Accident

ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಹಂದಿ ದಾಳಿ: ಯುವಕಗೆ ತೀವ್ರ ಗಾಯ

ಮಂಗಳೂರು : ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು. ಕುಂಬ್ರ ಪೆಟ್ರೋಲ್…

Read more

ಸಂಚಾರದಲ್ಲಿದ್ದ ರೈಲು ಹತ್ತಲೆತ್ನಿಸಿ ಎಡವಿದ ಯುವಕ – ರಕ್ಷಿಸಿದ ರೈಲ್ವೇ ಪೊಲೀಸ್

ಮಂಗಳೂರು : ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸ್ ಒಬ್ಬರು ರಕ್ಷಿಸಿರುವ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲು ಇನ್ನೇನು ಚಲಿಸಿತ್ತು‌.…

Read more

ಕಡಲಬ್ಬರಕ್ಕೆ ಕೊಚ್ಚಿ ಹೋದ ಪ್ರವಾಸಿಗ; ಸಮುದ್ರದಲ್ಲಿ ಈಜಾಡುತ್ತಿದ್ದಾಗ ಘಟನೆ

ಉಡುಪಿ : ಹೂಡೆ ಸಮುದ್ರ ತೀರದಲ್ಲಿ ಪ್ರವಾಸಿಗನೊಬ್ಬ ಕಡಲ ಅಲೆಗಳ ಅಬ್ಬರಕ್ಕೆ ತತ್ತರಿಸಿ ಕೊಚ್ಚಿ ಹೋದ ಭಯಾನಕ ಘಟನೆ ಸಂಭವಿಸಿದೆ. ಜಿಲ್ಲೆಯ ಹೊರಗಿನಿಂದ ಬಂದಿದ್ದ ಪ್ರವಾಸಿಗ, ಮೋಜು ಮಸ್ತಿಗಾಗಿ ಹೂಡೆ ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದಾಗ ಕಡಲಿನ ಅಲೆಗಳ ಅಬ್ಬರದ ಹೊಡೆತಕ್ಕೆ ತತ್ತರಿಸಿದ್ದಾನೆ.…

Read more

ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ, ಉಸಿರು ಗಟ್ಟಿ ಸಾವು

ಉಡುಪಿ : ಉಡುಪಿಯ ಮಣಿಪಾಲದಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಮೂಲದ ಆನಂದ (37) ಎಂಬವರು ಕಾರಿನೊಳಗೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಆನಂದ ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆತಂದಿದ್ದರು. ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿದ ಬಳಿಕ, ಆನಂದ ಅವರಿಗೆ ತಂಗಲು…

Read more

ಫರಂಗಿಪೇಟೆಯಲ್ಲಿ ಖಾಸಗಿ ಬಸ್ ಪಲ್ಟಿ : ಹಲವು ಪ್ರಯಾಣಿಕರಿಗೆ ಗಾಯ

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟೀಯ ಹೆದ್ದಾರಿಯ ಫರಂಗಿಪೇಟೆ ಸಮೀಪ ಹತ್ತನೇ ಮೈಲ್ ಕಲ್ಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ…

Read more

ಮಹೀಂದ್ರಾ ಪಿಕಪ್‌ – ಆಟೋರಿಕ್ಷಾ ನಡುವೆ ಅಪಘಾತ – ಆಟೋ ಚಾಲಕನಿಗೆ ಗಾಯ

ಉಡುಪಿ : ಸಂತೆಕಟ್ಟೆ ಸಮೀಪದ ಆಶೀರ್ವಾದ ಜಂಕ್ಷನ್‌ ಬಳಿ ಗ್ಯಾಸ್‌ ಸಿಲಿಂಡರ್‌ ತುಂಬಿದ್ದ ಮಹೀಂದ್ರಾ ಪಿಕಪ್‌ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋರಿಕ್ಷಾ ಚಾಲಕನ ತಲೆ ಹಾಗೂ ಕೈ ಕಾಲುಗಳಿಗೆ ಪೆಟ್ಟಾಗಿ ತೀವ್ರ ಗಾಯಗೊಂಡ ಘಟನೆ ಸಂಭವಿಸಿದೆ. ಈ ಘಟನೆ…

Read more

ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ ವಿಜ್ಞಾನಿಗಳ ಭೇಟಿ

ಉಡುಪಿ : ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತ ಪ್ರದೇಶಗಳಿಗೆ ಜಿಎಸ್‌ಐ (ಜಿಯಾಲಜಿಕಲ್‌ ಸರ್ವೇ ಆಫ್ ಇಂಡಿಯಾ) ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿದೆ. ಈ ತಂಡವು ಬೈಂದೂರು ತಾಲೂಕಿನ ಕೊಲ್ಲೂರು, ಶಿರೂರು, ಸೋಮೇಶ್ವರ, ಹಾಲಾಡಿ, ಹೆಬ್ರಿ ತಾಲೂಕಿನ ಕನ್ಯಾನ, ಕಾರ್ಕಳ ತಾಲೂಕಿನ…

Read more

ತಿರುಪತಿಗೆ ಹೊರಟ ಯುವಕರ ತಂಡದಿಂದ ಮೃತ ಕೋತಿಯ ಅಂತ್ಯ ಸಂಸ್ಕಾರ

ತಿರುಪತಿಗೆ ಹೊರಟಿದ್ದ ಯುವಕರ ತಂಡವೊಂದು ಮೃತ ಕೋತಿಯೊಂದರ ಅಂತ್ಯ ಸಂಸ್ಕಾರ ನಡೆಸಿದೆ. ಸಾಸ್ತಾನದಿಂದ ತಿರುಪತಿಗೆ ನಡೆಸಿಕೊಂಡು ‌ಹೋಗುತ್ತಿದ್ದ ಲಕ್ಷ್ಮೀನಾರಾಯಣ ರಾವ್ ನೇತೃತ್ವದ ಯುವಕರ ಭಜನಾ ತಂಡಕ್ಕೆ ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟ ಕೋತಿಯ ಕಳೆಬರಹ‌ ಕಂಡಿದೆ. ಕೂಡಲೇ ಕೋತಿಯ ಮೃತದೇಹವನ್ನ…

Read more

ಹೊಳೆಗೆ ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ನೀರಿಗೆ ಬಿದ್ದು ಸಾವು

ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ಸಾಸ್ತಾನದ ಕೋಡಿ ಗ್ರಾಮದಲ್ಲಿ ಹೊಳೆಗೆ ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಸಾಸ್ತಾನದ ಯಕ್ಷಿಮಠ ನಿವಾಸಿ ರಾಜು ಮರಕಾಲ (66) ನೀರಿಗೆ ಬಿದ್ದು ಮೃತಪಟ್ಟವರು. ಇವರು ಹೊಳೆಯಲ್ಲಿ ಕಪ್ಪೆ…

Read more

ಬಸ್‌ಗೆ ಲಾರಿ ಡಿಕ್ಕಿ; ಓರ್ವ ವಿದ್ಯಾರ್ಥಿ ಗಂಭೀರ, ಹಲವರಿಗೆ ಗಾಯ

ಉಡುಪಿ : ಖಾಸಗಿ ಬಸ್ಸಿಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸಹಿತ ಹಲವು ಮಂದಿ ಗಾಯಗೊಂಡ ಘಟನೆ ಕುಂದಾಪುರ ತಲ್ಲೂರು ಪ್ರವಾಸಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66‌ರಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಬಸ್ ಬೈಂದೂರಿಂದ ಕುಂದಾಪುರಕ್ಕೆ ಬರುತ್ತಿತ್ತು.…

Read more