ಬೈಂದೂರು ಮನೆಕಳ್ಳತನ ಪ್ರಕರಣ : ಮೂವರು ಆರೋಪಿಗಳ ಬಂಧನ

ಬೈಂದೂರು : ಮನೆಗೆ ಬೀಗ ಹಾಕಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೈಂದೂರು ಉಪ್ಪುಂದ ನಿವಾಸಿಗಳಾದ ಯತಿರಾಜ್, ಮಹೇಶ್ ಯಳಜಿತ್ ಹಾಗೂ ನಾಗೂರು ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ.

ಮಾರ್ಚ್ 10 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನಲ್ಲಿರುವ ಜನಾರ್ದನ ಎಂಬವರು ರಾತ್ರಿ ಮನೆಗೆ ಬೀಗ ಹಾಕಿ ಮನೆ ಸಮೀಪದ ಯಕ್ಷಗಾನ ಕಾರ್ಯಕ್ರಮಕ್ಕೆ ಮನೆಯವರೊಂದಿಗೆ ಹೋದವರು ವಾಪಾಸು ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ಬಂದು ನೋಡುವಾಗ ಯಾರೋ ಮನೆಯ ಬಾಗಿಲು ಮುರಿದು ಮನೆಯೊಳಗೆ ಹೋಗಿ ಕೊಠಡಿಯ ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್ಟಾಪ್ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಕುರಿತು ತನಿಖೆ ನಡೆಸಿದ ಬೈಂದೂರು ವೃತ್ತ ನಿರೀಕ್ಷಕರಾದ ಸವಿತೃತೇಜ, ಬೈಂದೂರು ಠಾಣೆಯ ಪಿ.ಎಸ್.ಐ ರವರಾದ ತಿಮ್ಮೇಶ್ ಬಿ.ಎನ್ ಮತ್ತು ನವೀನ ಪಿ. ಬೋರಕರ ಮತ್ತು ಬೈಂದೂರು ಠಾಣೆಯ ಸಿಬ್ಬಂದಿಯವರಾದ ಚಿದಾನಂದ, ಮಾಳಪ್ಪ, ಪರಯ್ಯ ಮಠಪತಿ, ನವೀನ್ ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಯವರಾದ ರವೀಂದ್ರ, ಅಶೋಕ ರಾಥೋಡ್, ಶಂಕರ ಮತ್ತು ಚಂದ್ರರವರ ತಂಡ ಆರೋಪಿಗಳನ್ನು ಬಂಧಿಸಿ ಆರೋಪಿಗಳು ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್ಟಾಪ್ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್ಗಳು ಸೇರಿ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

Related posts

ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಕೋಳಿ ಅಂಕದ ವಿಚಾರ ಮತ್ತೆ ಮುನ್ನೆಲೆಗೆ; ಉಡುಪಿ ಶಾಸಕರಿಗೆ ಕಾಂಗ್ರೆಸ್ ಟಾಂಗ್!

ಸಾವಿರಾರು ರೂ. ಚಾಕಲೇಟ್ ಕದ್ದೊಯ್ದ ಚಾಕಲೇಟ್ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ದಾಖಲು!