ಬೈಂದೂರು ದಸರಾ 2024 – ಸಂಗೀತ ರಸಮಂಜರಿ, ಅದ್ದೂರಿಯ ಕ್ರೀಡಾಕೂಟ

ಬೈಂದೂರು : ಬೈಂದೂರಿನ ಐತಿಹಾಸಿಕ ಪ್ರಸಿದ್ದ ಮಹಾತೋಬಾರ ಸೇನೇಶ್ವರ ದೇವಸ್ಥಾನ ಇದರ ಶಾರದೋತ್ಸವದ ಪ್ರಯುಕ್ತ ಅದ್ದೂರಿಯ ಬೈಂದೂರು ದಸರಾ-2024 ಕಾರ್ಯಕ್ರಮ ಅಕ್ಟೋಬರ್ 03 ರಿಂದ 12ರ ವರೆಗೆ ಬೈಂದೂರು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ.

ನವರಾತ್ರಿ ಮೊದಲ ದಿನ ಶಿರೂರು ಪೇಟೆ ವೆಂಕಟರಮಣ ಸಭಾ ಭವನದಲ್ಲಿ ಪ್ರಸಿದ್ದ ಕಲಾ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಬೈಂದೂರು ದಸರಾ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಅವರು ಶಿರೂರು ಪೇಟೆ ವೆಂಕಟರಮಣ ಸಭಾ ಭವನದಲ್ಲಿ ಶಿರೂರು ಪ್ರಮುಖರ ಸಮ್ಮಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಈ ಬಾರಿ ಅದ್ದೂರಿಯ ಬೈಂದೂರು ದಸರಾ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ವಿವಿದ ಕಡೆ ರಾಜ್ಯದ ಪ್ರಸಿದ್ದ ಕಲಾ ತಂಡಗಳ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪ್ರತಿ ಊರಿನ ಪ್ರಮುಖರು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರಾಜೇಶ್ ಬೈoದೂರು, ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ, ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್‍ಮಕ್ಕಿ, ರವೀಂದ್ರ ಶೆಟ್ಟಿ ಪಟೇಲ್, ಉದಯ ಪೂಜಾರಿ ಮೈದಿನಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ, ರವೀಂದ್ರ ಶೆಟ್ಟಿ ಹೊನ್ಕೇರಿ, ಜಗದೀಶ ಆಲಂದೂರು, ನಾಗರಾಜ ಪೂಜಾರಿ, ಯೋಗೀಶ್ ಪೂಜಾರಿ ಜೋಗುರು ಹಾಜರಿದ್ದರು.

ಬೈಂದೂರಿನಲ್ಲಿ ಬೃಹತ್ ದಸರಾ ಕ್ರೀಡಾಕೂಟ
ದಸರಾ ಪ್ರಯುಕ್ತ ಬೈಂದೂರಿನಲ್ಲಿ ಬೃಹತ್ ದಸರಾ ಕ್ರೀಡಾಕೂಟ ಅ.06 ರಂದು ಪೂರ್ವಾಹ್ನ 09 ಗಂಟೆಗೆ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಅ.09 ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ. ಮದ್ಯಾಹ್ನ ಪೂಜೆ ವಿಶೇಷ ಅಲಂಕಾರ ಪೂಜೆ,ವಿವಿಧ ಸ್ಪರ್ಧೆಗಳು ಹಾಗೂ ರಾತ್ರಿ ಪೂಜೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈಭವ ನಡೆಯಲಿದೆ.

ಅ.10 ರಂದು ಬೆಳಿಗ್ಗೆ ದುರ್ಗಾಹೋಮ ಹಾಗೂ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಸಂಜೆ ಜನತಾ ಫ್ರೌಢಶಾಲೆ ಹೆಮ್ಮಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಡಾನ್ಸ್ ಧಮಕಾ ನಡೆಯಲಿದೆ.

ಅ.11 ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಹೋಮ, ಮದ್ಯಾಹ್ನ ಅನ್ನಸಂತರ್ಪಣೆ, ಸಂಜೆ ಜಿಲ್ಲೆಯ ಪ್ರಸಿದ್ದ ತಂಡದವರಿಂದ ಸಂಗೀತ ರಸಮಂಜರಿ ನಡೆಯಲಿದೆ.

ಅ.12 ರಂದು ಸಂಜೆ ಶಾರದಾ ದೇವಿಯ ವಿಗ್ರಹದ ಅದ್ದೂರಿ ಪುರ ಮೆರವಣಿಗ ನಡೆಯಲಿದೆ. ನಗರೋತ್ಸವದಲ್ಲಿ ದೇವರ ಭವ್ಯ ಟ್ಯಾಬ್ಲೋ, ಕೀಲುಕುದುರೆ, ನವಿಲು ನೃತ್ಯ, ಮರಕಾಲು, ಕಥಕ್ಕಳಿ, ಚೆಂಡ ವಾದನ, ಹುಲಿವೇಷ ವಿವಿಧ ಆಕರ್ಷಣೆಗಳಿರಲಿದೆ ಎಂದು ಬೈಂದೂರು ದಸರಾ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ