮಿಕರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಉಡುಪಿ ಡಿಸಿ ಸೂಚನೆ

ಉಡುಪಿ : ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ 14 ವರ್ಷದೊಳಗಿನ ಬಾಲ ಕಾರ್ಮಿಕರು ಮೀನು ಹೆಕ್ಕುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಕಾರ್ಯಪಡೆಯ ಅಧಿಕಾರಿಗಳು ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸಂಬಂಧಿತ…

Read more

ಚೆಕ್ ಅಮಾನ್ಯ ಪ್ರಕರಣ : ಆರೋಪಿಗೆ 2.50 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ

ಬಂಟ್ವಾಳ : ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುದು ಗ್ರಾಮದ ಹಸನಬ್ಬ ಅವರಿಗೆ ಶಿಕ್ಷೆ ಪ್ರಕಟಿಸಿ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮಾನ್ಯ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಮ್ಮ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.…

Read more

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ : ಹಾಡಹಗಲೇ ಚಿನ್ನಾಭರಣ, ನಗದು ಹೊತ್ತೊಯ್ದ ಕಳ್ಳರು

ವಿಟ್ಲ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಮನೆ ಮಂದಿಯೆಲ್ಲಾ ಶಾರದೋತ್ಸವಕ್ಕೆ ಹೋಗಿದ್ದ ಸಂದರ್ಭ ಕಳ್ಳತನ ನಡೆದಿದೆ. ಕೆಮನಾಜೆ ನಿವಾಸಿ ಪುಷ್ಪರಾಜ್ ಮತ್ತು ಅದೇ ಪರಿಸರ ನಿವಾಸಿ ಕೃಷ್ಣಪ್ಪ ಕುಲಾಲ್(ಕುಂಞಣ್ಣ) ಮನೆಯವರೆಲ್ಲ ಅಳಕೆಮಜಲು ಭಜನಾ ಮಂದಿರದಲ್ಲಿ ನಡೆಯುವ ಶಾರದಾ…

Read more