ಡಿಸೆಂಬರ್ 27-28ರಂದು ಸಿಎ ವಿದ್ಯಾರ್ಥಿಗಳ ಸಮ್ಮೇಳನ

ಉಡುಪಿ : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ಉಡುಪಿ ಶಾಖೆಯ ಆಶ್ರಯದಲ್ಲಿ “ಲೆಕ್ಕಪರಿಶೋಧನ ವಿದ್ಯಾರ್ಥಿಗಳಿಗಾಗಿ ಸಮ್ಮೇಳನ”ವನ್ನು ಇದೇ ಡಿ.27 ಮತ್ತು 28ರಂದು ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಕಿರಣ್ ಕುಮಾರ್ ಎಚ್. ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮೆಗಾ ಸಮ್ಮೇಳನದಲ್ಲಿ ದಕ್ಷಿಣ ಭಾರತದ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಐಸಿಎಐ ಉಪಾಧ್ಯಕ್ಷ ಚರಣ್ ಜೊತ್‌ ಸಿಂಗ್ ನಂದಾ ಉದ್ಘಾಟಿಸಲಿದ್ದಾರೆ.

ಆ ಬಳಿಕ ಟ್ಯಾಕ್ಸೇಶನ್, ಜಿಎಸ್‌ಟಿ ಆಡಿಟಿಂಗ್, ಐಎನ್‌ಡಿ‌ಎಸ್ ಇತ್ಯಾದಿ ವಿಷಯಗಳ ಬಗ್ಗೆ ತಾಂತ್ರಿಕ ಗೋಷ್ಠಿ ನಡೆಯಲಿದೆ. ಡಿಜಿಟಲ್ ಟ್ರಾನ್ಸ್ ಫಾರ್ಮೇಶನ್ ಮತ್ತು ಎಥಿಕಲ್ ಲೀಡರ್‌ಶಿಪ್ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ.

ಲೆಕ್ಕಪರಿಶೋಧಕರಾದ ಗೋಪಾಲಕೃಷ್ಣ ರಾಜು, ಪಟ್ಟಾಭಿರಾಮ್, ಶಿರಿಶ್ ವ್ಯಾಸ ಅವರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಸಂಜೆ ಮನೋರಂಜನ ಕಾರ್ಯಕ್ರಮ ನಡೆಯಲಿದೆ. ಡಿ.28ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಖೆಯ ಉಪಾಧ್ಯಕ್ಷೆ ಅರ್ಚನಾ ಆರ್. ಮಯ್ಯ, ಕಾರ್ಯದರ್ಶಿ ರಾಘವೇಂದ್ರ ಮೊಗೆರಾಯ, ಸಿಕಾಸ ಅಧ್ಯಕ್ಷ ಲಕ್ಷ್ಮೀಶ್ ರಾವ್, ಖಜಾಂಚಿ ಅಶ್ವತ್ಥ್ ಜೆ. ಶೆಟ್ಟಿ ಉಪಸ್ಥಿತರಿದ್ದರು.

Related posts

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ರಾಷ್ಟ್ರೀಯ ವೀರ ಬಾಲ ದಿನ ಆಚರಣೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ – ನಗರದಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು

ಡ್ರಿಂಕ್ ಅಂಡ್ ಡ್ರೈವ್‌ನಿಂದ ಅಪಘಾತ – ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ಸವಾರರಿಗೆ ಗಾಯ