ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಆರೋಪ; ಕಾನ್‌ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು

ಮಣಿಪಾಲ : ಸಾರ್ವಜನಿಕವಾಗಿ ಸುಮಂತ್ ಎಂಬವರೊಂದಿಗೆ ಮಾ.27ರಂದು ಅಸಭ್ಯವಾಗಿ ವರ್ತಿಸಿದ ಪೊಲೀಸ್ ಕಾನ್‌ಸ್ಟೇಬಲ್ ಶರಣ ಬಸವ ಎಂಬವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.

ಈ ವಿಷಯವನ್ನು ಸುಮಂತ್ ಅವರು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದು, ಯಾವುದೇ ದೂರು ಬೇಡ ಎಂದು ತಿಳಿಸಿದ್ದರೂ, ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪೊಲೀಸ್ ಕಾನ್‌ಸ್ಟೇಬಲ್ ಶರಣ ಬಸವ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 92(0) ಮತ್ತು (ಆರ್)ರಂತ ಪ್ರಕರಣ ದಾಖಲಿಸಿಕೊಂಡಿದೆ. ಹಾಗೂ ಈ ಬಗ್ಗೆ ಸೂಕ್ತ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.

Related posts

ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಕೋಳಿ ಅಂಕದ ವಿಚಾರ ಮತ್ತೆ ಮುನ್ನೆಲೆಗೆ; ಉಡುಪಿ ಶಾಸಕರಿಗೆ ಕಾಂಗ್ರೆಸ್ ಟಾಂಗ್!

ಸಾವಿರಾರು ರೂ. ಚಾಕಲೇಟ್ ಕದ್ದೊಯ್ದ ಚಾಕಲೇಟ್ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ದಾಖಲು!