ಉಡುಪಿ ಮೂಲದವರಿದ್ದ ಕಾರ್ ಮೈಸೂರಿನಲ್ಲಿ ಪಲ್ಟಿ; ಮಗು ಮೃತ್ಯು; ಐವರು ಗಂಭೀರ

ಮೈಸೂರು : ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 2 ವರ್ಷದ ಮಗು ಮೃತಪಟ್ಟಿದ್ದು ಒಂದೇ ಕುಟುಂಬದ ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿ ಸೋಮವಾರ ಸಂಜೆ ನಡೆದಿದೆ.

ಬೆಂಗಳೂರಿನ ನಿವಾಸಿ ನರೇಶ್ ಅವರ ಪುತ್ರಿ ಮೈಥಿಲಿ (2) ಮೃತ ಬಾಲಕಿ. ಕಾರಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.

ಮೂಲತಃ ಉಡುಪಿ ನಿವಾಸಿಯಾದ ನರೇಶ್ ಅವರು ಕುಟುಂಬ ಸಮೇತ ಕೇರಳದ ವಯನಾಡಿಗೆ ತೆರಳಿದ್ದು ಸೋಮವಾರ ಸಂಜೆ ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಕಾರಿನಲ್ಲಿದ್ದ ನರೇಶ್, ಅವರ ಪತ್ನಿ ಸಂಧ್ಯಾ, ಭಾಮೈದ ಸಂದೇಶ್, ಡಾ| ಲಿಖಿತಾ, ನರೇಶ್ ಅತ್ತೆ ಮನೋರಮಾ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ