ತಲವಾರಿನಿಂದ ಹತ್ಯೆ ಯತ್ನ ಪ್ರಕರಣ; ಆರೋಪಿಗಳ ವಿರುದ್ಧ ಶೀಘ್ರ ಚಾರ್ಜ್ ಶೀಟ್ – ಉಡುಪಿ ಎಸ್ ಪಿ ಡಾ.ಅರುಣ್

ಉಡುಪಿ : ಉಡುಪಿಯಲ್ಲಿ ನಡೆದಿದ್ದ ತಲ್ವಾರಿನಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಿದ್ದು ಅವರ ವಿರುದ್ಧ ಶೀಘ್ರ ಚಾರ್ಜ್ ಶೀಟ್ ಸಲ್ಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕೆ. ಹೇಳಿದ್ದಾರೆ.

ಇದೇ ತಿಂಗಳ ಜೂನ್ 16ರಂದು ಉಡುಪಿಯಲ್ಲಿ ಈ ಘಟನೆ ನಡೆದಿತ್ತು. ಚರಣ್ ಮತ್ತು ಸ್ನೇಹಿತರ ಮೇಲೆ ಹಳೆ ದ್ವೇಷದಿಂದ ಯುವಕರ ಗುಂಪು ಉಡುಪಿಯ ಪುತ್ತೂರು ಎಂಬಲ್ಲಿ ತಲವಾರಿನಿಂದ ಕೊಲೆಯತ್ನ ಮಾಡಿತ್ತು. ಬಳಿಕ ಚರಣ್ ಅವರ ವಾಹನಕ್ಕೂ ದುಷ್ಕರ್ಮಿಗಳ ತಂಡ ಹಾನಿ ಉಂಟು ಮಾಡಿತ್ತು. ಈ ಸಂಬಂಧ ಅಭಿ, ಪ್ರವೀಣ್ ಕಟ್ಪಾಡಿ ಮತ್ತು ದೇಶ್‌ರಾಜ್ ಎಂಬ ಮೂವರನ್ನು ಬಂಧನ ಮಾಡಿದ್ದೇವೆ. ಶೀಘ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ