ಕಾರು ಮತ್ತು ಪಿಕಪ್‌ ವಾಹನ ಮುಖಾಮುಖಿ ಢಿಕ್ಕಿ; ಕಾರು ಚಾಲಕ ಗಂಭೀರ

ಕಾರ್ಕಳ : ಕಾರು ಮತ್ತು ಪಿಕಪ್‌ ವಾಹನ ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಎ. 24ರಂದು ಕಾರ್ಕಳ ಹೆಬ್ರಿ ಮುಖ್ಯರಸ್ತೆಯ ಹಿರ್ಗಾನ ಚಿಕ್ಕಲ್‌ ಬೆಟ್ಟು ಕ್ರಾಸ್‌ನಲ್ಲಿ ಸಂಭವಿಸಿದೆ.

ಅಜೆಕಾರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಇಕೋ ಕಾರು ಮತ್ತು ಜೋಡುರಸ್ತೆಯಿಂದ ಅಜೆಕಾರು ಕಡೆಗೆ ಸಾಗುತ್ತಿದ್ದ ಕೋಳಿ ಸಾಗಾಟದ ಪಿಕಪ್‌ ವಾಹನದ ನಡುವೆ ಢಿಕ್ಕಿಯಾಗಿದ್ದು ಪರಿಣಾಮವಾಗಿ ಕಾರು ಚಾಲಕ ಎಳ್ಳಾರೆ ನಿವಾಸಿ ಶ್ರೀನಿವಾಸ ಭಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಟಿಎಂಎಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ