ಟಿಪ್ಪರ್ ಡಿಕ್ಕಿ, ಕಂದಕಕ್ಕೆ ಉರುಳಿದ ಕಾರು

ಉಡುಪಿ : ಟಿಪ್ಪ‌ರ್ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಉಡುಪಿಯ ರಾ.ಹೆ.66ರ ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ನಿನ್ನೆ (ಮಾ.20) ಮಧ್ಯಾಹ್ನ ಸಂಭವಿಸಿದೆ.

ಕಾರಿನಲ್ಲಿದ್ದ ನಾಗರಾಜ್, ಅಭಿಜಿತ್ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.

ಸಂತೆಕಟ್ಟೆಯ ಖಾಸಗಿ ಸೊಸೈಟಿಯ ಸಿಬಂದಿ ಕಾರಿನಲ್ಲಿ ಉಡುಪಿಯಿಂದ ಸಂತೆಕಟ್ಟೆ ಶಾಖೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳೀಯರು ಟಿಪ್ಪರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆಯಿತು. ಉಡುಪಿ ಸಂಚಾರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಮಾಹೆಯಲ್ಲಿ ಫಿಲಿಪ್ಸ್ ಐಜಿಟಿ ಇಂಜಿನಿಯರ್ಸ್ ಕ್ಲಿನಿಕಲ್ ಕನ್ಸಲ್ಟೆನ್ಸಿ

ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್‌ ದುರ್ಬಳಕೆ ತಡೆಗೆ ಕ್ರಮ : ಪೊಲೀಸ್‌ ಕಮಿಷನರ್‌

ಕರ್ನಾಟಕ ಬಂದ್‌ಗೆ ಖಾಸಗಿ ಬಸ್ ಮಾಲಕರ ಸಂಘದ ನೈತಿಕ ಬೆಂಬಲ; ರಾಜ್ಯಾದ್ಯಂತ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ