ಮೆಸ್ಕಾಂ ಉದ್ಯೋಗಿಯ ಕುಟುಂಬಕ್ಕೆ ಕೆನರಾ ಬ್ಯಾಂಕ್ ಮೂಲಕ ರೂ 60 ಲಕ್ಷ ಹಸ್ತಾಂತರ

ಮಂಗಳೂರು : ಮೆಸ್ಕಾಂ ಉದ್ಯೋಗಿ‌ಯಾಗಿದ್ದ ರಘು ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತ ಪಟ್ಟ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಮೆಸ್ಕಾಂ ಉದ್ಯೋಗಿಗಳ ಖಾತೆ ಹೊಂದಿದ್ದ ಬ್ಯಾಂಕ್ ಗ್ರಾಹಕ ರಘು ಅವರ ಕುಟುಂಬದ ನಾಮ ನಿರ್ದೇಶಿತರಾದ ದಮಯಂತಿಯ‌‌ವರಿಗೆ ಕೆನರಾ ಬ್ಯಾಂಕ್ ಗ್ರಾಹಕ ಅಪಘಾತ ವಿಮಾ ಯೋಜನೆಯ ಮೊತ್ತ ರೂ.60ಲಕ್ಷ ರೂ ನೀಡಿದೆ.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್ ಹಾಗೂ ಕೆನರಾ ಬ್ಯಾಂಕ್‌ನ ಮಂಗಳೂರು ವೃತ್ತ ಕಚೇರಿಯ ಡಿಜಿಎಂ ಶೈಲೇಂದ್ರ‌ನಾಥ್ ಶೇಟ್ ರೂ.60 ಲಕ್ಷದ ಚೆಕ್‌ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ರೀಜನ್ ಆಫೀಸಿನ ಮುಖ್ಯಸ್ಥ ಉಮಾಶಂಕರ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Related posts

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

ಬಾವಿಗೆ ಬಿದ್ದು ಕೃಷಿಕ ಮೃತ್ಯು