ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾವು

ಹೆಬ್ರಿ : ಶಿವಪುರ ಗ್ರಾಮದ ರಾಂಪುರ ಎಂಬಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಶಿವಪುರ ಮೂರ್ಸಾಲು ನಿವಾಸಿ ರಾಹುಲ್‌ (25) ಮೃತಪಟ್ಟ ಘಟನೆ ಸಂಭವಿಸಿದೆ.

ಎದುರುಗಡೆಯಿಂದ ಸ್ವಿಪ್ಟ್ ಕಾರಿನ ಚಾಲಕ ಅರುಣ್‌ ಅತೀ ವೇಗವಾಗಿ ಮತ್ತು ಅಜಾರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.

ಅವರನ್ನು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫ‌ಲಕಾರಿಯಾಗದೆ ಸಾವನ್ನಪ್ಪಿದರು. ರಾಹುಲ್ ಮುಳ್ಳುಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ