ಬ್ಯಾರಿಕೇಡ್‌ಗೆ ಢಿಕ್ಕಿಯಾಗಿ ಉರುಳಿಬಿದ್ದ ಕಾರು – ಎದೆ ಝಲ್ ಎನಿಸುವ ವೀಡಿಯೋ ವೈರಲ್

ಬಂಟ್ವಾಳ : ಗುಡ್ಡಕುಸಿತದ ಮುಂಜಾಗ್ರತೆಗಾಗಿ ರಸ್ತೆ ಬದಿ ಅಳವಡಿಸಿರುವ ಬ್ಯಾರಿಕೇಡ್‌ಗೆ ಢಿಕ್ಕಿಯಾಗಿ ಕಾರೊಂದು ಉರುಳಿ ಬಿದ್ದಿರುವ ಘಟನೆ ಬಂಟ್ವಾಳದ ಅಂಚಿಕಟ್ಟೆ ಕೊಪ್ಪಲ ಎಂಬಲ್ಲಿ ನಡೆದಿದೆ. ಈ ಕಾರ್ ಪಲ್ಟಿಯಾಗುವ ಎದೆ ಝಲ್ ಎನಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಬಂಟ್ವಾಳ-ಧರ್ಮಸ್ಥಳ ರಸ್ತೆಯ ಅಂಚಿಕಟ್ಟೆ ಕೊಪ್ಪಲ ಎಂಬಲ್ಲಿ ಗುಡ್ಡ ಕುಸಿತ ಆಗುತ್ತಿತ್ತು. ಆದ್ದರಿಂದ ಮುಂಜಾಗ್ರತೆಗಾಗಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಮಳೆ ಸುರಿಯುತ್ತಿದ್ದರಿಂದ ಬ್ಯಾರಿಕೇಡ್ ಗಮನಿಸದ ಕಾರೊಂದು ಬ್ಯಾರಿಕೇಡ್‌ಗೆ ಢಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿಯಾದ ಕಾರು ಉರುಳಿ ಬಿದ್ದಿದೆ. ಸದ್ಯ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಸದ್ಯ ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Related posts

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ

ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವು