Accident

ಅಲೆವೂರಿನ ನೈಲಪಾದೆ ನದಿಯಲ್ಲಿ ಈಜಾಡಲು ಹೋಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತ್ಯು: ಇನ್ನೋರ್ವ ಗಂಭೀರ

ಉಡುಪಿ : ನದಿಯಲ್ಲಿ ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ(ಆ 28) ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾನೆ. ಮೃತಪಟ್ಟ ವಿದ್ಯಾರ್ಥಿಯನ್ನು ತ್ರಿವೆಂಡಮ್‌ನ ಆರೊನ್‌ ರೋಜರ್‌ ಲೀನ್‌(17) ಎಂದು ಗುರುತಿಸಲಾಗಿದೆ. ಭಾನುವಾರ ಅಲೆವೂರಿನ ನೈಲಪಾದೆಯಲ್ಲಿ(ಆ…

Read more

ಕುಂತೂರು – ಸರಕಾರಿ ಶಾಲೆಯ ಗೋಡೆ ಮತ್ತು ಮೇಲ್ಚಾವಣಿ ಕುಸಿತ : ನಾಲ್ವರು ವಿದ್ಯಾರ್ಥಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಡಬ : ಶಾಲೆಯ ಕಟ್ಟಡದ ಒಂದು ಪಾರ್ಶ್ವದ ಗೊಡೆ ಕುಸಿದು ಬಿದ್ದು ತರಗತಿಯಲ್ಲಿದ್ದ 4 ಮಕ್ಕಳಿಗೆ ಗಾಯಗಳಾದ ಘಟನೆ ಕುಂತೂರು ಸರಕಾರಿ ಶಾಲೆಯಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು‌ನಲ್ಲಿರುವ ಶಾಲೆಯಲ್ಲಿದ್ದ ಹಳೆಯ ಕಟ್ಟಡದ ಒಂದು ಗೊಡೆ ಕುಸಿದು ಬಿದ್ದಿದೆ.…

Read more

ಕಾರುಗಳ ನಡುವೆ ಢಿಕ್ಕಿ, ಜಖಂ : ಪ್ರಯಾಣಿಕರು ಪಾರು

ಮಣಿಪಾಲ : ಕೆಳಪರ್ಕಳದ ಬಳಿ ಎರಡು ಕಾರುಗಳು ಪರಸ್ಪರ ಢಿಕ್ಕಿಯಾಗಿ ನಗರಸಭೆಯ ನೀರಿನ ರೇಚಕದ ಬಳಿ ಇರುವ ಟ್ರಾನ್ಸ್‌ಫಾರ್ಮರ್‌ಗೆ ತಾಗಿ ನಿಂತ ಘಟನೆ ಮಂಗಳವಾರ ಸಂಭವಿಸಿದೆ. ಒಂದು ಕಾರು ರೇಚಕದ ಪಕ್ಕದ ರಸ್ತೆಯಿಂದ ಬರುತ್ತಿದ್ದರೆ ಮತ್ತೊಂದು ಕಾರು ಮುಖ್ಯ ರಸ್ತೆಯಲ್ಲಿ ಬರುತ್ತಿತ್ತು…

Read more

ರೇಸ್‌ನಲ್ಲಿ ಬೈಕ್ ಪಲ್ಟಿ – ರೇಸರ್ ಬೀಳುತ್ತಿರುವ ಭಯಾನಕ ವೀಡಿಯೋ ವೈರಲ್

ಬೆಳ್ತಂಗಡಿ : ಬೈಕ್ ರೇಸ್‌ನಲ್ಲಿ ಬೈಕೊಂದು ಪಲ್ಟಿಯಾಗಿ ರೇಸರ್ ಬೈಕ್‌ ಮೇಲೆಯೇ ಬೀಳುವ ವೀಡಿಯೋವೊಂದು ವೈರಲ್ ಆಗಿದೆ. ಕಾವಳಕಟ್ಟೆ ನಿವಾಸಿ ನೌಶಾದ್ (23) ಗಾಯಗೊಂಡ ರೇಸರ್. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದಲ್ಲಿ ಸೋಮವಾರ ಬೈಕ್ ರೇಸ್ ನಡೆದಿತ್ತು. ಫಿಟ್ಟರ್…

Read more

ಭಾರೀ ಮಳೆಗೆ ಮನೆ ಮೇಲೆ ಕುಸಿದ ಪೊಲೀಸ್ ವಸತಿ ಗೃಹದ ತಡೆಗೋಡೆ

ಮಂಗಳೂರು : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ ಪೊಲೀಸ್ ಠಾಣೆಯ ವಸತಿಗೃಹದ ತಡೆಗೋಡೆ ಕುಸಿದ ಘಟನೆ ವಿಟ್ಲದ ಪೊನ್ನೋಟ್ಟು ಎಂಬಲ್ಲಿ ನಡೆದಿದೆ. ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಸವಿರುವ ವಸತಿಗೃಹದ ಹಿಂಬದಿಯಲ್ಲಿದ್ದ ತಡೆಗೋಡೆ ಮತ್ತು ಗುಡ್ಡ ಒಮ್ಮೆಲೇ ಪಕ್ಕದಲ್ಲಿ…

Read more

ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಸ್ಟೋರ್ ಭಸ್ಮ

ಬೈಂದೂರು : ತಾಲೂಕಿನ ನಾವುಂದ ಜಂಕ್ಷನ್ ಪ್ಲಾಜಾ ಗ್ರೋ ಕಾಂಪ್ಲೆಕ್ಸ್‌ನಲ್ಲಿರುವ ಪ್ರತೀಮಾ ಆಚಾರ್ಯ ಅವರಿಗೆ ಸಂಬಂಧಿಸಿದ ಫ್ಯಾನ್ಸಿ ಸ್ಟೋರ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ. ಶ್ರೀಮತಿ ಪ್ರತಿಭಾ ವಿಜೇಂದ್ರ ಅರೆಹೊಳೆ ಎಂಬವರು…

Read more

ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟು ಕಾಲೇಜು ವಿದ್ಯಾರ್ಥಿ ಸಾವು

ಕಾರ್ಕಳ : ಬಸ್ಸಿನಿಂದ ಎಸೆಯಲ್ಪಟ್ಟು ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಂಭವಿಸಿದೆ. ಮಾಳ ಗ್ರಾಮದ ಹುಕ್ರಟ್ಟೆ ನಿವಾಸಿ ಜನಿತ್ ಶೆಟ್ಟಿ (19) ಮೃತ ವಿದ್ಯಾರ್ಥಿ. ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ…

Read more

ಚಾಲಕನ ನಿಯಂತ್ರಣ ತಪ್ಪಿ ಎಲೆಕ್ಟ್ರಾನಿಕ್ಸ್ ಮಳಿಗೆಗೆ ನುಗ್ಗಿದ ಕಾರು

ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಎಲೆಕ್ಟ್ರಾನಿಕ್ಸ್ ಮಳಿಗೆಗೆ ನುಗ್ಗಿದ ಘಟನೆ ಸಂಭವಿಸಿದೆ. ಉಡುಪಿ ನಗರದ ಹೃದಯ ಭಾಗದಲ್ಲಿರುವ ಕೆ.ಎಂ.ಮಾರ್ಗದಲ್ಲಿನ ಗೃಹೋಪಯೋಗಿ ಮಳಿಗೆಗೆ ಕಾರು ನುಗ್ಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಮಗ್ಗಲಿಗೆ ಕಾರು ಹೋಗಿದೆ. ಶಾಪ್‌ನ ಮುಂಭಾಗದಲ್ಲಿರುವ ಮೆಟ್ಟಿಲನ್ನು…

Read more

ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಹಂದಿ ದಾಳಿ: ಯುವಕಗೆ ತೀವ್ರ ಗಾಯ

ಮಂಗಳೂರು : ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು. ಕುಂಬ್ರ ಪೆಟ್ರೋಲ್…

Read more

ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ – ರಕ್ಷಿಸಿದ ರೈಲ್ವೇ ಪೊಲೀಸ್

ಮಂಗಳೂರು : ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸ್ ಒಬ್ಬರು ರಕ್ಷಿಸಿರುವ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲು ಇನ್ನೇನು ಚಲಿಸಿತ್ತು‌.…

Read more