ಸ್ಕೂಟರ್‌ನಲ್ಲಿ ಬಂದು ಹೆಲ್ಮೆಟ್ ಕಳವು? – ವೀಡಿಯೋ ವೈರಲ್

ಮಂಗಳೂರು : ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಪಾರ್ಕ್ ಮಾಡಲಾಗಿದ್ದ ಬೈಕ್‌ನಿಂದ ಹೆಲ್ಮೆಟ್ ಎಗರಿಸಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ‌. ಈ ಕೃತ್ಯ ನಗರದ ಬಿಜೈ ಪರಿಸರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ದ್ವಿಚಕ್ರ ವಾಹನದಲ್ಲಿ ಮೂವರು ಯುವಕರು ಆಗಮಿಸುತ್ತಾರೆ. ಮೂವರಲ್ಲಿ ಓರ್ವನು ವಾಹನದಿಂದ ಇಳಿದು ಹಿಂದಿರುಗಿ ತೆರಳುತ್ತಾನೆ. ಮತ್ತೋರ್ವನು ಅಲ್ಲಿಯೇ ಪಾರ್ಕ್ ಮಾಡಿದ್ದ ಬೈಕ್‌ನಿಂದ ಹೆಲ್ಮೆಟ್ ತೆಗೆದುಕೊಂಡು ಸ್ಕೂಟರ್‌ನಲ್ಲಿ ಕೂರುತ್ತಾನೆ‌. ಸ್ಕೂಟರ್ ಅನ್ನು ಸವಾರ ಯೂಟರ್ನ್ ಹೊಡೆದು ಮರಳಿ ಬಂದ ದಾರಿಯತ್ತ ಚಲಾಯಿಸುತ್ತಾನೆ. ಇಳಿದು ಅನತಿ ದೂರ ಸಾಗಿದವನು ಮತ್ತೆ ಸ್ಕೂಟರ್ ಹತ್ತಿ ತ್ರಿಪ್ಪಲ್ ರೈಡಿಂಗ್‌ನಲ್ಲಿ ಸಂಚರಿಸುತ್ತಾರೆ‌. ವಿಶೇಷವೆಂದರೆ ಮೂವರೂ ಹೆಲ್ಮೆಟ್ ಧರಿಸಿಲ್ಲ.

ಸದ್ಯ ಕಳ್ಳರು ಹೆಲ್ಮೆಟ್ ಎಗರಿಸುತ್ತಿದ್ದಾರೆ ಎಂದು ವೀಡಿಯೋ ವೈರಲ್ ಆಗ್ತಿದೆ. ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಗಮನಹರಿಸಬೇಕಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ